Advertisement

ಜೂನ್‌ನಲ್ಲಿಯೇ ಪ್ಲಾಸ್ಟಿಕ್‌ ಪಾರ್ಕ್‌ಗೆ ಶಿಲಾನ್ಯಾಸ: ಸಂಸದ ನಳಿನ್‌

11:46 PM Jun 03, 2023 | Team Udayavani |

ಕೈಕಂಬ: ಜೂನ್‌ನಲ್ಲಿಯೇ ಪ್ಲಾಸ್ಟಿಕ್‌ ಪಾರ್ಕ್‌ಗೆ ಕೇಂದ್ರ ರಸಗೊಬ್ಬರ ಹಾಗೂ ರಾಸಾ ಯನಿಕ ಖಾತೆ ಸಚಿವ ಭಗವಂತ ಖೂಬಾ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಕೋಸ್ಟ್‌ಗಾರ್ಡ್‌ ತರಬೇತಿ ಕೇಂದ್ರಕ್ಕೂ ಶಿಲಾನ್ಯಾಸ ನೆರವೇರಿಸುವ ಉದ್ದೇಶ ಇದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು ಶನಿವಾರ ಗಂಜಿಮಠದಲ್ಲಿನ ಪ್ಲಾಸ್ಟಿಕ್‌ ಪಾರ್ಕ್‌ನಲ್ಲಿ ನಡೆಯುವ ಕಾಮಗಾರಿಗಳ ಪರಿಶೀಲನೆ ಹಾಗೂ ಅಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರೆದ ಸಭೆಯಲ್ಲಿ ಮಾತನಾಡಿದರು.

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಉದ್ಯಮಿಗಳಿಗೆ ಆದ್ಯತೆ ನೀಡುವ ಯೋಚನೆ, ಕೌಶಲಾಭಿವೃದ್ಧಿ ಮೂಲಕ ಪ್ರತಿಭೆಗಳಿಗೆ ಅವಕಾಶ ಕೊಡಬೇಕು, ಮೇಕಿನ್‌ ಇಂಡಿಯಾ ಅಧಾರದಲ್ಲಿ ಸ್ವದೇಶಿ ಉದ್ಯಮಿಗಳಿಗೆ ಅದ್ಯತೆ ಕೊಡಬೇಕೆಂಬ ಪರಿಕಲ್ಪನೆಯಡಿಯಲ್ಲಿ ಸರಕಾರ ಯೋಜನೆಗಳನ್ನು ಮಾಡಿತು. ಅಂದಿನ ಕೇಂದ್ರ ಸಚಿವ ಅನಂತ ಕುಮಾರ್‌ ಮಂಗಳೂರಿಗೆ ಬಂದಾಗ ಮಂಗಳೂರಿಗೆ ಕೊಡುಗೆ ಕೊಡಬೇಕೆಂದು ಅವರಲ್ಲಿ ಬೇಡಿಕೆಯನ್ನಿಟ್ಟಿದ್ದು, ಆಗ ಪ್ಲಾಸ್ಟಿಕ್‌ ಪಾರ್ಕ್‌ನ ಘೋಷಣೆ ಮಾಡಿದ್ದರು ಎಂದರು.

ಕೋಸ್ಟ್‌ಗಾರ್ಡ್‌ ತರಬೇತಿ ಕೇಂದ್ರ
ಕೋಸ್ಟ್‌ಗಾರ್ಡ್‌ ತರಬೇತಿ ಕೇಂದ್ರವನ್ನು ಮಂಗಳೂರಿಗೆ ತರುವ ಪ್ರಯತ್ನವಾಗಿದೆ. ಪೂರಕ ಕಾಮಗಾರಿಗಳು ನಡೆಯುತ್ತಿವೆ. ಕುಳಾçಯಲ್ಲಿ ಮೀನುಗಾರಿಕೆ ಜೆಟ್ಟಿ ನಿರ್ಮಾಣಕ್ಕೆ ನರೇಂದ್ರ ಮೋದಿಯವರ ಸರಕಾರ 250 ಕೋಟಿ ರೂ. ಅನುದಾನ ಕೊಟ್ಟು ಇಂದು ಕಾಮಗಾರಿ ಪ್ರಾರಂಭವಾಗಿದೆ. ಇದರಿಂದಾಗಿ ಮೀನುಗಾರಿಕೆ ಜೆಟ್ಟಿ, ಪ್ಲಾಸ್ಟಿಕ್‌ ಪಾರ್ಕ್‌, ಕೋಸ್ಟ್‌ಗಾರ್ಡ್‌ 3 ಕಾಮಗಾರಿಗಳು ಶಾಸಕ ಡಾ| ಭರತ್‌ ಶೆಟ್ಟಿಯವರ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

60 ಎಕರೆಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌
ಗಂಜಿಮಠದ 60 ಎಕರೆ ಜಾಗದಲ್ಲಿ ಪ್ಲಾಸ್ಟಿಕ್‌ ಅಧಾರಿತ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಗೋದಾಮುಗಳು, ಪ್ರಯೋಗಳನ್ನೊಳಗೊಂಡಿದೆ. ಕೆಐಎಡಿಬಿ ಅನುಷ್ಠಾನ ಸಂಸ್ಥೆಯಾಗಿದೆ. ಈಗಾಗಲೇ 39 ಉದ್ಯಮಿಗಳು ಮುಂದೆ ಬಂದಿದ್ದಾರೆ. ಒಟ್ಟು 96 ಎಕರೆ ಜಾಗದ ಆವಶ್ಯಕತೆ ಇದೆ ಎಂದು ಕೆಐ ಡಿಬಿಯ ಎಂಜಿನಿಯರ್‌ ಗಣಪತಿ ಹೇಳಿದರು.

Advertisement

ಕೆನರಾ ಪ್ಲಾಸ್ಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಮಹಮ್ಮದ್‌ ನಝೀರ್‌, ಶಾಸಕ ಡಾ| ಭರತ್‌ ಶೆಟ್ಟಿ, ಗಂಜಿಮಠ ಗ್ರಾ.ಪಂ. ಅಧ್ಯಕ್ಷ ನೋಣಯ್ಯ ಕೋಟ್ಯಾನ್‌, ಭೂಸ್ವಾಧೀನ ಅಧಿಕಾರಿ ಬಿನಾೖಯ್‌ ಮೊದಲಾದವರಿದ್ದರು. ದ.ಕ. ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌ ಪ್ರಸ್ತಾವನೆಗೈದು, ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next