Advertisement
ಇದರಿಂದ ಸಾವಿರಾರು ಮಂದಿಗೆ ಉದ್ಯೋಗಾವಕಾಶ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.
Related Articles
ನಗರದ ಗಂಜಿಮಠ ಪರಿಸರದಲ್ಲಿ ಕೇಂದ್ರ ಸರಕಾರದ ಬಹುನಿರೀಕ್ಷಿತ “ಪ್ಲಾಸ್ಟಿಕ್ ಪಾರ್ಕ್’ ಯೋಜನೆ ಸಾಕಾರಗೊಳ್ಳಲು ಸದ್ಯ ಹಸುರು ನಿಶಾನೆ ದೊರೆತಿರುವ ಸಂದರ್ಭದಲ್ಲಿಯೇ ಎಂಆರ್‌ಪಿಎಲ್ ವತಿಯಿಂದ ಒಎಂಪಿಎಲ್ ಕೂಡ ನಿರ್ವಹಣೆ ಆಗುತ್ತಿರುವುದು ಗಮನಿಸಬೇಕಾದ ಅಂಶ. ಯಾಕೆಂದರೆ ಒಎಂಪಿಎಲ್‌ನಲ್ಲಿಯೂ ಪ್ಲಾಸ್ಟಿಕ್ ಸಂಬಂಧಿತ ಉತ್ಪನ್ನಗಳೇ ಹೆಚ್ಚು ಉತ್ಪಾದನೆ ಆಗುತ್ತಿದ್ದು, ಪ್ಲಾಸ್ಟಿಕ್ ಪಾರ್ಕ್‌ನಲ್ಲಿಯೂ ಇದೇ ಮಾದರಿಯ ವಿವಿಧ ಉತ್ಪನ್ನಗಳು ತಯಾರಾಗಲಿವೆ. ಇದರಿಂದಾಗಿ ಕರಾವಳಿಯಲ್ಲಿ “ಪ್ಲಾಸ್ಟಿಕ್ ಹಬ್’ ನಿರ್ಮಾಣವಾಗುವ ಎಲ್ಲ ಸಾಧ್ಯತೆ ಇದೆ.
Advertisement
ಕರಾವಳಿಯಲ್ಲಿಉತ್ಪಾದನಾ ಕ್ರಾಂತಿ ಕರಾವಳಿಯಲ್ಲಿ ಬೃಹತ್ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದ್ದು, ಈ ಮೂಲಕ ಕರಾವಳಿಯಲ್ಲಿ ಬಹುದೊಡ್ಡ ಉದ್ಯೋಗ ಹಾಗೂ ಉತ್ಪಾದನಾ ಕ್ರಾಂತಿ ನಡೆಯಲಿದೆ. ಜತೆಗೆ ಒಎಂಪಿಎಲ್‌ನ ಷೇರು ಎಂಆರ್‌ಪಿಎಲ್ ಪಡೆಯುವ ಮೂಲಕ ಅಲ್ಲಿಯೂ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಹೀಗಾಗಿ ಕರಾವಳಿ ಭಾಗ ಮುಂದೆ ಪ್ಲಾಸ್ಟಿಕ್ ಹಬ್ ಮಾದರಿಯಲ್ಲಿ ಜನಾಕರ್ಷಣೆ ಪಡೆಯಲಿದೆ.
– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು ಎಂಆರ್‌ಪಿಎಲ್ ಷೇರು ಶೇ.99.99ಕ್ಕೆ ಏರಿಕೆ
ಈ ಹಿಂದಿನ ನಿರ್ದೇಶಕ ಮಂಡಳಿ ಸಭೆಯಲ್ಲಿ ನಿರ್ಧರಿಸಿರುವಂತೆ ಒಎನ್‌ಜಿಸಿಯ ಸಹಸಂಸ್ಥೆಯಾದ ಒಎಂಪಿಎಲ್‌ನ 1,24,66,53,746 ಈಕ್ವಿಟಿ ಷೇರು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಜ. 1ರಂದು ಒಎಂಪಿಎಲ್‌ನಿಂದ ಎಂಆರ್‌ಪಿಎಲ್‌ನ ಖಾತೆಗೆ ಷೇರು ವರ್ಗಾಯಿಸಿದೆ. ಈ ಮೂಲಕ ಒಎಂ ಪಿಎಲ್‌ನಲ್ಲಿ ಎಂಆರ್‌ಪಿಎಲ್‌ನ ಷೇರು ಹೋಲ್ಡಿಂಗ್ ಶೇ 99.9998ಕ್ಕೇರಿಕೆಯಾಗಿದೆ.
– ಎಂ.ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್ – ದಿನೇಶ್ ಇರಾ