Advertisement

ಪ್ಲಾಸ್ಟಿಕ್‌ ಭೂತಕ್ಕೆ ರಾಮಬಾಣ

08:55 AM Apr 20, 2018 | Karthik A |

ಹ್ಯಾಂಪ್‌ಶೈರ್‌: ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂಬಂತಾಗಿರುವ ಪ್ಲಾಸ್ಟಿಕ್‌, ಈಗ  ಪರಿಸರ ವಿಜ್ಞಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಪ್ಲಾಸ್ಟಿಕ್‌ ಅನ್ನು ತಿಂದು ಮುಗಿಸುವ  ಹೊಸ ಕಿಣ್ವಗಳನ್ನು ಇಂಗ್ಲೆಂಡ್‌ನ‌ ಹ್ಯಾಂಪ್‌ಶೈರ್‌ ಜಿಲ್ಲೆಯ ಪೋರ್ಟ್ಸ್ಮೌತ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೃಷ್ಟಿಸಿದ್ದು, ಪರಿಸರ ಸ್ವಾಸ್ಥ್ಯ ವಿಚಾರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

Advertisement

ಹೊಸ ಕಿಣ್ವ ಯಾವುದು?: ಇವು ಜೈವಿಕ ವೇಗವರ್ಧಕ (ಬಯೋಲಜಿಕಲ್‌ ಕೆಟಾಲಿಸ್ಟ್‌) ಮಾದರಿಯ ಕಿಣ್ವಗಳೆಂದು ಹೇಳಲಾಗಿದೆ. ಇವು, ಎಲ್ಲಾ ಬಗೆಯ ಪ್ಲಾಸ್ಟಿಕ್‌ ತಿನ್ನಬಲ್ಲ, ಪ್ಲಾಸ್ಟಿಕ್‌ ಕಣಗಳ ನಡುವಿನ ರಾಸಾಯನಿಕ ಬಾಂಡಿಂಗ್‌ಗಳನ್ನು ತುಂಡರಿಸಿ, ಪ್ಲಾಸ್ಟಿಕ್‌ ಅನ್ನು ಪುಡಿಮಾಡಿ ತಿನ್ನಬಲ್ಲವು.

ಆಕಸ್ಮಿಕ ಜನನ!: 2016ರಲ್ಲಿ ಜಪಾನ್‌ನ ವಿಜ್ಞಾನಿಗಳು ಪಾಲಿಥಿಲೀನ್‌ ಎಂಬ ಮಾದರಿಯ ಪ್ಲಾಸ್ಟಿಕ್‌ ಅನ್ನು ತಿಂದು ಬದುಕುವ ಬ್ಯಾಕ್ಟೀರಿಯಾಗಳನ್ನು ಸಂಶೋಧಿಸಿದ್ದರು. ಇದು ಪರಿಸರ ಸಂರಕ್ಷಣೆಯಲ್ಲೇ ಒಂದು ಆಶಾಕಿರಣ ಮೂಡಿಸಿದ ಬ್ಯಾಕ್ಟೀರಿಯಾ ಎಂದು ಹೇಳಲಾಗಿತ್ತು. ಇದೀಗ, ಇದೇ ಬ್ಯಾಕ್ಟೀರಿಯಾ ಮೇಲೆ ಸಂಶೋಧನೆ ನಡೆಸುತ್ತಿದ್ದ ಬ್ರಿಟನ್‌ ಹಾಗೂ ಅಮೆರಿಕ ವಿಜ್ಞಾನಿಗಳ ತಂಡವೊಂದು ಅಕಸ್ಮಾತ್‌ ಆಗಿ ಈ ಹೊಸ ಕಿಣ್ವಗಳನ್ನು ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next