Advertisement

‘ನೆಡುವ ಗಿಡಗಳನ್ನು ಸಂರಕ್ಷಿಸುವುದು ಅತ್ಯಗತ್ಯ’

08:25 AM Jul 29, 2017 | Team Udayavani |

ಬಂಟ್ವಾಳ: ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಗಿಡವನ್ನು ಕೊಂಡುಹೋಗಿ ನೆಟ್ಟರೆ ಸಾಲದು, ಅದನ್ನು ಸಂರಕ್ಷಿಸಿ ಬೆಳೆಸುವ ಕೆಲಸ ಆಗಬೇಕು. ನಮ್ಮ ಪರಿಸರದ ಸ್ವಚ್ಛತೆ ದಿನನಿತ್ಯದ ವಿಚಾರವಾಗಬೇಕು. ಹಸುರಿನಿಂದ ಉಸಿರು ಎಂಬುದನ್ನು ಮರೆಯಬಾರದು ಎಂದು ಹಿರಿಯ ಸಾಮಾಜಿಕ ಸೇವಾಕರ್ತ ಕೈಯ್ಯೂರು ನಾರಾಯಣ ಭಟ್‌ ಹೇಳಿದರು.

Advertisement

ಅವರು ಕೊಳ್ನಾಡು ಮಂಚಿ ಶ್ರೀಕ್ಷೇತ್ರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಸಾಲೆತ್ತೂರು ವಲಯ, ರೋಟರಿ ಕ್ಲಬ್‌ ಬಂಟ್ವಾಳ,  ಶ್ರೀಕ್ಷೇತ್ರ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಜಂಟಿ ಆಶ್ರಯದಲ್ಲಿ ದೇಗುಲದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬಂಟ್ವಾಳ ರೋಟರಿ  ಕ್ಲಬ್‌ ಕಾರ್ಯದರ್ಶಿ ನಾರಾಯಣ ಹೆಗ್ಡೆ ಮಾತನಾಡಿ, ರೋಟರಿ ಜಿಲ್ಲೆ 3181 ಈ ವರ್ಷ ಲಕ್ಷ ಗಿಡಗಳನ್ನು ನೆಡುವ ಗುರಿ ಇರಿಸಿಕೊಂಡು ಪರಿಸರ ರಕ್ಷಣೆಯ ವಿಚಾರದಲ್ಲಿ ಪ್ರಾಮುಖ್ಯತೆ ನೀಡಿದೆ ಎಂದರು. ಬಂಟ್ವಾಳ ರೋಟರಿ ಕ್ಲಬ್‌ ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ, ಸಮಾಜಮುಖೀ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌  ಮುಂದಿದೆ ಎಂದರು.

ಇದೇ ಸಂದರ್ಭ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಲೇಖಕ ಮಹಾಬಲೇಶ್ವರ ಭಟ್‌ ಕೈಯ್ಯೂರು, ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್‌, ಪ್ರಮುಖರಾದ ಸಿ.ಎಚ್‌. ಸೀತಾರಾಮ ಶೆಟ್ಟಿ, ಜಯರಾಮ, ರೋಟರಿ ಸದಸ್ಯ ವಲ್ಲಬೇಶ ಶೆಣೈ, ಯೋಜನೆಯ ಮೇಲ್ವಿಚಾರಕಿ ಮಮತಾ ಸ್ವಾಗತಿಸಿ, ವಲಯ ಅಧ್ಯಕ್ಷ ರಂಜಿತ್‌ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next