Advertisement

ಅರಣ್ಯ ಸಂಪತ್ತು ವೃದ್ಧಿಗೆ ತಪ್ಪದೇ ಸಸಿ ನೆಡಿ

03:19 PM Jul 08, 2019 | Team Udayavani |

ರಾಣಿಬೆನ್ನೂರ: ಇಲ್ಲಿನ ಶ್ರೀರಾಮನಗರದ ಸ್ನೇಹದೀಪ ಅಂಧ ಅಂಗವಿಕಲರ ವಸತಿ ಶಾಲೆಯಲ್ಲಿ ವೈದ್ಯ ದಿನಾಚರಣೆ ಅಂಗವಾಗಿ ರವಿವಾರ ವನಮಹೋತ್ಸವ ಆಚರಿಸಲಾಯಿತು.

Advertisement

ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ| ನಾಗರಾಜ ದೊಡ್ಡಮನಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಭೂಮಿಯ ತಾಪಮಾನ ಹೆಚ್ಚಾಗುತ್ತಲಿದೆ. ಕಳೆದುಕೊಂಡ ಅರಣ್ಯ ಸಂಪತ್ತು ಪುನಃ ಹೆಚ್ಚಿಸಬೇಕಾಗಿದೆ. ಇಲ್ಲದೆ ಹೋದಲ್ಲಿ ಪರಿಸರ ಅಸಮತೋಲನವಾಗಲಿದೆ. ಇದರಿಂದ ಬರಗಾಲ ಆವರಿಸಿ ಎಲ್ಲರೂ ಸಂಕಷ್ಟ ಎದುರಿಸಬೇಕಾಗುತ್ತದೆ. ಆದಕಾರಣ ಪ್ರತಿಯೊಬ್ಬರೂ ಸಸಿಗಳನ್ನು ಬೆಳೆಸುವ ಮೂಲಕ ಪೋಷಣೆ ಮಾಡುವ ಅವಶ್ಯಕತೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ 20ಕ್ಕೂ ಅಧಿಕ ಸಸಿಗಳನ್ನು ನೆಡಲಾಯಿತು. ಸಂಸ್ಥೆಯ ನಿರ್ದೇಶಕ ಡಾ| ಗಿರೀಶ ಕೆಂಚಪ್ಪನವರ, ಧರ್ಮದರ್ಶಿ ಕೆ.ಜಿ.ಮೋಹನ, ಬಸವರಾಜ ಹುಲ್ಲತ್ತಿ, ಪವನ್‌ ಕುಳೆನೂರು, ಯೋಗೇಶ ಭವಾನಿ, ಡಾ| ವೀಣಾ ಕೆಂಚಪ್ಪನವರ, ರತ್ನಪ್ರಭಾ ಕೆಂಚಪ್ಪನವರ, ಸಂತೋಷ ಗುಪ್ತಾ, ಕರುಣಾ ಕೊಠಾರೆ, ಡಾ| ಬಸವರಾಜ ಅಂಗಡಿ, ಡಾ| ಅಭಿನಂದನ್‌ ಸಾಹುಕಾರ, ಡಾ| ವಿದ್ಯಾ ವಾಸುದೇವಮೂರ್ತಿ, ಮುಕ್ತೇಶ ಕುರುಗುಂದಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next