Advertisement

ಇರಾನ್‌ನಲ್ಲಿ ಭೀಕರ ವಿಮಾನ ದುರಂತ:66 ಪ್ರಯಾಣಿಕರು ಬಲಿ

02:12 PM Feb 18, 2018 | Team Udayavani |

ಟೆಹರಾನ್‌: 66 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏಸ್‌ಮ್ಯಾನ್‌ ವಿಮಾನ ಸ್ಫೋಟಗೊಂಡ ಭೀಕರ ಅವಘಡ ಭಾನುವಾರ ನಡೆದಿದೆ.ವಿಮಾನದಲ್ಲಿದ್ದ ಸಿಬಂದಿಗಳು ಸೇರಿ ಎಲ್ಲಾ 66 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

Advertisement

ಡೊಮೆಸ್ಟಿಕ್‌ ವಿಮಾನ ಟೆಹರಾನ್‌ನಿಂದ ಯೂಸುಜ್‌ಗೆ ಹಾರಾಟ ಆರಂಭಿಸಿತ್ತು. ಟೇಕ್‌ ಆಫ್ ಆದ 20 ನಿಮಿಷಗಳಲ್ಲಿ ರಡಾರ್‌ ಸಂಪರ್ಕ ಕಳೆದುಕೊಂಡಿದೆ ಎಂದು ವರದಿಯಾಗಿದೆ. 

ಎಟಿಆರ್‌ 72 ವಿಮಾನ ಸ್ಫೋಟಗೊಳ್ಳುವ ಮುನ್ನ ಹುಲ್ಲುಗಾವಲಿನ ಮೇಲೆ ತುರ್ತು ಲ್ಯಾಂಡಿಂಗ್‌ ಆಗಲು ಯತ್ನಿಸಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ರಕ್ಷಣಾ ಕಾರ್ಯ ನಡೆಸಲು ಪ್ರತಿಕೂಲ ಹವಮಾನ ಅಡ್ಡಿಯಾಗಿದೆ ಎಂದು ವರದಿಯಾಗಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next