Advertisement

ಗುಜರಾತ್‌ಗೆ ಪಾಕ್‌ ಮಿಡತೆಗಳ ಬಾಧೆ ; 20 ತಾಲೂಕುಗಳಲ್ಲಿ ಬೆಳೆ ಹಾನಿ

10:16 AM Dec 28, 2019 | Hari Prasad |

ಅಹ್ಮದಾಬಾದ್‌ (ಗುಜರಾತ್‌): ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಿಂದ ಅಗಣಿತ ಸಂಖ್ಯೆಯಲ್ಲಿ ಭಾರತದ ಗುಜರಾತ್‌, ರಾಜಸ್ಥಾನ್‌ ರಾಜ್ಯವನ್ನು ಮಿಡತೆಗಳು ಪ್ರವೇಶಿಸಿವೆ. ಇವು ಗುಜರಾತ್‌ನ ಬಾನಷ್ಕಾಂಥಾ, ಮೆಹ್ಸಾನ, ಕಚ್‌, ಪಠಾಣ್‌, ಸಬರ್ಕಾಂಥಾ ಜಿಲ್ಲೆಗಳಲ್ಲಿ ಭಾರೀ ಹಾನಿ ಮಾಡಿವೆ. ರಾಜಸ್ಥಾನದ ಜೋಧಪುರದಲ್ಲೂ ಇದರ ಬಾಧೆಯಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಸರಕಾರ 11 ತಜ್ಞರುಳ್ಳ ತಂಡವ‌ನ್ನು ಕಳುಹಿಸಿಕೊಟ್ಟಿದೆ.

Advertisement

ರೈತರು ಡೋಲು, ತಟ್ಟೆ ಬಡಿತ, ಕರ್ಕಶವಾದ ಸಂಗೀತ, ಟೈರ್‌ ದಹಿಸಿ ಮಿಡತೆ ಓಡಿಸಲು ಯತ್ನಿಸಿದರೂ ಫ‌ಲ ನೀಡಿಲ್ಲ. ಗುಜರಾತ್‌ನ ಉತ್ತರಭಾಗದ ಜಿಲ್ಲೆಗಳ 20 ತಾಲೂಕುಗಳಲ್ಲಿನ ಬೆಳೆ ಮಿಡತೆಗಳಿಂದ ಹಾಳಾಗಿವೆ. ಬಾನಷ್ಕಾಂಥಾ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದೆ. ಇದನ್ನು ಗಮನಿಸಿ, ರೈತರಿಗೆ ಪರಿಹಾರ ನೀಡುತ್ತೇವೆಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ಭರವಸೆ ನೀಡಿದ್ದಾರೆ. 1934ರ ಅನಂತರ ಗುಜರಾತ್‌ಗೆ ಈ ಮಟ್ಟಿಗೆ ಕೀಟಗಳು ನುಗ್ಗಿರುವುದು ಇದೇ ಮೊದಲು.

ಮೂಲ ಕೆಂಪು ಸಮುದ್ರ
ಆಫ್ರಿಕಾ ಖಂಡದ ಕೆಂಪು ಸಮುದ್ರ ಕರಾವಳಿ ತೀರದಲ್ಲಿರುವ ಸುಡಾನ್‌, ಎರಿಟ್ರಿಯದಿಂದ ಈ ಮಿಡತೆಗಳು ಈ ಫೆಬ್ರವರಿಯಲ್ಲಿ ಹೊರಟಿದ್ದವು. ಅನಂತರ ಸೌದಿ ಅರೇಬಿಯ, ಇರಾನ್‌ ದಾಟಿ, ಪಾಕಿಸ್ಥಾನ, ಭಾರತಕ್ಕೆ ಆಗಮಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next