ನವದೆಹಲಿ: ಧಾರ್ಮಿಕ ಕ್ಷೇತ್ರ ಪ್ರವಾಸೋದ್ಯಮದಿಂದ 2022ರಲ್ಲಿ 1,34,543 ಕೋಟಿ ರೂ. ಸಂಗ್ರಹಿಸಲಾಗಿದೆ. 2021ರಲ್ಲಿ 60, 070 ಕೋಟಿ ರೂ. ಸಂಗ್ರಹಿಸಲಾಗಿತ್ತು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
2018ರಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಆದಾಯ 1,94,881 ಕೋಟಿ ರೂ.ಗಳಾಗಿತ್ತು 2020ರಲ್ಲಿ ಪ್ರವಾಸಿಗರ ಹೆಚ್ಚಳದೊಂದಿಗೆ ಈ ಆದಾಯ 2,11,661 ಕೋಟಿ ರೂ.ಗಳಿಗೆ ಏರಿಕೆಯಾಗಿ, 2020ರಲ್ಲಿ ಕೊರೊನಾ ಬಿಕ್ಕಟ್ಟಿನಿಂದಾಗಿ 50,136 ಕೋಟಿ ರೂ.ಗಳಿಗೆ ಇಳಿಕೆಯಾಗಿತ್ತು. ಎರಡು ಮತ್ತೆ ಧಾರ್ಮಿಕ ಕ್ಷೇತ್ರ ಪ್ರವಾಸೋದ್ಯಮದಲ್ಲಿ ಚೇತರಿಕೆ ದಾಖಲಾಗುತ್ತಿದೆ.
2022ರಲ್ಲಿ 1,433 ದಶಲಕ್ಷ ಭಾರತೀಯರು ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮ ಕೈಗೊಂಡಿದ್ದರೆ, ಇದೇ ಅವಧಿಯಲ್ಲಿ 6.64 ದಶಲಕ್ಷ ಮಂದಿ ವಿದೇಶಿಗರು ಭಾರತದ ಧಾರ್ಮಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ ಎಂದಿದೆ.