Advertisement

ಕೇಂದ್ರದಿಂದ ಮೊದಲು ಸಾಲಮನ್ನಾ ಮಾಡಿಸಿ

12:28 PM Apr 07, 2017 | Team Udayavani |

ಮೈಸೂರು: ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನಾ ಮಾಡದ, ಅಧಿಕಾರಕ್ಕೆ ಬಂದ ಮೂರೇ ತಿಂಗಳಿಗೆ ಹಾವೇರಿ ಯಲ್ಲಿ ಗೋಲಿಬಾರ್‌ ಮಾಡಿಸಿ ಇಬ್ಬರು ರೈತರ ಸಾವಿಗೆ ಕಾರಣರಾದ ಬಿ.ಎಸ್‌. ಯಡಿಯೂರಪ್ಪಗೆ ರೈತರ ಬಗ್ಗೆ ಮಾತ ನಾಡಲು ಯಾವ ನೈತಿಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

Advertisement

ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕಳಲೆ ಎನ್‌.ಕೇಶವಮೂರ್ತಿ ಪರ ಪಟ್ಟಣದಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ರೈತರ ಸಾಲವನ್ನು ಹೇಗೆ ಮನ್ನಾ ಮಾಡುವುದಿಲ್ಲವೋ ನೋಡುತ್ತೇನೆ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ. ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೂಲಕ ಕೊಟ್ಟಿರು ವುದು ಶೇ.22ರಷ್ಟು ಮಾತ್ರ. ಕೇಂದ್ರ ಸರ್ಕಾರ ವಾಣಿಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಶೆ.88 ರಷ್ಟು ರೈತರಿಗೆ ಸಾಲ ಕೊಟ್ಟಿದೆ. ಮೊದಲು ಕೇಂದ್ರಸರ್ಕಾರದ ಸಾಲಮನ್ನಾ ಮಾಡಿಸಲಿ, ನಂತರ ನಾವು ಸಾಲಮನ್ನಾ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ರೈತರನ್ನು ದಾರಿ ತಪ್ಪಿಸಲು ಸಾಲಮನ್ನಾ ವಿಚಾರ ಪ್ರಸ್ತಾಪ ಮಾಡುವುದಲ್ಲ. 2010ರಲ್ಲಿ ಇದೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ವಿಧಾನಪರಿಷತ್‌ನಲ್ಲಿ ಕೊಟ್ಟ ಹೇಳಿಕೆ ದಾಖಲೆಯಲ್ಲಿದೆ. ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರ ನಮಗೆ ನೋಟು ಪ್ರಿಂಟಿಂಗ್‌ ಮಿಷನ್‌ ಕೊಟ್ಟಿಲ್ಲ ಎಂದಿದ್ದರು. ಈಗ ಸಾಲ ಮನ್ನಾ ಮಾಡಿ ಎಂದು ಬುರುಡೆ ಬಿಡುತ್ತಾರೆ.

ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಯಾಗಿದ್ದಾಗ ಸಹಕಾರ ಸಂಘಗಳಲ್ಲಿನ ರೈತರ 25 ಸಾವಿರ ರೂಪಾಯಿವರೆಗಿನ ಸಾಲಮನ್ನಾ ಘೋಷಣೆ ಮಾಡಿ ಕೇವಲ 900 ಕೋಟಿ ಕೊಟ್ಟು ಹೊರಟು ಹೋದರು. ಆದರೆ, ಸಾಲಮನ್ನಾದ ಉಳಿದ 2500 ಕೋಟಿ ಹಣ ನೀಡಿದ್ದು ನಮ್ಮ ಸರ್ಕಾರ ಎಂದು ಹೇಳಿದರು.

Advertisement

ಪ್ರಧಾನಿ ಮೋದಿಗೆ ಹೇಳಿ: ರಾಷ್ಟ್ರೀಕೃತ ಬ್ಯಾಂಕ್‌ಗಳು, ವಾಣಿಜ್ಯ ಬ್ಯಾಂಕುಗಳ ಮೂಲಕ ಕೇಂದ್ರ ಸರ್ಕಾರ 47 ಸಾವಿರ ಕೋಟಿ ಸಾಲ ನೀಡಿದೆ, ರಾಜ್ಯಸರ್ಕಾರ ಸಹಕಾರ ಸಂಘಗಳ ಮೂಲಕ ರೈತರಿಗೆ ಕೊಟ್ಟಿರುವುದು 10 ಸಾವಿರ ಕೋಟಿ ಮಾತ್ರ. ಹೀಗಾಗಿ ಬಿಜೆಪಿ ಯವರು ಪ್ರಧಾನಿ ಮೋದಿಗೆ ಹೇಳಿ ಮೊದಲು ಕೇಂದ್ರ ಕೊಟ್ಟಿರುವ ರೈತರ ಸಾಲಮನ್ನಾ ಮಾಡಿಸಲಿ. ನಿಮ್ಮ ಹೋರಾಟ ವನ್ನು ನಾನೂ 35 ವರ್ಷ ಗಳಿಂದ ನೋಡಿದ್ದೇನೆ ಎಂದು ಲೇವಡಿ ಮಾಡಿದರು.

ಸಾಲಮನ್ನಾ ಮಾಡುವಂತೆ ಪ್ರಧಾನಿ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ದಿದ್ದಾಗ ಇದೇ ಯಡಿಯೂರಪ್ಪ, ಅನಂತಕುಮಾರ್‌, ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ಈಶ್ವರಪ್ಪಅವರೆಲ್ಲ ತುಟಿಬಿಚ್ಚದೆ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದರು. ಇಲ್ಲಿ ಬಂದು ಜನರ ಮುಂದೆ ಬುರುಡೆ ಬಿಡುತ್ತಾರೆ. ಢೋಂಗಿಗಳು ಇವರು ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಸಂಸದ ಆರ್‌. ಧ್ರುವನಾರಾಯಣ, ಅಭ್ಯರ್ಥಿ ಕಳಲೆ ಕೇಶವಮೂರ್ತಿ, ಸಚಿವ ರಾದ ಆರ್‌.ವಿ.ದೇಶಪಾಂಡೆ, ಉಮಾಶ್ರೀ ಎಚ್‌.ಆಂಜನೇಯ, ಅಲ್ಲಂ ವೀರಭದ್ರಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next