Advertisement

Uttar Pradesh: ಕಾಳಿಂಗ ಸರ್ಪವನ್ನು ಕೊಂದು ಮಗುವನ್ನು ರಕ್ಷಿಸಿದ ಪಿಟ್‌ ಬುಲ್ ಶ್ವಾನ!

12:26 PM Sep 25, 2024 | Team Udayavani |

ಜಾನ್ಸಿ(ಉತ್ತರಪ್ರದೇಶ): ಮನೆಯ ಗಾರ್ಡ್‌ ನಲ್ಲಿ ಮನೆಗೆಲಸದ ಮಹಿಳೆಯ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಳಿಂಗ ಸರ್ಪ(King Cobra) ಬಂದಿದ್ದು, ಈ ವೇಳೆ ಮಗು ಕಿರುಚಿಕೊಂಡಿತ್ತು. ಆಗ ಮನೆಯ ಪಿಟ್‌ ಬುಲ್‌(Pit Bull) ನಾಯಿ ಓಡಿಬಂದು ಹಾವನ್ನು ಕಚ್ಚಿ ಕೊಲ್ಲುವ ಮೂಲಕ ಮಗುವನ್ನು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಜಾನ್ಸಿಯ ಶಿವ ಗಣೇಶ್‌ ಕಾಲೋನಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಮನೆಯ ಗಾರ್ಡನ್‌ ನ ಒಂದು ಮೂಲೆಯಲ್ಲಿ  ಪಿಟ್‌ ಬುಲ್‌ ಶ್ವಾನ “ಜೆನ್ನಿ”ಯನ್ನು ಕಟ್ಟಿಹಾಕಲಾಗಿತ್ತು. ಆದರೆ ಹಾವನ್ನು ಕಂಡು ಮಗು ಕಿರುಚಾಡುತ್ತಿರುವುದನ್ನು ಗಮನಿಸಿ ಸರಪಳಿಯನ್ನು ಹರಿದುಕೊಂಡು ಬಂದು ಹಾವನ್ನು ಕಚ್ಚಿ ಕೊಂದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ವೈರಲ್‌ ಆಗಿದೆ.

ವಿಡಿಯೋದಲ್ಲಿ, ಪಿಟ್‌ ಬುಲ್‌ ಕಾಳಿಂಗ ಸರ್ಪದ ತಲೆಯನ್ನು ಕಚ್ಚಿ ಬಲವಾಗಿ ಅಲ್ಲಾಡಿಸಿ ನೆಲಕ್ಕೆ ಬಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ಸುಮಾರು ಐದು ನಿಮಿಷಗಳ ಕಾಲ ಕಚ್ಚಿ ಎಳೆದಾಡಿದ ಪರಿಣಾಮ ಹಾವು ಸಾವನ್ನಪ್ಪಿರುವುದು ವಿಡಿಯೋದಲ್ಲಿದೆ.

ಈವರೆಗೆ 8-10 ಹಾವನ್ನು ಕೊಂದ ಪಿಟ್‌ ಬುಲ್‌ ಶ್ವಾನ!

ಶ್ವಾನ ಜೆನ್ನಿ (Jenny) ಇದೇ ಮೊದಲ ಬಾರಿಗೆ ಹಾವನ್ನು ಕೊಂದಿಲ್ಲ. ಈಗಾಗಲೇ 8-10 ಹಾವನ್ನು ಕೊಂದಿದ್ದು, ಜೀವವನ್ನು ಉಳಿಸುವ ಕೆಲಸ ಮಾಡಿದೆ ಎಂದು ಪೆಟ್‌ ಬುಲ್‌ ಮಾಲೀಕ ಪಂಜಾಬ್‌ ಸಿಂಗ್‌ ತಿಳಿಸಿದ್ದಾರೆ.

Advertisement

ಮಂಗಳವಾರ (ಸೆ.24) ನಾನು ಮನೆಯಲ್ಲಿ ಇರಲಿಲ್ಲವಾಗಿತ್ತು. ಆದರೆ ನನ್ನ ಮಗ ಮತ್ತು ಕೆಲಸದವರ ಮಕ್ಕಳು ಇದ್ದಿದ್ದರು. ನಮ್ಮ ಮನೆಯ ಸಮೀಪ ಗದ್ದೆಗಳು ಇರುವುದರಿಂದ ಹಲವಾರು ಹಾವುಗಳು ಮಳೆಗಾಲದ ಸಂದರ್ಭದಲ್ಲಿ ನಮ್ಮ ಮನೆ ಗಾರ್ಡ್‌ ನಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಜೆನ್ನಿ 8-10 ಹಾವನ್ನು ಕೊಂದಿರುವುದಾಗಿ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next