Advertisement

ಪಿರಿಯಾಪಟ್ಟಣ : ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ

10:53 PM Jul 05, 2022 | Team Udayavani |

ಪಿರಿಯಾಪಟ್ಟಣ : ರಾಜಾಸ್ಥಾನದಲ್ಲಿ ನಡೆದ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಹಿಂದೂ ಜಾಗರಣಾ ಸಮಿತಿವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಪಟ್ಟಣದ ಮಸಣೀಕಮ್ಮ ದೇವಾಲಯದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ಸರ್ಕಲ್‌ಬಳಿ ಮಾನವ ಸರಪಳಿ ನಿರ್ಮಾಣ ಮಾಡಿ ಕೆಲ ಸಮಯ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪರಿಸರ ಹೋರಾಟಗಾರರ ಹಾಗೂ ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್ ಮಾತನಾಡಿ ದೇಶದಲ್ಲಿ ಮುಸ್ಲಿಂ ಭಯೋತ್ಪಾದನೆ ಹೆಚ್ಚಾಗುತ್ತಿದ್ದು ಇದು ನಿಲ್ಲಬೇಕು. ರಾಜಾಸ್ಥಾನದಲ್ಲಿ ಆದ ಘಟನೆಗಳು ಕರ್ನಾಟಕದಲ್ಲಿಯೂ ನಡೆಯಲಾರಂಭಿಸಿವೆ. ಮುಸ್ಲೀಮ ಮೂಲಭೂತವಾದಿಗಳಿಂದ ದೇಶದಲ್ಲಿ ಆಶಾಂತಿ ಉಂಟಾಗುತ್ತಿದ್ದು. ಬಹುಸಂಖ್ಯಾತ ಹಿಂದುಗಳು ಹೆದರಿ ಬದುಕುವ ದಿನಗಳು ದೂರವಿಲ್ಲ ಆದ್ದರಿಂದ ಅಲ್ಲಿ ನಡೆದರೆ ನಮಗೇನು ಎನ್ನುವ ಬದಲು ಪ್ರತಿಯೊಬ್ಬ ಹಿಂದೂವು ಕನ್ನಯ್ಯ ಹತ್ಯೆಯಿಂದ ಜಾಗೃತರಾಗಿ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಇವರ ಹೆಸರಿನಲ್ಲಿಯೂ ದೇವರುಗಳಿದ್ದಾರೆ ಇವರನ್ನು ಮೂಲಭೂತ ಭಯೋತ್ಪಾದಕರು ಬಿಡುವುದಿಲ್ಲ ಮುಂದಿನ ಹೀಗೆ ಮೂಲಭೂತವಾದಿಗಳಿಗೆ ಸಹಕಾರ ನೀಡಿದರೆ ಮುಂದೊಂದು ದಿನ ಇವರ ಮೇಲು ಅವರು ದಾಳಿ ಮಾಡುತ್ತಾರೆ ಎಂದು ತಿಳಿಸಿದರು.

ರಾಷ್ಟ್ರೀಯ ತಂಬಾಕು ಮಂಡಳಿ ಉಪಾಧ್ಯಕ್ಷರಾದ ಮಾಜಿ ಶಾಸಕ ಎಚ್.ಸಿ.ಬಸವರಾಜಪ್ಪ ಮಾತನಾಡಿ ದೇಶದಲ್ಲಿ ಆಶಾಂತಿ ಉಂಟುಮಾಡುವ ಸಂಘಟನೆಗಳನ್ನು ನಿಷೇಧಿಸಬೇಕು, ಮುಸ್ಲಿಂ ಮೂಲಭೂತವಾದಿಗಳಿಂದ ದೇಶಕ್ಕೆ ಆಪಾಯಿದೆ. ಹಿಂದೂಗಳು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗಲಿದೆ ಎಂದು ತಿಳಿಸಿದರು.

Advertisement

ಹಿಂದೂ ಜಾಗರ ವೇದಿಕೆಯ ಪ್ರಾಂತ ಮಾತೃ ಸುರಕ್ಷಾ ಪ್ರಮುಖ್ ಭ.ಗಣರಾಜ್ ಭಟ್ ಕೆದಿಲ ಮಾತನಾಡಿ ಶಾಂತಿಯುತ ಸಹಬಾಳ್ವೆಯ ಸಮಾಜಕ್ಕೆ ಭಯೋತ್ಪಾದನಾ ಚಟುವಟಿಕೆಗಳು ಮಾರಕವಾಗಿದ್ದು ಇಂತಹ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕು. ಜಿಹಾದ್, ಐಎಎಸ್ ಚಟುವಟಿಕೆ ನಡೆಸುವವರ ಬಗ್ಗೆ ತನಿಕೆಯಾಗಬೇಕು ಮತ್ತು ಕನ್ನಯ್ಯಲಾಲ್ ರಂತಹ ಅಮಾಯಕರು ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಮೈಸೂರು ಗ್ರಾಮಾಂತರ ಹಿಂದೂಜಾಗರಣಾ ಜಿಲ್ಲಾ ಸಂಚಾಲಕ್ ಲಕ್ಷ್ಮಿನಾರಾಯಣ, ರಾಜ್ಯ ನೀರು ಮತ್ತು ಒಳಚರಂಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಣ್ಣಪ್ಪ, ತಾಲೂಕು ಕಾರ್ಯದರ್ಶಿಗಳಾದ ಬೆಮ್ಮತ್ತಿಚಂದ್ರು, ಹೆಚ್.ಸಿ. ವೀರಭದ್ರ, ಮುಖಂಡರಾದ, ಶಿವರಾಮೇಗೌಡ, ಪಿ.ಜೆ.ರವಿ, ಶುಭಾ ಗೌಡ, ಚನ್ನಬಸವರಾಜು, ಬಿ.ಕೆ.ಮೈಲಾರಿ, ಮನುಗನಹಳ್ಳಿ ಮಧು, ಗೀತಾ, ಕಿತ್ತೂರು ಸ್ವಾಮಿಗೌಡ, ಅನಿಷ್ ಸೇರಿದಂತೆ ಬಿಜೆಪಿಯ ಎಲ್ಲಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next