Piriyapatna; ಸಾಲ ತೀರಿಸಲಾಗದೇ ರೈತ ವಿಷ ಸೇವಿಸಿ ಆತ್ಮಹ*ತ್ಯೆ
11:29 PM Dec 06, 2024 | Team Udayavani |
ಪಿರಿಯಾಪಟ್ಟಣ: ಸಾಲ ತೀರಿಸಲಾಗದೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಬಟೂರು ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ರಾಜು (45) ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಹಾಗೂ ಇತರ ಖಾಸಗಿ ವ್ಯಕ್ತಿಗಳಿಂದ 15 ಲಕ್ಷ ರೂ.ಗೂ ಹೆಚ್ಚು ಸಾಲ ಮಾಡಿದ್ದರು. 3 ವರ್ಷಗಳಿಂದ ಜಮೀನಿ ನಲ್ಲಿ ನಿರಂತರ ಬೆಳೆ ವೈಫಲ್ಯವಾಗಿದ್ದು, ಸಾಲ ತೀರಿಸಲಾಗದೇ ಜಮೀನಿನಲ್ಲಿ ವಿಷ ಸೇವಿಸಿದ್ದರು. ಕೂಡಲೇ ಅಕ್ಕಪಕ್ಕದವರು
ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.