Advertisement

ಪೊಲೀಸ್ ಇಲಾಖೆ ಶಾಸಕರ ಕೈಗೊಂಬೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಗಂಭೀರ ಆರೋಪ

07:04 PM Jun 21, 2022 | Team Udayavani |

ಪಿರಿಯಾಪಟ್ಟಣ: ಸಾರ್ವಜನಿಕರ ನೊಂದವರ ಹಾಗೂ ನ್ಯಾಯದ ಪರ ಕೆಲಸ ಮಾಡಬೇಕಾದ ಪೊಲೀಸ್ ಇಲಾಖೆ ಶಾಸಕ ಕೆ.ಮಹದೇವ್ ರವರ ಕೈಗೊಂಬೆಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಆರೋಪಿಸಿದರು.

Advertisement

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಿರಿಯಾಪಟ್ಟಣದ ಪೊಲೀಸ್ ಇಲಾಖೆ ಅಪ್ಪ-ಮಕ್ಕಳ ಮನೆಯಾಗಿದೆ, ಇಲ್ಲಿ ಸಾರ್ವಜನಿಕರು, ನೊಂದವರು, ಹಾಗೂ ಅನ್ಯಾಯಕ್ಕೆ ಒಳಗಾದವರು ದೂರು ನೀಡಿದರೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಶಾಸಕರು ಹಾಗೂ ಅವರ ಮಗ ಪೋನಿನಲ್ಲಿ ಹೇಳಿದರೆ ದೂರು ದಾಖಲಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪ- ಪ್ರತ್ಯಾರೋಪ ಮಾಡುವುದು ಸರ್ವೆಸಾಮಾನ್ಯ ಹಾಗಾಗಿ ನಮ್ಮ ಪಕ್ಷದ  ಸಮಾಜಿಕ ಜಾಲತಾಣದ ಮುಖ್ಯಸ್ಥ ಜೆ.ಮೋಹನ್ ಎಂಬುವವರು ತಾಲ್ಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಚಾರ, ಲಂಚಗೂಳಿತನ ಹಾಗೂ ಕಳಪೆ ಕಾಮಗಾರಿಗಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಇದೇ ದೊಡ್ಡ ಅಪರಾಧ ಎಂದು ಪೊಲೀಸರು ಶಾಸಕರ ಕುಮ್ಮಕ್ಕಿನಿಂದ ರಾತ್ರೋರಾತ್ರಿ ಅವರ ಮನೆಗೆ ನುಗ್ಗಿ ಬಂದಿಸಿ ಠಾಣೆಗೆ ಕರೆದೊಯ್ದು ಕಳ್ಳತನ, ಅತ್ಯಚಾರ, ಹಾಗೂ ಭಯೋತ್ಪಾಧಕರನ್ನು ವಿಚಾರಣೆ ಮಾಡುವಂತೆ ಅವರಿಗೆ ಕಿರುಕುಳ ನೀಡಿ ಬಲವಂತವಾಗಿ ತಾವೇ ಬರೆದುಕೊಂಡಿದ್ದ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಮೋಹನ್ ಇದಕ್ಕೆ ಜಗ್ಗದಿದ್ದಾಗ ಅವರನ್ನು ಬಿಟ್ಟು ಕಳುಹಿಸಿದ್ದಾರೆ ಹೀಗೆ ಭ್ರಷ್ಟಚಾರದ ವಿರುದ್ದ ಮಾತನಾಡುವವರ ವಿರುದ್ದ ಹಾಗೂ ಅವರ ಪಕ್ಷ ಸೇರಲು ಒಪ್ಪದಿದ್ದರೆ ಅವರನ್ನು ರೌಡಿಸೀಟರ್ ಗೆ ಸೇರಿಸುತ್ತೇವೆ ಎಂದು ಬೆದರಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲು ಹತೊರೆಯುತ್ತಿದ್ದಾರೆ ಈ ನಿಮ್ಮ ಗೊಡ್ಡು ಬೆದರಿಕೆಗೆ  ನಮ್ಮ ಪಕ್ಷದ ಕಾರ್ಯಕರ್ತರು ಸೊಪ್ಪು ಹಾಕುವುದಿಲ್ಲ ಎಂದರು.

ಸಾಮಾಜಿಕ ಜಾಲತಾಣದ ಮುಖಂಡ ಜೆ.ಮೋಹನ್ ಮಾತನಾಡಿ ರಾಜಕೀಯ ವ್ಯವಸ್ಥೆಯಲ್ಲಿ ಆಡಳಿತ ಯಂತ್ರ ದಿಕ್ಕು ತಪ್ಪುತ್ತಿದ್ದರೆ ಅದನ್ನು ಸಮಾಜಕ್ಕೆ ತಿಳಿಸುವುದು ವಿರೋಧ ಪಕ್ಷದ ಕೆಲಸ ಹಾಗಾಗಿ ನಾನು ತಾಲ್ಲೂಕಿನಲ್ಲಿ ನಡೆದಿರುವ ಕಳಪೆ ಕಾಮಗಾರಿ ಭ್ರಷ್ಟಚಾರ, ಅಧಿಕಾರಿಗಳ ಲಂಚಗೂಳಿತನದ ಬಗ್ಗೆ ಸಂದೇಶವನ್ನು ಹಂಚಿಕೊಂಡಿದ್ದೆ ಆದರೆ ಇದೇ ಮಹಾಪರಾಧವೆಂದು ಭಾವಿಸಿ ಧ್ವನಿ ಇಲ್ಲದ ಹಿಂದುಳಿದ ವರ್ಗದವರನ್ನು ಹತ್ತಿಕ್ಕಲು ಶಾಸಕ ಕೆ.ಮಹದೇವ್ ಕುಮ್ಮಕ್ಕು ನೀಡಿ ರಾತ್ರೋರಾತ್ರಿ 4 ಜನ ಪೊಲೀಸರನ್ನು ಮನೆಗೆ ನುಗ್ಗಸಿ ಬೆದರಿಸಲು ಮುಂದಾದರು ಆಗ ನಾನು ನಾನು ಕಳ್ಳತನ ಮಾಡಿಲ್ಲ, ಕೊಲೆ ಮಾಡಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ್ದರೆ ಸು-ಮೋಟೋ ಮೂಲಕ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿಕೊಳ್ಳಬೇಕು ಆದರೆ ನೀವು ನನ್ನನ್ನು ಬಲವಂತವಾಗಿ ಬೆದರಿಸುವ ಕೆಲಸ ಮಾಡುತ್ತಿದ್ದೀರಿ ನಾನು ಇದಕ್ಕೆ ಜಗ್ಗುವುದಿಲ್ಲ ಬೆಕಿದ್ದರೆ ನನ್ನನ್ನು ಜೈಲಿಗೆ ಹಾಕಿ ಎಂದಾಗ ನನ್ನನ್ನು ಬಿಟ್ಟು ಕಳುಹಿಸಿದರು ಎಂದು ಆರೋಪಿಸಿದರು.

ರಹಮತ್ ಜಾನ್ ಬಾಬು ಮಾತನಾಡಿ ಒಂದೇ ರಸ್ತೆಗೆ ವರ್ಷದಲ್ಲಿ ಎರಡೆರಡು ಬಾರಿ ಗುದ್ದಲಿಪೂಜೆ ಮಾಡಿ ಕಳಪೆ ಕಾಮಗಾರಿ ನಡೆಸಿ ಸರ್ಕಾರದ ಹಣವನ್ನು ಕೊಳೆ ಒಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಯಾವ ಇಲಾಖೆಯಲ್ಲಿಯೂ ಅಧಿಕಾರಿಗಳು ಲಂಚ ನೀಡದೆ ಸರ್ವಜನಿಕರ ಕೆಲಸ ಮಾಡಿಕೊಡುತ್ತಿಲ್ಲ 34 ಇಲಾಖೆಗಳಲ್ಲೂ ಭ್ರಷ್ಟಚಾರ ತುಂಬಿ ತುಳುಕುತ್ತಿದೆ ಎಂದರು.

Advertisement

ಸೀಗೂರು ವಿಜಯಕುಮಾರ್ ಮಾತನಾಡಿ  ಸರ್ಕಾರ ಆದೇಶ ಮಾಡಿರುವ ಅಥಿತಿ ಶಿಕ್ಷಕರ ನೇಮಕಾತಿಯಲ್ಲಿ ಅರ್ಹತೆ ಇರುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಆದರೆ ಯಾರಿಗೆ ಶೀಫಾರಸ್ಸು ಪತ್ರ ನೀಡುತ್ತಾರೋ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಿ ಅರ್ಹತೆ ಇರುವವರಿಗೆ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಟೌನ್ ಕಾಂಗ್ರೆಸ್ ಅಧ್ಯಕ್ಷ ಎ.ಕೆ.ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮುತ್ತುರಾಣಿ, ಸರಸ್ವತಿ, ಎಸ್ಸಿ ಘಟಕ್ ಅಧ್ಯಕ್ಷ ಪಿ.ಮಹದೇವ್ ಮುಖಂಡರಾದ ಬಿಜೆ.ಬಸವರಾಜು, ಎಸ್.ಎನ್.ಭುಜಂಗ, ಹೆಮ್ಮಿಗೆ ಮಹೇಶ್, ಮೆಲ್ಲಳ್ಳಿ ಪ್ರದೀಪ್, ಸೇರಿದಂತೆ ಮತ್ತಿತರರು ಹಾಜರಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next