Advertisement

ಮೈಸೂರಿಗೆ ಶೀಘ್ರವೇ ಪಿಂಕ್‌ ಶೌಚಾಲಯ!

02:21 PM Nov 19, 2021 | Team Udayavani |

ಮೈಸೂರು: ಸ್ವತ್ಛ ನಗರಿ ಮೈಸೂರು ಮತ್ತಷ್ಟು ಸ್ಮಾರ್ಟ್‌ ಆಗುವ ಸಲುವಾಗಿ ನಗರದ ವಿವಿಧ ಭಾಗಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಸಜ್ಜಾಗಿದೆ. ಸ್ವತ್ಛ ಹಾಗೂ ಶುದ್ಧ ಪರಿಸರವು ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಮಹಾತ್ಮ ಗಾಂಧೀಜಿ ಹೇಳಿರುವ ಪ್ರಸಿದ್ಧ ಮಾತು.

Advertisement

ಶುದ್ಧ, ಸ್ವತ್ಛ ಪರಿಸರದ ಪ್ರಾಮುಖ್ಯತೆಯನ್ನು ಸಾರುವ ಸಲುವಾಗಿ ವಿಶ್ವದಾದ್ಯಂತ ಶೌಚಾಲಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸ್ವತ್ಛ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನಾದ್ಯಂತ 25 ಹೊಸ ಪಿಂಕ್‌ ಶೌಚಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಮಹಾನಗರಪಾಲಿಕೆ ಮುಂದಾಗಿದೆ.

ನಗರದಲ್ಲಿ ಈಗಾಗಲೇ ಸಾಕಷ್ಟು ಸಾರ್ವಜನಿಕ ಶೌಚಾಲಯಗಳಿವೆಯಾದರೂ ಸಿಕ್ಕಸಿಕ್ಕ ಜಾಗದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದು ತಪ್ಪಿಲ್ಲ. ಅಲ್ಲದೆ ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯೂ ಇದೆ. ಇದನ್ನು ನೀಗಿಸಲು ಮುಂದಾಗಿರುವ ಪಾಲಿಕೆ, ಸ್ವತ್ಛತೆಯೆಡೆಗೆ ಇನ್ನೊಂದು ಹೆಜ್ಜೆ ಇಡಲು ನಗರದಾದ್ಯಂತ ಪಿಂಕ್‌ ಶೌಚಾಲಯ ಸೇರಿದಂತೆ ಒಟ್ಟು 25 ಶೌಚಾಲಯಗಳನ್ನು ನಿರ್ಮಿಸಲು ನಿರ್ಧರಿಸಿದೆ.

ಏನಿದು ಪಿಂಕ್‌ ಟಾಯ್ಲೆಟ್‌: ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಗೃಹ ನಿರ್ಮಿಸಲುವ ಸಲುವಾಗಿ ಗುಲಾಬಿ ಬಣ್ಣದ ಶೌಚಾಲಯಗಳನ್ನು ನಿರ್ಮಿಸಲು ಹಿಂದಿನ ಮೇಯರ್‌ ಪುಷ್ಪಲತಾ ಜಗನ್ನಾಥ್‌ ಯೋಜನೆ ರೂಪಿಸಿದ್ದರು. ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಈಗಿನ ಮೇಯರ್‌ ಸುನಂದಾ ಪಾಲನೇತ್ರ ಮರು ಜೀವ ನೀಡಲು ಮುಂದಾಗಿದ್ದಾರೆ.

ಅಲಹಬಾದ್‌ ಮೂಲದ ಕಂಪನಿಯೊಂದು ನಗರದ 65 ವಾರ್ಡ್‌ಗಳಲ್ಲಿ 25 ಪಿಂಕ್‌ ಶೌಚಾಲಯ ನಿರ್ಮಿಸಿ ಒಂದು ವರ್ಷಗಳ ಕಾಲ ನಿರ್ವಹಣೆ ಮಾಡಲು ಮುಂದೆ ಬಂದಿದ್ದು, ಇನ್ನೆರೆಡು ತಿಂಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮೇಯರ್‌ ಸುನಂದಾ ಪಲನೇತ್ರ ಉದಯವಾಣಿಗೆ ತಿಳಿಸಿದರು.

Advertisement

ಬಯಲು ಮೂತ್ರ ವಿಸರ್ಜನೆಗಿಲ್ಲ ಕಠಿಣ ಕ್ರಮ: ನಗರದಾದ್ಯಂತ ಸಾಕಷ್ಟು ಸ್ಥಳಗಳಲ್ಲಿ ಇನ್ನೂ ಬಯಲು ಮೂತ್ರವಿಸರ್ಜನೆ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಕೆಲವೆಡೆ ಪಾಲಿಕೆ ಈ ಸಂಬಂಧ ಕ್ರಮ ಕೈಗೊಂಡು ದಂಡ ವಿಧಿಸಿದರೂ ಹೀಗೆ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ನಗರವನ್ನು ಸ್ವತ್ಛವಾಗಿ ಕಾಪಾಡಲು ಇನ್ನಷ್ಟು ಕಠಿಣ ಕ್ರಮಗಳ ಅಗತ್ಯ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಇದನ್ನೂ ಓದಿ:- ಆಲೆಮನೆ ಕುಸಿದು ಬಿದ್ದು ಮೇಕೆ ಮರಿ ಸಾವು

ಇದರಿಂದಾಗಿ ಪರಿಸರ ಹಾಳಾಗುವುದು ಮಾತ್ರವಲ್ಲದೆ ಸುತ್ತಮುತ್ತ ಸಂಚರಿಸುವವರಿಗೆ ಮುಜುಗರವಾಗುತ್ತದೆ. ಆದ್ದರಿಂದ ಬಯಲು ಮೂತ್ರವಸರ್ಜನೆ ಮಾಡದಿರಲು ಸಾರ್ವಜನಿಕರಲ್ಲೂ ಅರಿವು ಮೂಡಬೇಕು, ಕ್ರಮಗಳೂ ಕಠಿಣವಾಗಬೇಕು ಎಂಬುದು ಜನರ ಮಾತು.

ಇ-ಟಾಯ್ಲೆಟ್‌ ಯೋಜನೆ ಕೈಬಿಟ್ಟ ನಗರ ಪಾಲಿಕೆ

ಸ್ವತ್ಛ ನಗರಿ ಹಣೆಪಟ್ಟಿ ಹೊತ್ತ ಸಾಂಸ್ಕೃತಿಕ ನಗರಿ ಮೈಸೂರನಲ್ಲಿ ನಗರದ ವಿವಿಧೆಡೆ ನಿರ್ಮಾಣವಾಗಿದ್ದ ಇ-ಶೌಚಾಲಯಗಳು ಸಮರ್ಪಕ ನಿರ್ವಹಣೆ ಮತ್ತು ಬಳಕೆಯ ಕೊರತೆಯಿಂದ ನಿರುಪಯುಕ್ತವಾದ ಹಿನ್ನೆಲೆ ಇ-ಟಾಯ್ಲೇಟ್‌ ಯೋಜನೆಯನ್ನು ಪಾಲಿಕೆ ಕೈಬಿಟ್ಟಿದೆ. ಸ್ವತ್ಛನಗರಿ ಪಟ್ಟವನ್ನು ಪಡೆಯುವ ತರಾತುರಿಯಲ್ಲಿ ಮಹಾನಗರ ಪಾಲಿಕೆ ನಗರದ ವಿವಿಧೆಡೆ ಸ್ಥಾಪಿಸಿರುವ ಇ-ಟಾಯ್ಲೆಟ್‌ಗಳ ಪೈಕಿ ಬಹುಪಾಲು ಇ-ಶೌಚಾಗೃಹಗಳು ನಿರುಪಯುಕ್ತವಾಗಿ ನಿಂತಿವೆ.

Advertisement

Udayavani is now on Telegram. Click here to join our channel and stay updated with the latest news.

Next