Advertisement

Pimpri Chinchwad; ನೀರಿನ ಟ್ಯಾಂಕ್‌ ಕುಸಿತ: 5 ಕಾರ್ಮಿಕರು ಸಾ*ವು

02:08 AM Oct 25, 2024 | Team Udayavani |

ಪಿಂಪ್ರಿ ಚಿಂಚ್ವಾಡ್‌: ಕಾರ್ಮಿಕರ ಕ್ಯಾಂಪ್‌ ಒಂದರಲ್ಲಿ ನೀರಿನ ಟ್ಯಾಂಕ್‌ ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಸಾವಿಗೀಡಾದ ಘಟನೆ ಪುಣೆ ಸಮೀಪದ ಪಿಂಪ್ರಿ ಚಿಂಚ್ವಾಡ್‌ನ‌ಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಟ್ಯಾಂಕ್‌ ಕೆಳಗೆ ಕಾರ್ಮಿಕರು ಸ್ನಾನ ಮಾಡುತ್ತಿದ್ದ ಸಂದ ರ್ಭದಲ್ಲಿ 12 ಅಡಿ ಎತ್ತರದಲ್ಲಿದ್ದ ಟ್ಯಾಂಕ್‌ ಕುಸಿದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳಪೆ ಕಾಮಗಾರಿ ಇದಕ್ಕೆ ಕಾರಣ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next