Advertisement
ಜಮ್ಮು-ಕಾಶ್ಮೀರದ ಬೆಳವಣಿಗೆ ಹಿನ್ನೆಲೆಯಲ್ಲಿ ಹಾಗೂ ಅದೇ ವಿಚಾರಕ್ಕೆ ಪಾಕಿಸ್ಥಾನದೊಂದಿಗೆ ರಾಜಕೀಯ ಭಿನ್ನಮತ ಮತ್ತಷ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸರ್ಪಗಾವಲಿನಲ್ಲಿ ಕೆಂಪುಕೋಟೆಯ ಕಾರ್ಯಕ್ರಮ ನೆರವೇರಲಿದೆ. ಬೆಳಗ್ಗೆ 7.30ಕ್ಕೆ ಕಾರ್ಯಕ್ರಮ ಆರಂಭವಾಗಿ ಮೋದಿ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾತನಾಡುವರು.
Related Articles
Advertisement
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಗುರುವಾರ ವೀರಚಕ್ರ ನೀಡಿ ಗೌರವಿಸಲಾಗುತ್ತದೆ. ಬಾಲಾ ಕೋಟ್ ದಾಳಿಯಾದ ಮರುದಿನ (ಫೆ. 27) ನಡೆದ ಕಾರ್ಯಾಚರಣೆ ವೇಳೆ ಅಭಿನಂದನ್ ಪಾಕಿಸ್ಥಾನದ ಸೈನಿಕರಿಗೆ ಸಿಕ್ಕಿಬಿದ್ದಿದ್ದರು. ಅಲ್ಲದೆ, ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನೂ ಅಭಿನಂದನ್ ಹೊಡೆದುರುಳಿಸಿದ್ದರು. ಇದು ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಸಿತ್ತು. ಅನಂತರ ಮಾ. 1ರಂದು ಪಾಕಿಸ್ಥಾನ ಅವರನ್ನು ಬಿಡುಗಡೆಗೊಳಿಸಿತ್ತು.
ಬಾಲಾಕೋಟ್ ವೀರರಿಗೆ ವಾಯುಸೇನೆ ಪದಕಫೆ. 26ರಂದು ಪಾಕಿಸ್ಥಾನದ ಬಾಲಾಕೋಟ್‌ನಲ್ಲಿದ್ದ ಜೈಶ್ ಎ ಮೊಹಮ್ಮದ್ ಸಂಘಟನೆಯ ತರಬೇತಿ ಕೇಂದ್ರದ ಮೇಲೆ ವಾಯು ದಾಳಿ ನಡೆಸಿದ್ದ ಭಾರತೀಯ ವಾಯು ಸೇನೆಯ ಐವರು ಪೈಲಟ್‌ಗಳಿಗೆ ವಾಯು ಸೇನೆಯ ಪದಕಗಳನ್ನು ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ದಿಲ್ಲಿಯ ಕೆಂಪುಕೋಟೆಯಲ್ಲಿ ಗುರುವಾರ ನಡೆಯಲಿರುವ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಈ ಪದಕ ಪ್ರದಾನ ಮಾಡಲಾಗುತ್ತದೆ. ಸಿಆರ್‌ಪಿಎಫ್ಗೆ 75 ಪದಕ ಸಿಆರ್‌ಪಿಎಫ್ಗೆ ಸಂದಿರುವ ಪ್ರಶಸ್ತಿಗಳಲ್ಲಿ, ಒಂದು ಕೀರ್ತಿ ಚಕ್ರ, ಎರಡು ಶೌರ್ಯ ಚಕ್ರ ಸೇರಿದೆ. ಸೇನೆಯ ಡೆಪ್ಯೂಟಿ ಕಮಾಂಡೆಂಟ್ ಹರ್ಷಪಾಲ್ ಸಿಂಗ್‌ಗೆ ಕೀರ್ತಿ ಚಕ್ರ ನೀಡಲಾಗಿದ್ದು, ಕಾರ್ಯಾಚರಣೆಯಲ್ಲಿ ಅವರಿಗೆ ಸಾಥ್ ನೀಡಿದ್ದ ಯುವ ಪೇದೆಗಳಾದ ಜಾಕಿರ್ ಹುಸೇನ್ ಅವರಿಗೆ ಶೌರ್ಯ ಚಕ್ರ ನೀಡಲಾಗಿದೆ. ಕಳೆದ ವರ್ಷ ಅ. 19ರಂದು ಬಾರಾಮುಲ್ಲಾದ ಚೆಕ್‌ಪೋಸ್ಟ್‌ನಲ್ಲಿ ಸೇವಾ ನಿರತರಾಗಿದ್ದಾಗ ಜೈಶ್ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಕೊಂದಿದ್ದಕ್ಕಾಗಿ, 53ನೇ ಬೆಟಾಲಿಯನ್‌ನ ಪೇದೆ ಸಬ್ಲೆ ಧ್ಯಾನೇಶ್ವರ್ ಶ್ರೀರಾಮ್ ಅವರಿಗೆ ಶೌರ್ಯ ಚಕ್ರ ನೀಡಲಾಗಿದೆ. ಇದರ ಜತೆಗೆ, ಹರ್ಷಪಾಲ್ ಅವರಿಗೆ ಸೆಕೆಂಡ್-ಇನ್-ಕಮಾಂಡ್ ರ್‍ಯಾಂಕ್‌ಗೆ ಬಡ್ತಿ ನೀಡಲಾಗಿದೆ. ಇದಲ್ಲದೆ, ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕಗಳಲ್ಲಿ ಎರಡು ಪದಕಗಳೂ ಸಿಆರ್‌ಪಿಎಫ್ಗೇ ಸಂದಿದ್ದು, ಅಸಿಸ್ಟೆಂಟ್ ಕಮಾಂಡರ್ ಎಲ್. ಐಬೊಮ್ಚಾ ಸಿಂಗ್ ಹಾಗೂ ಪೇದೆ ಮೊಹಮ್ಮದ್ ಮಜಾಹಿದ್ ಖಾನ್ (ಮರಣೋತ್ತರ)ಗೆ ನೀಡಲಾಗಿದೆ. ಸಿಬಿಐ ಅಧಿಕಾರಿಗಳಿಗೂ ಪದಕ
ರಾಷ್ಟ್ರದ ಪ್ರತಿಷ್ಠಿತ ತನಿಖಾ ಸಂಸ್ಥೆಯಾದ ಸಿಬಿಐನ 32 ಅಧಿಕಾರಿಗಳಿಗೆ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ. ಇವರಲ್ಲಿ, ಪಶ್ಚಿಮ ಬಂಗಾಲದ ಶಾರದಾ ಚಿಟ್ ಫಂಡ್ ಹಗರಣ ಹಾಗೂ 2ಜಿ ಹಗರಣಗಳನ್ನು ಯಶಸ್ವಿಯಾಗಿ ಬೇಧಿಸಿದ್ದ ಅಧಿಕಾರಿಗಳೂ ಸೇರಿದ್ದಾರೆ. ಶೌರ್ಯ ಪದಕ: ಸಿಆರ್‌ಪಿಎಫ್ಗೆ ಸಿಂಹಪಾಲು
ದೇಶದ ಅತೀ ದೊಡ್ಡ ಅರೆಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಗೆ ರಾಷ್ಟ್ರಪತಿಯಿಂದ ನೀಡಲಾಗುವ ಶೌರ್ಯ ಪದಕಗಳಲ್ಲಿ ಸಿಂಹಪಾಲು (75) ಸಂದಿದೆ. ಒಟ್ಟು 946 ಪದಕಗಳಲ್ಲಿ 180 ಪದಕಗಳನ್ನು ಉಗ್ರರು ಹಾಗೂ ನಕ್ಸಲರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಶೌರ್ಯ ಮೆರೆದ ಭದ್ರತಾ ಸಿಬಂದಿಗೆ ಘೋಷಿಸಲಾಗಿದೆ. ಇದಲ್ಲದೆ 89 ಪೊಲೀಸರಿಗೆ ವಿಶಿಷ್ಟ ಸೇವಾ ಪದಕ ನೀಡಲಾಗುತ್ತಿದ್ದು, 677 ಪೊಲೀಸರಿಗೆ ಪ್ರಶಂಸನೀಯ ಸೇವಾ ಪದಕ ಘೋಷಿಸಲಾಗಿದೆ. ಅಲ್ಲದೆ, ಸಿಬಿಐ ಅಧಿಕಾರಿಗಳಿಗೂ ಪದಕ ಘೋಷಿಸಲಾಗಿದೆ. ಭಾರತದ ವೀರಪುತ್ರನಿಗೆ ವೀರಚಕ್ರ
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿ ನಂದನ್ ವರ್ಧಮಾನ್ ಅವರಿಗೆ ಗುರುವಾರ ವೀರಚಕ್ರ ನೀಡಿ ಗೌರವಿಸಲಾಗುತ್ತದೆ. ಬಾಲಾ ಕೋಟ್ ದಾಳಿಯಾದ ಮರುದಿನ (ಫೆ. 27) ನಡೆದ ಕಾರ್ಯಾಚರಣೆ ವೇಳೆ ಅಭಿನಂದನ್ ಪಾಕಿಸ್ಥಾನದ ಸೈನಿಕರಿಗೆ ಸಿಕ್ಕಿಬಿದ್ದಿದ್ದರು. ಅಲ್ಲದೆ, ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನೂ ಅಭಿನಂದನ್ ಹೊಡೆದುರುಳಿಸಿದ್ದರು. ಇದು ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಸಿತ್ತು. ಅನಂತರ ಮಾ. 1ರಂದು ಪಾಕಿಸ್ಥಾನ ಅವರನ್ನು ಬಿಡುಗಡೆಗೊಳಿಸಿತ್ತು.