ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನದ ಹಳೇ ತಲೆಮಾರಿನ ಹುಲಿ “ವಿಕ್ರಮ್” ಇಂದು ಮೃತಪಟ್ಟಿದೆ.
2003ರಲ್ಲಿ ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಿಂದ ನಾಲ್ಕು ವರ್ಷದ ಮರಿಯನ್ನು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗಿತ್ತು ಅಂದಿನಿಂದ ಇಂದಿನವರೆಗೆ ಪಿಲಿಕುಳಕ್ಕೆ ಬರುತ್ತಿದ್ದ ಸಂದರ್ಶಕರಿಗೆ ವಿಕ್ರಮ್ ಸುಲಭವಾಗಿ ವೀಕ್ಷಣೆಗೆ ಸಿಗುತ್ತಿತ್ತು ಎನ್ನುತ್ತಾರೆ ಅಧಿಕಾರಿಗಳು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹುಲಿ ಪಶು ವೈದ್ಯಾಧಿಕಾರಿಗಳ ಚಿಕಿತ್ಸೆಯಲ್ಲಿ ವಿಶ್ರಾಂತಿಯನ್ನು ಪಡೆಯುತಿತ್ತು, ಇತ್ತೀಚಿನ ದಿನಗಳಲ್ಲಿ ದೃಷ್ಟಿಹೀನತೆ, ಸಂದಿವಾತ, ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಆದರೆ ಕಳೆದ ಒಂದು ವಾರದಿಂದ ಆಹಾರವನ್ನು ಸೇವಿಸದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದೆ.
ವಿಕ್ರಮ್ ಹುಲಿಗೆ ಕದಂಬ, ಕೃಷ್ಣ, ವಿನಯ, ಅಕ್ಷಯ , ಮಂಜು, ಅಮರ್, ಅಕ್ಬರ್,ಅಂತೋನಿ, ಒಲಿವರ್ ಎಂಬ ಹತ್ತು ಮರಿಗಳಿದ್ದು ಅವುಗಳನ್ನು ದೇಶದ ವಿವಿಧ ಮೃಗಾಲಯಗಳಿಗೆ ಕಳುಹಿಸಿಕೊಡಲಾಗಿದೆ.
ಸಾಮಾನ್ಯವಾಗಿ ಹುಲಿಗಳ ಜೀವಿತಾವಧಿ ಮೃಗಾಲಯಗಳಲ್ಲಿ 16 ರಿಂದ 18 ವರ್ಷಗಳು ಇರುತ್ತವೆ ಎನ್ನಲಾಗಿದೆ.