Advertisement
ಕಿಶೋರ್ ಡಿ. ಶೆಟ್ಟಿ ಮಾಲಕತ್ವದ ಲಕುಮಿ ಸಿನಿ ಕ್ರಿಯೇಷನ್ ಬ್ಯಾನರ್‌ನಡಿ ಸಿದ್ಧಗೊಂಡ ಈ ಚಿತ್ರ ದ.ಕ. ಹಾಗೂ ಉಡುಪಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮುಂಬಯಿಯಲ್ಲಿ ಈ ತನಕ ತೆರೆಕಂಡ ಎಲ್ಲ 15 ಪ್ರದರ್ಶನಗಳು ಹೌಸ್‌ಫುಲ್ ಆಗಿದ್ದವು. ಚಿತ್ರ 50 ದಿನಗಳಲ್ಲಿ 2.5 ಕೋ.ರೂ. ಗಳಿಸಿದೆ ಎಂದು ನಿರ್ಮಾಪಕ ರೋಹನ್ ಶೆಟ್ಟಿ ತಿಳಿಸಿದ್ದಾರೆ.
ಮಲ್ಪೆಯಲ್ಲಿ ನಡೆಯುವ ಮುಕ್ತ ಫಿಲ್ಮ್ ಅವಾರ್ಡ್‌ನ 21 ವಿಭಾಗಗಳಲ್ಲಿ 12ರಲ್ಲಿ ಆಯ್ಕೆಯಾಗಿದ್ದು, ಇದರಲ್ಲಿ ಬಹುತೇಕ ಅವಾರ್ಡ್‌ಗಳನ್ನು ಪಿಲಿಬೈಲ್ ಯಮುನಕ್ಕ ತನ್ನದಾಗಿಸಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರದ ಯಶಸ್ಸಿನ ಬಳಿಕ ಮುಂದೆ ಇದೇ ತಂಡದಿಂದ “ಎಕ್ಕಸಕ-2′, “ಮೈ ನೇಮ್ ಈಸ್ ಅಣ್ಣಪ್ಪ’, “ಇಂಗ್ಲಿಷ್’ ತುಳುಚಿತ್ರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
Related Articles
Advertisement
ಯಮುನಕ್ಕನ ಪಾತ್ರದಲ್ಲಿ ಕಿರುತೆರೆ ಖ್ಯಾತಿಯ ಚಂದ್ರಕಲಾ ಮೋಹನ್ ಕಾಣಿಸಿಕೊಂಡಿದ್ದು, ನಾಯಕನಾಗಿ ಪೃಥ್ವಿ ಅಂಬರ್ ಹಾಗೂ ನಾಯಕಿಯಾಗಿ ಸೋನಾಲ್ ಮೊಂತೆರೊ ಅಭಿನಯಿಸಿದ್ದಾರೆ. ನವೀನ್ ಡಿ.ಪಡೀಲ್, ಅರವಿಂದ ಬೋಳಾರ, ಭೋಜರಾಜ್ ವಾಮಂಜೂರು, ಮಂಜು ರೈ ಮೂಳೂರು, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ದೀಪಕ್ ರೈ, ಮೋಹನ್ ಕೊಪ್ಪಲ ತಾರಾಗಣದಲ್ಲಿದ್ದಾರೆ.