Advertisement
ಪ್ರಾಯೋಗಿಕವಾಗಿ ಕ್ಕಿ6421 ವಿಮಾನವು ಬೆಳಗ್ಗೆ 11 ಗಂಟೆಗೆ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ. ಇದರಲ್ಲಿ ಕೇವಲ ಲಸಿಕೆ ಹಾಕಿದ ಸಿಬಂದಿ ಮತ್ತು ಪ್ರಯಾಣಿಕರನ್ನು ಮಾತ್ರ ವಿಮಾನದಲ್ಲಿ ಕರೆದೊಯ್ಯಲಾಯಿತು. ತಪಾಸಣೆ ವೇಳೆಯಲ್ಲೂ ಸಂಪೂರ್ಣ ಲಸಿಕೆ ಹಾಕಿದ ಸಿಬಂದಿಯಷ್ಟೇ ಸೇವೆ ಸಲ್ಲಿಸಿದರು. ಅಪರಾಹ್ನ 2 ಗಂಟೆಗೆ ದೋಹಾಕ್ಕೆ ಈ ವಿಮಾನ ಹಿಂತಿರುಗಿದೆ.
Related Articles
Advertisement
ಸುರಕ್ಷತೆ, ಗ್ರಾಹಕ ಸೇವೆಯ ಗುಣಮಟ್ಟದಲ್ಲಿ ಕತಾರ್ ಏರ್‌ವೇಸ್ ಮುಂಚೂಣಿಯಲ್ಲಿದೆ. ಕೋವಿಡ್ ಸಾಂಕ್ರಾಮಿಕ ಹರಡುವ ಮೊದಲು ಕತಾರ್ ಏರ್‌ವೇಸ್ ಐದು ಬಾರಿ ವರ್ಷದ ಸ್ಕೈಟ್ರಾಕ್ಸ್ ವಿಮಾನಯಾನವನ್ನು ಪಡೆದ ಮೊದಲ ಮತ್ತು ಏಕೈಕ ವಿಮಾನಯಾನ ಸಂಸ್ಥೆಯಾಗಿದೆ.
ಕಳೆದ ವರ್ಷ ಎಪ್ರಿಲ್ ಆರಂಭದಲ್ಲಿ ಸಾಂಕ್ರಾಮಿಕ ರೋಗವು ಹೆಚ್ಚಳವಾದಾಗ ಲಕ್ಷಾಂತರ ಪ್ರಯಾಣಿಕರನ್ನು ವಾಪಸಾಗಿಸಲು ಮತ್ತು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ವಿಮಾನ ಹಾರಾಟವನ್ನು ಮಾಡಿತ್ತು. ಅಲ್ಲದೇ ಸುರಕ್ಷತೆ ಮತ್ತು ನೈರ್ಮಲ್ಯದ ಇತ್ತೀಚಿನ ಆವಿಷ್ಕಾರಗಳನ್ನೂ ಕಾರ್ಯಗತಗೊಳಿಸಿದೆ. ಲಸಿಕೆ ಹಂಚಿಕೆ ವಿಶ್ವದಾದ್ಯಂತ ವೇಗ ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕತಾರ್ ಏರ್‌ವೇಸ್ ಪ್ರಯಾಣಿಕರು, ಪ್ರಯಾಣ ಪಾಲುದಾರರು, ಕುಟುಂಬ ಮತ್ತು ಸ್ನೇಹಿತರನ್ನು ಒಂದುಗೂಡಿಸಿ ಅಗತ್ಯ ಸಂಪರ್ಕ ಒದಗಿಸಲು ಅತಿದೊಡ್ಡ ಜಾಗತಿಕ ನೆಟ್‌ವರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಕತಾರ್ ಏರ್‌ವೇಸ್ 5 ಲಕ್ಷಕ್ಕಿಂತಲೂ ಹೆಚ್ಚಿನ ವೈದ್ಯಕೀಯ ಸಾಮಗ್ರಿಗಳ ಸರಬರಾಜು, 20 ದೇಶಗಳಿಗೆ 2 ಕೋಟಿ ಡೋಸ್ ಕೋವಿಡ್- 19 ಲಸಿಕೆಗಳನ್ನು ತಲುಪಿಸಿದೆ ಎಂದರು.
ಸಂಪೂರ್ಣ ಸುರಕ್ಷೆ
ಕತಾರ್ ಏರ್‌ವೇಸ್‌ನಿಂದ ಸಂಪೂರ್ಣ ಲಸಿಕೆ ಹಾಕಿದ ಪ್ರಯಾಣಿಕರು ಮತ್ತು ಸಿಬಂದಿ ವಿಶ್ವದ ಮೊದಲ ಹಾರಾಟದ ಭಾಗವಾಗಿರುವುದು ಸಂತೋಷ ಹಾಗೂ ಗೌರವದ ವಿಷಯ. ಅಲ್ಲಿ ಸಂಪೂರ್ಣ ಲಸಿಕೆ ಹಾಕಿದ ಸಿಬಂದಿಯೊಂದಿಗೆ ಚೆಕ್ ಇನ್ ನಲ್ಲಿ ಸ್ವಾಗತ ದೊರೆಯಿತು. ಕೋವಿಡ್ ಪ್ರೋಟೋಕಾಲ್ ಅನ್ನು ಸಂಪೂರ್ಣ ಸುರಕ್ಷೆ ಯೊಂದಿಗೆ ಅಂತಾರಾಷ್ಟ್ರೀಯ ವಿಮಾನಯಾನದಲ್ಲಿ ನಿರ್ವಹಿಸಬಹುದು ಎಂಬುದನ್ನು ಕತಾರ್ ಏರ್‌ವೇಸ್ ಜಗತ್ತಿಗೆ ತೋರಿಸಿಕೊಟ್ಟಿದೆ. ಇದು ಮುಂದಿನ ಪ್ರಯಾಣ ಯಾವ ರೀತಿ ಇರುತ್ತದೆ ಎನ್ನುವುದಕ್ಕೆ ಮಾದರಿಯಾಗಿದೆ.
– ಸುಬ್ರಹ್ಮಣ್ಯ ಹೆಬ್ಟಾಗಿಲು, ಉಪಾಧ್ಯಕ್ಷರು, ಐಸಿಸಿ