Advertisement
ರಾಜ್ಯ ಹಲವು ಕಡೆಗಳಲ್ಲಿ ಎಚ್1ಎನ್1 ರೋಗ ಲಕ್ಷಣ ಕಂಡು ಬಂದಿದ್ದು, ಅವಳಿನಗರಕ್ಕೂ ವ್ಯಾಪಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ, ಅವಳಿನಗರದಲ್ಲಿ ಇಂತಹ ರೋಗ ತಡೆ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಗಮನಿಸಿದರೆ ಸ್ವತ್ಛತೆ, ಸೊಳ್ಳೆಗಳ ನಿರ್ಮೂಲನೆಗೆ ಕ್ರಮ ಇತ್ಯಾದಿಗಳ ಕೊರತೆ ಕಾಣಿಸುತ್ತಿದೆ. ಹಂದಿಗಳು ಮಾತ್ರ ರಾಜಾರೋಷವಾಗಿ ಪ್ರತಿ ಬಡಾವಣೆಯಲ್ಲೂ ತಿರುಗಾಡುತ್ತಿವೆ. ಇವುಗಳ ಸ್ಥಳಾಂತರಕ್ಕೆ ಹಂದಿ ಸಾಕುವವರ ತೀವ್ರ ವಿರೋಧವೂ ಅಡ್ಡಿಯಾಗಿದೆ.
Related Articles
Advertisement
ಫಲಪ್ರದವಾಗದ ಸಂತತಿ ನಿಯಂತ್ರಣ ಕ್ರಮ : ಯಾವುದೇ ರಸ್ತೆಗೆ ಹೋದರೂ ಹಿಂಡು ಹಿಂಡು ಬೀದಿ ನಾಯಿಗಳು ಕಂಡು ಬರುತ್ತಿದ್ದು, ರಾತ್ರಿ ವೇಳೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರ ಫಜೀತಿ ಹೇಳ ತೀರದಾಗಿದೆ. ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿ ಕಚ್ಚಿದ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಅದೆಷ್ಟೋ ಸಣ್ಣ-ಪುಟ್ಟ ಪ್ರಕರಣಗಳು ವರದಿಯಾಗುತ್ತಿಲ್ಲ. ನಾಯಿ ಕಡಿತದ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಆದಾಗ, ಪುಟ್ಟ ಮಕ್ಕಳ ಮೇಲೆ ದಾಳಿ ನಡೆದಾಗ ಒಂದೆರೆಡು ದಿನ ಪಾಲಿಕೆ ಎಚ್ಚೆತ್ತಂತೆ ಮಾಡುತ್ತದೆ. ನಂತರ ಮರೆತೇ ಹೋಗುತ್ತದೆ. ಶುಕ್ರವಾರವಷ್ಟೇ ಹಳೇ ಹುಬ್ಬಳ್ಳಿಯ ಅಲ್ತಾಫ್ ನಗರದಲ್ಲಿ ಬೀದಿ ನಾಯಿ ಐದು ಮಕ್ಕಳಿಗೆ ಕಡಿದಿದೆ. ಮಹಾನಗರದ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಅಂದರೆ ಸುಮಾರು 15-20 ಸಾವಿರಕ್ಕೂ ಅಧಿಕ ನಾಯಿಗಳಿವೆ ಎಂದು ಹೇಳಲಾಗುತ್ತಿದೆ. ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಪಾಲಿಕೆ ಕೈಗೊಳ್ಳುತ್ತಿದ್ದರೂ, ಸಂತತಿ ನಿಯಂತ್ರಣ ಫಲಪ್ರದವಾಗಿಲ್ಲ. ಕೆಲವೊಂದು ನಾಯಿಗಳು ಶಸ್ತ್ರಚಿಕಿತ್ಸೆಯಿಂದ ಹೊರಗುಳಿಯುತ್ತವೆ. ಅವುಗಳಿಂದ ಸಂತಾನ ಮುಂದುವರಿಯುತ್ತಿದೆ. ಒಟ್ಟಿನಲ್ಲಿ ಪಾಲಿಕೆಗೆ ಹಂದಿ ಹಾಗೂ ಬೀದಿ ನಾಯಿ ಸವಾಲು ರೂಪದಲ್ಲಿ ಕಾಡತೊಡಗಿದೆ.
ಅವಳಿನಗರದಲ್ಲಿ ಮಾರಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿತ್ಯ 30-40 ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಎರಡು ವರ್ಷದಲ್ಲಿ ಎರಡು ಜೋಡಿ ನಾಯಿಗಳು ಕನಿಷ್ಠ 30 ಮರಿಗಳನ್ನು ಹಾಕುತ್ತಿರುವುದೇ ನಾಯಿಗಳ ಸಂತತಿ ಹೆಚ್ಚಲು ಕಾರಣವಾಗಿದೆ. ಹಂದಿಗಳ ಸಾಗಣೆಗೆ ಪೊಲೀಸ್ ರಕ್ಷಣೆ ಕಾಯಂ ಆಗಿ ದೊರೆಯುವ ಅವಶ್ಯಕತೆ ಇದೆ. ಇಲ್ಲವಾದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. –ಡಾ| ಪ್ರಭು ಬಿರಾದಾರ, ವೈದ್ಯಾಧಿಕಾರಿ ಮಹಾನಗರ ಪಾಲಿಕೆ