Advertisement

Film ಆಸಕ್ತಿ ಕಡಿಮೆ..; ಕರಣ್ ಜೋಹರ್ ಕಾಲೆಳೆದ ಶಾರುಖ್ ಖಾನ್!

09:30 AM Sep 11, 2024 | Team Udayavani |

ಮುಂಬೈ: ಸೂಪರ್‌ಸ್ಟಾರ್ ಶಾರುಖ್ ಖಾನ್( Superstar Shah Rukh Khan ) ಅವರು ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್(Karan Johar) ಅವರು ಚಾಟ್ ಶೋಗಳನ್ನು ಆಯೋಜಿಸಿ ಸಿನಿಮಾಗಳತ್ತ ಕಡಿಮೆ ಆಸಕ್ತಿ ತೋರುತ್ತಿರುವುದಕ್ಕಾಗಿ ಕಾಲೆಳೆದಿದ್ದಾರೆ.

Advertisement

IIFA ಪ್ರಶಸ್ತಿಗಳ ಪತ್ರಿಕಾಗೋಷ್ಠಿಯಲ್ಲೇ ನಿರ್ದೇಶಕ ಕರಣ್ ಜೋಹರ್ ಅವರ ಸಮ್ಮುಖದಲ್ಲೇ ಸಿನಿಮಾಗಳತ್ತ ಕಡಿಮೆ ಸಕ್ರಿಯರಾಗಿದ್ದಕ್ಕಾಗಿ ಶಾರುಖ್ ಅವರು ಕರಣ್ ಕಾಲೆಳೆದರು.

ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಅವಾರ್ಡ್ಸ್ 2024 ಅನ್ನು ಆಯೋಜಿಸಲು ಸಿದ್ಧರಾಗಿರುವ ಶಾರುಖ್ ಮತ್ತು ಕರಣ್, “ಕುಚ್ ಕುಚ್ ಹೋತಾ ಹೈ”, “ಕಭಿ ಖುಷಿ ಕಭಿ ಗಮ್”, “ಮೈ ನೇಮ್ ಈಸ್ ಖಾನ್, “ಕಭಿ ಅಲ್ವಿದಾ ನಾ ಕೆಹನಾ” ನಂತಹ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಮೋಡಿ ಮಾಡಿದ್ದರು.

“ಚಾಟ್ ಶೋಗಳಲ್ಲಿ ಹೆಚ್ಚು ಮಗ್ನರಾಗಿರುವ ಕರಣ್ ಅವರಿಗೆ ”ಯಾವಾಗ ಚಲನಚಿತ್ರಗಳನ್ನು ಮಾಡಲಿದ್ದೀರಿ, ನನ್ನ ಸಹೋದರ”ಎಂದು ಶಾರುಖ್ ನಗುವಿನ ಅಲೆ ಎಬ್ಬಿಸಿದರು.2023 ರಲ್ಲಿ ಕರಣ್ “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಅವರ ಕೊನೆಯ ನಿರ್ದೇಶನ ಚಿತ್ರ ಎಂದು ಶಾರುಖ್ ನೆನಪಿಸಿಕೊಂಡರು. “ಕಾಫಿ ವಿತ್ ಕರಣ್” ಜನಪ್ರಿಯ ಸೆಲೆಬ್ರಿಟಿ ಚಾಟ್ ಶೋ ಆಗಿದೆ.

”ನಾನು ಸಿನಿಮಾ ಮಾಡಬೇಕೆಂದಿದ್ದೇನೆ ಮತ್ತು ಮಾಡಬೇಕಾದುದು ಅದನ್ನೇ” ಎಂದು ಚಲನಚಿತ್ರ ನಿರ್ಮಾಪಕ ಕರಣ್ ಹೇಳಿದರು.

Advertisement

ಮೂರು ದಿನಗಳ IIFA ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸ್ ದ್ವೀಪದಲ್ಲಿ ಸತತ ಮೂರನೇ ವರ್ಷ ಸೆಪ್ಟೆಂಬರ್ 27 ರಿಂದ 29 ರವರೆಗೆ ನಡೆಯಲಿದೆ. ನಟ ವಿಕ್ಕಿ ಕೌಶಲ್ ವೇದಿಕೆಯಲ್ಲಿ ಶಾರುಖ್ ಮತ್ತು ಕರಣ್ ಜತೆಯಾಗಿ ಹೋಸ್ಟ್ ಮಾಡಲಿದ್ದಾರೆ. ಹಿರಿಯ ನಟಿ ರೇಖಾ ಮತ್ತು ಶಾಹಿದ್ ಕಪೂರ್, ಜಾನ್ವಿ ಕಪೂರ್ ಮತ್ತು ಕೃತಿ ಸನೋನ್ ಮುಂತಾದ ತಾರೆಯರ ಶೋ ಕೂಡ ಮುಖ್ಯ ಆಕರ್ಷಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.