ಕಾಸರಗೋಡು: ಮೇಲ್ಪರಂಬ ಸಮೀಪದ ಕಟ್ಟೆಕ್ಕಾಲಿನಲ್ಲಿ ಜ. 6ರಂದು ಬೆಳಗ್ಗೆ 6.30ಕ್ಕೆ ಪಿಕಪ್ ವ್ಯಾನ್ ಮತ್ತು ಲಾರಿ ಪರಸ್ಪರ ಢಿಕ್ಕಿ ಹೊಡೆದು ಪಿಕಪ್ ಚಾಲಕ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
Advertisement
ಮಲಪ್ಪುರಂ ಜಿಲ್ಲೆಯ ಕರುವಂಗಾಲ್ ಕರಿಪೂರ್ ಪಳ್ಳಿಕ್ಕಾಲ್ ಗ್ರಾಮದ ಅಹಮ್ಮದ್ ಅವರ ಪುತ್ರ ಶಬೀರ್ ಆಲಿ ಟಿ.ಕೆ. (35) ಮೃತಪಟ್ಟವರು.
ಪಿಕಪ್‌ನಲ್ಲಿದ್ದ ಮಲಪ್ಪುರಂ ನಿವಾಸಿ ಅಸೀಬ್ (30) ಹಾಗೂ ಲಾರಿಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.