Advertisement

ಪಿಕ್‌ ಪಾಕೆಟ್‌ ಸರ್ಕಾರ; ಡಿ.ಕೆ. ಶಿವಕುಮಾರ್‌ ಆರೋಪ

09:31 PM Sep 04, 2022 | Team Udayavani |

ಬೆಂಗಳೂರು: ಕಮಿಷನ್‌ ಜತೆಗೆ ಇದು “ಪಿಕ್‌ ಪಾಕೆಟ್‌’ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

Advertisement

ಭಾನುವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನಿತ್ಯ ಜನಸಾಮಾನ್ಯರ ಜೇಬು “ಪಿಕ್‌ ಪಾಕೆಟ್‌’ ಮಾಡುತ್ತಿದೆ. ಇದರಿಂದ ಜನ ರೋಸಿ ಹೋಗಿದ್ದಾರೆ. ಈ ಧೋರಣೆ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಕಾಂಗ್ರೆಸ್‌ ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆಗೆ ಜನ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ಜನರ ಆದಾಯ ಪಾತಾಳಕ್ಕೆ ಕುಸಿದಿದೆ. ಈ ಮೂಲಕ ಯುವಕರು, ಮಹಿಳೆಯರು ಸೇರಿ ಸಮಾಜದ ಪ್ರತಿಯೊಬ್ಬ ಪ್ರಜೆಯನ್ನು ಸುಲಿಗೆ ಮಾಡಲಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್‌ ದೆಹಲಿ ಚಲೋ ಹಮ್ಮಿಕೊಂಡಿದೆ. ಜನಸಾಮಾನ್ಯರ ಬದುಕು ಹಸನಾಗಬೇಕು, ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆಯಿಂದ ಎÇÉಾ ವರ್ಗದ ಜನರನ್ನು ರಕ್ಷಿಸಲು ಹೋರಾಟ ನಡೆಸಲಾಗುತ್ತಿದೆ. ಎಲ್ಲರೂ ಈ ಪ್ರತಿಭಟನೆಗೆ ಬೆಂಬಲಿಸಬೇಕು ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next