ಮಾಗಡಿ: ಪ್ರಸ್ತುತ ಸಾಲಿನಲ್ಲಿ ಶೇ.70ರಷ್ಟು ಸಾಲ ವಸೂಲಾತಿಯಾಗಿದ್ದು, ಪಿಕಾರ್ಡ್ ಬ್ಯಾಂಕ್ ರೈತರಿಗೆ ಸಾಲ ನೀಡುವಂತ ಅರ್ಹತೆಪಡೆದಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ರೈತರ ಮನೆಗೆ ಹೋಗಿ ಸದಸ್ಯರ ಸಹಕಾರದಿಂದ ಶೇ.70ರಷ್ಟು ಸಾಲವಸೂಲಾತಿಯಾಗಿದೆ. ಈಗ ಸಾಲ ಕೊಡಲು ಮಂಡಲಿ ತೀರ್ಮಾನಕೈಗೊಂ ಡಿದ್ದು, ಪ್ರಸ್ತುತ ಸಾಲಿನಲ್ಲಿಯೇ ಪಿಕಾರ್ಡ್ ಬ್ಯಾಂಕ್ ಈಗಾಗಲೇ 40 ರೈತರಿಗೆ ಸುಮಾರು 65 ಲಕ್ಷ ರೂ.ಸಾಲ ಮಂಜೂರು ಮಾಡಲಾಗಿದೆ ಎಂದರು.
ಸಾಲಕ್ಕಾಗಿ ಅಗತ್ಯ ದಾಖಲೆ ಕಲ್ಪಿಸಿ: ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆಯ ಬೇಕು. ಸಾಲ ಮಂಜೂರು ಮಾಡಲಿಲ್ಲ ಎಂದು ಆಡಳಿತ ಮಂಡಲಿಯನ್ನು ದೂರುವುದನ್ನು ಬಿಟ್ಟು ದಾಖಲೆ ಒದಗಿಸುವ ಸಂಬಂಧ ಲೋಪ ದೋಷಗಳಿದ್ದರೆ ಸರಿಪಡಿಸಿಕೊಡ ಬೇಕು. ಮಾಹಿತಿ ಕೊರತೆಯಿಂದ ರೈತರು ಸಾಲ ಕೊಡ ಲಿಲ್ಲ ಎಂದು ಆಡಳಿತ ಮಂಡಲಿ ವಿರುದ್ಧ ಆರೋಪ ಮಾಡುತ್ತಾರೆ. ಬ್ಯಾಂಕ್ ಸಿಬ್ಬಂದಿ ಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ದೂರುವುದರಿಂದ ಪ್ರಯೋಜನವಿಲ್ಲ: ನಿರ್ದೇಶಕ ಎನ್.ಗಂಗರಾಜು ಮಾತನಾಡಿ, ಸದಸ್ಯರು ವಾರ್ಷಿಕ ಮಹಾಸಭೆಗೆ ಆಹ್ವಾನ ಪತ್ರಿಕೆ ಕೊಡಲಿಲ್ಲ ಎಂದು ದೂರುವುದರಿಂದ ಪ್ರಯೋಜನವಿಲ್ಲ. ಇದು ರೈತರ ಬ್ಯಾಂಕ್,ಪೋಸ್ಟ್ ಮೂಲಕ ಆಹ್ವಾನ ಪತ್ರಿಕೆ ಹಂಚಿಕೆ ಮಾಡಲಾಗುತ್ತದೆ. ಸಾಲ ಕೊಡಲಿಲ್ಲ ಎಂದು ರೈತರು ಆರೋಪಿಸುವುದು ಸರಿಯಲ್ಲ. ಸರಾಸರಿ ಸಾಲ ವಸೂಲಾತಿ ಆಗದಿದ್ದರೆ ಕೇಂದ್ರ ಕಚೇರಿ ಸಾಲ ಮಂಜೂರಾತಿ ಕೊಡುವುದಿಲ್ಲ. ಸಾಲ ಪಡೆದವರು ಸಮರ್ಪಕವಾಗಿ ಸಾಲ ಹಿಂದಿರಿಗಿಸಿದರೆ ಇತರೆ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಸಕಾಲಕ್ಕೆ ಸಾಲ ಮರು ಪಾವತಿಸುವುದರಿಂದ ಬ್ಯಾಂಕ್ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಅಸಮಾಧಾನ: 9 ಸಾವಿರಕ್ಕೂ ಹೆಚ್ಚು ಸದಸ್ಯರ ಪೈಕಿ ಕೇವಲ 200 ಮಂದಿ ಸದಸ್ಯರು ಭಾಗ ವಹಿಸಿದ್ದರು. ಇದರಿಂದ ಬಹುತೇಕ ಸದಸ್ಯರು ಆಹ್ವಾನ ಪತ್ರಿಕೆ ವಿತರಿಸಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಿರ್ದೇಶಕ ಕೆ.ಟಿ. ಚಂದ್ರಶೇಖರ್ ಮಾತನಾಡಿದರು. ನಿರ್ದೇಶಕರಾದ ಸಿದ್ದೇಗೌಡ, ಸಿ.ಬಿ.ರವೀಂದ್ರ, ಬಿ.ದೇವೇಂದ್ರ ಕುಮಾರ್, ಕೆ.ಜಿ.ನಾಗರಾಜು, ಸರೋಜಮ್ಮ, ನರಸಿಂ ಹಯ್ಯ,ಪಿ.ಚಂದ್ರೇಗೌಡ,ಪ್ರಭಾರವ್ಯವಸ್ಥಪಕ ಎಚ್.ಎ.ಸೋಮಶೇಖರ್ ಹಾಜರಿದ್ದರು.