ಶಹಾಬಾದ: ನಗರದ ಪೊಲೀಸ್ ಠಾಣೆಯಲ್ಲಿ ಆರಕ್ಷಕ ನಿರೀಕ್ಷಕ ಸಂತೋಷ ಹಳ್ಳೂರ ತಾಲೂಕಿನ ರೌಡಿಶೀಟರ್ ಗಳ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದರು.
ತಾಲೂಕಿನ 50ಕ್ಕೂ ಹೆಚ್ಚಿನ ರೌಡಿಶೀಟರ್‌ಗಳ ಪರೇಡ್‌ನ್ನು ನಗರ ಪೊಲೀಸ್ ಠಾಣೆ ಆವರಣದಲ್ಲಿ ನಡೆಸಲಾಯಿತು. ರೌಡಿಶೀಟರ್ ಗಳ ಪರೇಡ್ ನಡೆಸಿ ಮಾತನಾಡಿದ ಸಂತೋಷ ಹಳ್ಳೂರ, ನಿಮ್ಮ ಕೆಲಸ, ನಿಮ್ಮ ಸಂಸಾರ ಅಂತ ನಿಮ್ಮ ಪಾಡಿಗೆ ನೀವು ಇದ್ದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಕಂಡು ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಎಸ್‌ಐ ಸಾತಲಿಂಗಪ್ಪ, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಹುಸೇನ್ ಪಾಷಾ, ಭೀಮಣ್ಣ, ಶ್ರೀಕಾಂತ, ನಿಂಗನಗೌಡ ಪಾಟೀಲ ಇತರರು ಇದ್ದರು.