Advertisement

ಥಿಯೇಟರ್‌ನತ್ತ ಫಿಸಿಕ್ಸ್‌ ಟೀಚರ್‌

04:07 PM May 10, 2022 | Team Udayavani |

“ಫಿಸಿಕ್ಸ್‌ ಟೀಚರ್‌’- ಹೀಗೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಮೇ 27ರಂದು ತೆರೆಕಾಣುತ್ತಿದೆ. ಚಿತ್ರದ ಹೆಸರೇ ಹೇಳುವಂತೆ, “ಫಿಸಿಕ್ಸ್‌ ಟೀಚರ್‌’ ಭೌತಶಾಸ್ತ್ರದ ಶಿಕ್ಷಕ ಮತ್ತು ಅವನ ಜೀವನದ ಸುತ್ತ ನಡೆಯುವ ಚಿತ್ರ.

Advertisement

ಈ ಹಿಂದೆ “ರಾಜಸ್ಥಾನ್‌ ಡೈರೀಸ್‌’ ಚಿತ್ರದಲ್ಲಿ ಅಭಿನಯಿಸಿದ್ದ ಯುವ ನಟ ಸುಮುಖ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಜೊತೆಗೆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಪ್ರೇರಣಾ ಕಂಬಂ ಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆ ರಾಜೇಶ್‌ ನಟರಂಗ, ಮಂಡ್ಯ ರಮೇಶ್‌ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ಸುಮುಖ, “ಇದೊಂದು ಹೊಸ ಜಾನರ್‌ನ ಸಿನಿಮಾ. ಈ ಸಿನಿಮಾವನ್ನು ಕೇವಲ ಒಂದು ಬಾರಿ ನೋಡಬೇಡಿ, ಎರಡ್ಮೂರು ಬಾರಿ ನೋಡಿ. ಪ್ರತಿ ಬಾರಿಯೂ ನಿಮಗೆ ಹೊಸ ಹೊಸ ಅಂಶಗಳು ಗೋಚರಿಸು ತ್ತದೆ’ ಎಂದರು.

ನಾಯಕಿ ಪ್ರೇರಣಾ ಕೂಡಾ ಚಿತ್ರ ಬಿಡುಗಡೆಯ ಖುಷಿ ಹಂಚಿಕೊಂಡರು. “ಇಡೀ ತಂಡಕ್ಕೆ ಒಂದು ಸ್ಪಷ್ಟತೆ ಇದ್ದ ಕಾರಣ ಸಿನಿಮಾ ಬೇಗನೇ ಶೂಟಿಂಗ್‌ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ’ ಎಂದರು. ನಟ ರಾಜೇಶ್‌ ನಟರಂಗ ಕೂಡಾ, ಸುಮುಖ ಅವರ ಯೋಚನೆ ಹಾಗೂ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

“ಪಾಸಿಂಗ್‌ ಶಾಟ್ಸ್‌ ಫಿಲ್ಮ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಫಿಸಿಕ್ಸ್‌ ಟೀಚರ್‌’ ಚಿತ್ರಕ್ಕೆ ಸ್ಕಂದ ಸುಬ್ರಮಣ್ಯ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

Advertisement

ಚಿತ್ರಕ್ಕೆ ರಘು ಗ್ಯಾರಹಳ್ಳಿ ಛಾಯಾಗ್ರಹಣ, ಅಜಯ್‌ ಕುಮಾರ್‌ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next