ದೇವನಹಳ್ಳಿ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ ಆಗುತ್ತದೆ ಎಂದು ಗ್ರಾಪಂ ಸದಸ್ಯ ಐ.ಸಿ.ಗೋಪಿನಾಥ್ ತಿಳಿಸಿದರು.
ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಇಂಡ್ರಸನಹಳ್ಳಿ ಮತ್ತು ಇಲತೊರೆ ಗ್ರಾಮದ ಯುವಕರಿಂದ ಏರ್ಪಡಿಸಿದ್ದ ಮೋದಿ ಕಪ್-ಇಂಡ್ರಸನಹಳ್ಳಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಲ್ಲ ರಾಜಕಾರಣಿಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಬೇಕೆಂಬ ಗುರಿಯನ್ನು ಹೊಂದಿದ್ದು, ಈಗಿನಿಂದಲೇ ಯುವಕರಿಗೆ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತು ತಾಲೂಕಾದ್ಯಂತ ಪಂದ್ಯಾವಳಿ ನಡೆಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಆಕರ್ಷಕ ಬಹುಮಾನ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷ ಪೂರೈಸಿರುವ ಹಿನ್ನೆಲೆ, ಈ ಪಂದ್ಯಾವಳಿಯನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುವುದರ ಮೂಲಕ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಭಾರತೀಯ ಜನತಾ ಪಾರ್ಟಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರತಿ ಯುವ ಕರನ್ನು ಸಂಘಟಿತರಾಗಲೂ ಉತ್ಸಾಹ ತುಂಬುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಪ್ರತಿಭೆ ತೆರೆಯಮೇಲೆ ಬರಲೆಂಬ ಆಸೆಯೋಭಾಲಾಷೆಯ ನ್ನಿಟ್ಟುಕೊಂಡು ನರೇಂದ್ರ ಮೋದಿ ಕಪ್ -ಇಂಡ್ರಸನಹಳ್ಳಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವುದರ ಮೂಲಕ ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಸಮಾಜ ಸೇವಕ ಸಿ.ಕೃಷ್ಣಪ್ಪ ಮಾತನಾಡಿ, ಎಲ್ಲರೂ ಒಟ್ಟಾಗಿ ಕ್ರೀಡೆಯಲ್ಲಿ ಪಾಲ್ಗೊಂಡು ಉತ್ತಮವಾಗಿ ಕ್ರೀಡಾಮನೋಭಾವದಲ್ಲಿ ಆಡಬೇಕು. ಇಂಡ್ರಸನಹಳ್ಳಿ ಮತ್ತು ಇಲತೊರೆ ಗ್ರಾಮದ ಕ್ರಿಕೆಟ್ ಆಟಗಾರರು ಒಂದೇ ತಂಡದಲ್ಲಿ ಆಡುತ್ತಿದ್ದು, ಎಲ್ಲಾ ತಂಡಗಳು ಉತ್ತಮವಾಗಿ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಬಹುಮುಖ್ಯವಾಗಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತಾಗಬೇಕು ಎಂದರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ: ಪಂದ್ಯಾವಳಿಯಲ್ಲಿ ಈಗಾಗಲೇ 7-8 ತಂಡಗಳು ನೋಂದಾಯಿಸಿಕೊಂಡಿದ್ದಾರೆ. ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 3 ಸಾವಿರ ನಗದು, ಟಗರು, ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾ ನವಾಗಿ 20 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ತೃತಿಯ ಬಹುಮಾನವಾಗಿ 10 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಪ್ರೋತ್ಸಾಹಿ ಸಲಾಗುತ್ತಿದ್ದು, ಜೂ.12ರಂದು ಆಸಕ್ತ ತಂಡಗಳು ಬಂದು ನೋಂದಾಯಿಸಿಕೊಂಡು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಹ ನೀಡಲಾಗಿದೆ.
ಸಮಾಜ ಸೇವಕ ವಿಜಯಣ್ಣ, ಮುನಿಯಪ್ಪ, ಅಪ್ಪಯ್ಯ, ಮುಖಂಡ ಮುನಿರಾಜು, ಯುವಕ ಮುಖಂಡ ಅನಿಲ್‌ಕುಮಾರ್, ಪುನೀತ್, ಪ್ರದೀಪ್, ಪ್ರಕಾಶ್, ಪ್ರಶಾಂತ್ ಮತ್ತು ತಿಂಡ್ಲು ಮಧು, ಕ್ರಿಕೆಟ್ ಪಂದ್ಯಾವಳಿಗೆ ಆಗಮಿಸಿದ ಕ್ರೀಡಾಪಟುಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.