Advertisement

ಬಿಹಾರ: ಪರೀಕ್ಷಾ ಪ್ರವೇಶ ಪತ್ರದಲ್ಲಿ ಪ್ರಧಾನಿ ಮೋದಿ,ಧೋನಿ,ರಾಜ್ಯಪಾಲರ ಚಿತ್ರ; ತನಿಖೆಗೆ ಆದೇಶ

07:55 PM Sep 11, 2022 | Team Udayavani |

ಪಾಟ್ನಾ: ಬಿಹಾರದ ವಿಶ್ವವಿದ್ಯಾಲಯವೊಂದರ ಪರೀಕ್ಷಾ ಪ್ರವೇಶ ಪತ್ರದಲ್ಲಿ ಭಾರೀ ಎಡವಟ್ಟು ನಡೆದಿದೆ.

Advertisement

ಬಿಎ ತೃತೀಯ ವರ್ಷದ ವಿದ್ಯಾರ್ಥಿಗಳ ಪ್ರವೇಶಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಖ್ಯಾತ ಕ್ರಿಕೆಟಿಗ ಎಂ.ಎಸ್‌.ಧೋನಿ, ಬಿಹಾರ ರಾಜ್ಯಪಾಲ ಫ‌ಗು ಚೌಹಾಣ್‌ರ ಚಿತ್ರ ಕಾಣಿಸಿಕೊಂಡಿದೆ.

ದರ್ಭಾಂಗ ಜಿಲ್ಲೆಯಲ್ಲಿನ ಲಲಿತ್‌ ನಾರಾಯಣ ಮಿಥಿಲಾ ವಿವಿಯಿಂದ ಮಾನ್ಯತೆ ಪಡೆದಿರುವ ಮಧುಬನಿ, ಸಮಸ್ತಿಪುರ, ಬೇಗುಸರಾಯ್‌ ಜಿಲ್ಲೆಗಳ ಕಾಲೇಜುಗಳ ಪ್ರವೇಶಪತ್ರದಲ್ಲಿ ಇಂತಹ ಎಡವಟ್ಟು ಸಂಭವಿಸಿದೆ.

ಇದಕ್ಕೆ ಕಾರಣವೇನು, ಯಾರು ತಪ್ಪಿತಸ್ಥರು ಎನ್ನುವುದು ಗೊತ್ತಾಗಿಲ್ಲ. ಇದನ್ನು ತನಿಖೆ ಮಾಡಿ ಕಠಿಣಕ್ರಮ ತೆಗೆದುಕೊಳ್ಳುವುದಾಗಿ ವಿವಿಯ ರಿಜಿಸ್ಟ್ರಾರ್‌ ಮುಷ್ತಾಖ್‌ ಅಹ್ಮದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next