Advertisement

ಫೋಟೋಗ್ರಫಿಗೆ ಕಲಾತ್ಮ ಕತೆ ಅಗತ್ಯ

07:07 PM Dec 14, 2020 | Suhan S |

ಕೊಟ್ಟಿಗೆಹಾರ: ಛಾಯಾಗ್ರಾಹಕನಿಗೆ ತಾಂತ್ರಿಕ ಜ್ಞಾನದ ಜೊತೆಗೆ ಕಲಾತ್ಮಕತೆ ಇದ್ದಾಗ ಒಂದು ಪರಿಪೂರ್ಣ ಛಾಯಾಚಿತ್ರ ಮೂಡಿ ಬರಲು ಸಾಧ್ಯ ಎಂದು ಖ್ಯಾತಚಿತ್ರ ಕಲಾವಿದ ಸುರೇಶ್‌ಚಂದ್ರ ದತ್ತ ಹೇಳಿದರು.

Advertisement

ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಫೋಟೋಗ್ರಫಿ ಸೊಸೈಟಿ ವತಿಯಿಂದ ನಡೆದ ಎರಡು ದಿನಗಳ ಫೋಟೋಗ್ರಫಿ ಕಾರ್ಯಾಗಾರಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೋರ್ವ ವ್ಯಕ್ತಿಯು ಆಸಕ್ತಿಯಿಂದ ತೆಗೆದ ಚಿತ್ರವು ಆಳವಾಗಿ ಕಥೆ ಹೇಳುವಂತಿರಬೇಕು. ತೇಜಸ್ವಿ ಅವರು ಅಪಾರ ತಾಳ್ಮೆ ಹಾಗೂ ಶ್ರದ್ದೆಯಿಂದ ಹಕ್ಕಿಗಳ ಚಿತ್ರಗಳನ್ನು ತೆಗೆಯುತ್ತಿದ್ದರು. ಇಂತಹ ಕ್ರೀಯಾಶೀಲತೆಯಮನೋಭಾವ ಮೈಗೂಡಿಸಿಕೊಂಡು ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯ ಎಂದರು.

ಮೂಡಬಿದಿರೆಯ ಖ್ಯಾತ ಛಾಯಾಗ್ರಾಹಕ ಡಾ| ಕೃಷ್ಣಮೋಹನ್‌ ಮಾತನಾಡಿ, ಆಸಕ್ತಿ ಹುಡುಕಾಟವು ನಮ್ಮಲ್ಲಿದ್ದರೆ ಎಂತಹ ಚಿತ್ರಗಳನ್ನಾದರೂ ನಾವು ತೆಗೆಯಬಹುದು. ನಮ್ಮ ಸುತ್ತಮುತ್ತಲಿನ ಪರಿಸರಗಳೇ ನಮಗೆ ಸ್ಫೂರ್ತಿದಾಯಕ ತಾಣಗಳಾಗಿವೆ ಎಂದರು.

ಚಿಕ್ಕಮಗಳೂರು ಸಹಮತ ಸಂಸ್ಥೆಯ ಸ್ಥಾಪಕ ಐವನ್‌ ಡಿಸಿಲ್ವ, ಪೂರ್ಣಚಂದ್ರ ಪ್ರತಿಷ್ಠಾನದನಿರ್ದೇಶಕ ಬಾಪು ದಿನೇಶ್‌, ಸಾಹಿತಿ ಪೂರ್ಣೇಶ್‌ ಮತ್ತಾವರ, ಅತುಲ್‌ ರಾವ್‌, ಕುಲದೀಪ್‌ ಮಾಕೋನಹಳ್ಳಿ, ಉದಯಪ್ರಸಾದ್‌, ಪತ್ರಕರ್ತ ಸತೀಶ್‌, ನವೀನ್‌, ಆಕರ್ಷ್‌ ಇದ್ದರು.

Advertisement

ಫೋಟೋಗ್ರಫಿ ಕಾರ್ಯಾಗಾರದ ಎರಡನೇ ದಿನ ಸಮಾರೋಪ ಸಮಾರಂಭದಲ್ಲಿ ಲೇಖಕ ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಪ್ರದೀಪ್‌ ಕೆಂಜಿಗೆ ಮಾತನಾಡಿ, ತೇಜಸ್ವಿ ಅವರ ಕರ್ವಾಲೊ ಕಾದಂಬರಿಯಲ್ಲಿ ಒಂದು ದೃಶ್ಯದಲ್ಲಿ ಕೊಳ್ಳವೊಂದರ ಹಿನ್ನಲೆಯಲ್ಲಿ ಹಠಾತನೇ ಕಾಣಿಸಿಕೊಳ್ಳುವ ಮಿಂಚುಳ್ಳಿಯೊಂದರ ವರ್ಣನೆಯನ್ನು ಪಂಚಭೂತಗಳನ್ನು ಸಮೀಕರಿಸಿ ಅದ್ಬುತವಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಛಾಯಾಗ್ರಾಹಕರೂ ಆಗಿದ್ದ ತೇಜಸ್ವಿ ಅವರು ಆ ದೃಶ್ಯವನ್ನು ಕ್ಯಾಮರಾ ಕಣ್ಣಿನಲ್ಲಿ ಕಟ್ಟಿಕೊಡಲು ಪ್ರಯತ್ನಿಸಿರಬಹುದು. ಆದರೆ ವಿಜ್ಞಾನ, ತಂತ್ರಜ್ಞಾನದ ಮಿತಿಯನ್ನು ಅರಿತು ಸಾಹಿತ್ಯದಲ್ಲಿ ಆ ದೃಶ್ಯವನ್ನು ಕಟ್ಟಿಕೊಟ್ಟಿರಬಹುದು ಎಂಬುದು ನನ್ನ ಅನಿಸಿಕೆಯಾಗಿದೆ ಎಂದರು. ಚಿಕ್ಕಮಗಳೂರು ಸಹಮತ ಸಂಸ್ಥೆಯ ಸ್ಥಾಪಕ ಐವನ್‌ ಡಿಸಿಲ್ವ ಮಾತನಾಡಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಫೋಟೋಗ್ರಫಿ ಸೊಸೈಟಿ ವತಿಯಿಂದ ನಡೆಯುವ ಮೂರನೇ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಣಿಯ ಸ್ಥಳಗಳಿಗೆ ಬೇಟಿ ನೀಡಿ ಅಲ್ಲಿಯೇ ವಿಷಯತಜ್ಞರನ್ನು ಕರೆಸಿ ಕಾರ್ಯಾಗಾರ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next