Advertisement

ಮಲಯಾಳಂ ನಟನ ಫೋಟೋ: ಕರ್ನಾಟಕ ಪಠ್ಯಪುಸ್ತಕ ಸಂಘ ಸ್ಪಷ್ಟನೆ

11:54 AM Feb 01, 2022 | Team Udayavani |

ಬೆಂಗಳೂರು :ಪಠ್ಯದಲ್ಲಿ ಮಲಯಾಳಂ ನಟನ ಫೋಟೋ ಬಳಸಿರುವ ಕುರಿತಾಗಿ ಪತ್ರಿಕಾ ವರದಿ ಮತ್ತು ಸಂಸದ ಡಿ.ಕೆ. ಸುರೇಶ್ ಆರೋಪಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘ ಮಂಗಳವಾರ ಸ್ಪಷ್ಟನೆ ನೀಡಿದೆ.

Advertisement

ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವಿಷಯಕ್ಕೆ ಸ್ಪಷ್ಟಿಕರಣವಾಗಿ, ಪಠ್ಯದಲ್ಲಿ ಅಂಚೆಯಣ್ಣನ ಚಿತ್ರಕ್ಕೆ ಮಲಯಾಳಂ ನಟನ ಫೋಟೋ ಗೆ ಸಂಸದ ಡಿ.ಕೆ. ಸುರೇಶ್ ಟೀಕೆ ‘ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಕುಂಚಾಕೋ ಬಾಬನ್ ರವರ ಚಿತ್ರವನ್ನು ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ‘ ಅಂಚೆಪೇದೆ ‘ ಶೀರ್ಷಿಕೆ ಜೊತೆ ಅಚ್ಚು ಹಾಕಲಾಗಿದೆ ಪಠ್ಯಪುಸ್ತಕಗಳಲ್ಲಿನ ಚಿತ್ರಗಳನ್ನು ಶಿಕ್ಷಣ ಸಮಿತಿಯು ಯಾವುದೇ ಸಂಶೋಧನೆ ಮಾಡದೆ ಅಂತರ್ಜಾಲದಿಂದ ತೆಗೆದು ಪ್ರಕಟಿಸುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ರವರು ಸವಾಲು ಹಾಕಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ : ಪುಸ್ತಕದಲ್ಲಿ ‘ಅಂಚೆಯಣ್ಣ’ ಚಿತ್ರಕ್ಕೆ ಮಲಯಾಳಂ ನಟನ ಫೋಟೊ: ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್

ಪ್ರಕಟವಾಗಿರುವ ವರದಿಗಳನ್ನು ಪರಿಶೀಲಿಸಲಾಗಿ ಕರ್ನಾಟಕ ಪಠ್ಯಕ್ರಮದ 1 ರಿಂದ 10 ನೇ ತರಗತಿವರೆಗಿನ ಯಾವುದೇ ತರಗತಿಯ ಯಾವುದೇ ವಿಷಯದ ಪಠ್ಯಪುಸ್ತಕಗಳಲ್ಲಿ ಮೇಲ್ಕಂಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಮುದ್ರಿತವಾಗಿರುವ ಯಾವುದೇ ಚಿತ್ರವನ್ನು ಮುದ್ರಿಸಿರುವುದಿಲ್ಲ. ಪಠ್ಯಪುಸ್ತಕ ಸಂಘದಿಂದ ಪಠ್ಯಪುಸ್ತಕದಲ್ಲಿಯೂ ಸಹ ಸದರಿ ಚಿತ್ರ ಇರುವುದಿಲ್ಲ ಎಂದು ಸ್ಪಷ್ಟಿಕರಣ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next