Advertisement

500 ರೂ. ನೋಟುಗಳ ಹಾಸಿಗೆ ಮೇಲೆ ಅಸ್ಸಾಂ ರಾಜಕಾರಣಿ! ಇದು ಹಳೆಯದು ಎಂದು ಸಮಜಾಯಿಷಿ

10:43 PM Mar 27, 2024 | Team Udayavani |

ನವದೆಹಲಿ: 500 ರೂ. ನೋಟುಗಳ ಹಾಸಿಗೆ ಮೇಲೆ ಅಸ್ಸಾಂ ರಾಜಕಾರಣಿ ಬೆಂಜಮಿನ್‌ ಬಾಸುಮಟರಿ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಅದರಲ್ಲಿ ಬೆಂಜಮಿನ್‌ ಶರ್ಟ್‌ ತೆಗೆದು ಮಲಗಿದ್ದು, ಎದೆ, ಮುಖ ಮತ್ತು ಕೈಗಳ ಮೇಲೆ 500 ರೂ. ನೋಟುಗಳನ್ನು ಸುರಿಯಲಾಗಿದೆ. ಈ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಬೆಂಜಮಿನ್‌ “ಇದು 5 ವರ್ಷ ಹಳೆಯ ಫೋಟೋ. ಅದರಲ್ಲಿರುವ ನಗದು ಸಹೋದರರಿಗೆ ಸೇರಿದ್ದು. ಅವರ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಸಮಯದಲ್ಲಿ ನನ್ನ ಸ್ನೇಹಿತರು ಈ ಫೋಟೋ ತೆಗೆದು, ನಂತರ ಬ್ಲಾಕ್‌ವೆುàಲ್‌ ಮಾಡಿದರು’ ಎಂದು ಬೆಂಜಮಿನ್‌ ಸ್ಪಷ್ಟಪಡಿಸಿದ್ದಾರೆ.

ಈ ಫೋಟೋವನ್ನು ಆಪ್‌ ಪಂಜಾಬ್‌ ಘಟಕ ಜಾಲ ತಾಣಗಳಲ್ಲಿ ಅಪ್‌ಲೋಡ್‌ ಮಾಡಿ, ಅಸ್ಸಾಂ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ. ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌(ಯುಪಿಪಿಎಲ್‌) ಪಕ್ಷದ ನಾಯಕರಾಗಿರುವ ಅವರನ್ನು ಜ.10ರಂದು ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಇದನ್ನೂ ಓದಿ: Shiv Sena: ಉದ್ದವ್‌ ಶಿವಸೇನೆ ಅಭ್ಯರ್ಥಿಗಳ ಪಟ್ಟಿ ರಿಲೀಸ್‌: ಸ್ಥಳೀಯ ಕೈ ನಾಯಕತ್ವ ಗರಂ

Advertisement

Udayavani is now on Telegram. Click here to join our channel and stay updated with the latest news.

Next