ಕರಾವಳಿಯಲ್ಲಿ ಹುಟ್ಟಿ ಅವಕಾಶಗಳ ಬೆನ್ನೇರಿ ಬಣ್ಣದ ಲೋಕದಲ್ಲಿ ಮಿಂಚಿದ ನಟಿ ಅಮಿತಾ ಕುಲಾಲ್ ಇಂದು ಪ್ರೇಕ್ಷಕರ ʼಮನೆ ಮೆಚ್ಚಿದ ಮಗಳುʼ ಆಗಿ ಪ್ರಶಸ್ತಿಯ ಗರಿಯನ್ನು ಪಡೆದುಕೊಂಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಒಲವಿನ ನಿಲ್ದಾಣʼ ಎಂಬ ಧಾರಾವಾಹಿಯ ಮೂಲಕ ಕನ್ನಡದ ಕಿರುತೆರೆಗೆ ಕಾಲಿಟ್ಟ ಅಮಿತಾ ಮೊದಲು ತೆಲುಗಿನ ಧಾರಾವಾಹಿ ʼರೌಡಿ ಗಾರಿ ಪೆಳ್ಳಂʼ ನಲ್ಲಿ ನಾಯಕಿಯಾಗಿ ಮಿಂಚಿದವರು. ಆ ಬಳಿಕ ಕನ್ನಡದ ʼಒಲವಿನ ನಿಲ್ದಾಣʼದಲ್ಲಿ ʼತಾರಿಣಿʼ ಆಗಿ ಕಡಿಮೆ ಅವಧಿಯಲ್ಲಿ ಪ್ರೇಕ್ಷಕರ ಮನೆಮನದಲ್ಲಿ ಉಳಿದವರು.
ಅವರಿಗೆ ʼಅನುಬಂಧ ಆವಾರ್ಡ್ಸ್ʼ ನಲ್ಲಿ ಜನಮೆಚ್ಚಿದ ಮಗಳು ಎಂಬ ಪ್ರಶಸ್ತಿ ಲಭಿಸಿದೆ.
ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ಅವರು ಮಿಂಚಿದ್ದಾರೆ ಸೃಜನ್ ಲೋಕೇಶ್ ಅವರೊಂದಿಗೆ ʼಹ್ಯಾಪಿ ಜರ್ನಿʼ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಮುಂಬೈಯಲ್ಲಿ ಹಲವಾರು ಫ್ಯಾಷನ್ ಶೋಗಳಲ್ಲ ರೂಪದರ್ಶಿಯಾಗಿ ಹೆಜ್ಜೆ ಹಾಕಿದ್ದಾರೆ ಅಮಿತಾ.