Advertisement

200ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ

02:21 PM Mar 15, 2022 | Team Udayavani |

ತುಮಕೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಭಯ ಹೋಗಲಾಡಿಸಿ ಪರೀಕ್ಷೆಗೆ ಸಿದ್ಧಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಏರ್ಪಡಿಸಲಾಗಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕನ್ನಡ, ಇಂಗ್ಲೀಷ್‌ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ನುರಿತ ಶಿಕ್ಷಕರಿಂದ ಉತ್ತರ ಕಂಡುಕೊಂಡರು.

Advertisement

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಭಾಗವಹಿಸಿ ವಿದ್ಯಾರ್ಥಿಗಳ ದೂರವಾಣಿ ಕರೆ ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ, ಪ್ರಶ್ನೆಗಳಿಗೆ ಉತ್ತರ ಹಾಗೂ ಮಾರ್ಗದರ್ಶನ ನೀಡಿದರು.

ಪ್ರಶ್ನೆ ಪತ್ರಿಕೆ ವಿನ್ಯಾಸ, ಮಾದರಿ ಪ್ರಶ್ನೆ ಪತ್ರಿಕೆ, ರೂಪಣಾತ್ಮಕ ಪರೀಕ್ಷೆಗಳ ಬಗ್ಗೆ, ಪರೀûಾ ತಯಾರಿ ಬಗ್ಗೆ, ನೆನಪಿನಲ್ಲಿ ಉಳಿಯುವಂತೆ ಅಭ್ಯಾಸ ಮಾಡುವ ವಿಧಾನ, ವಿಷಯವಾರು ಪಠ್ಯದ ಬಗ್ಗೆ, ಹೆಚ್ಚು ಅಂಕಗಳನ್ನು ಗಳಿಸುವ ಕುರಿತು ವಿದ್ಯಾರ್ಥಿಗಳ ಹಾಗೂ ಪಾಲಕರ ಪ್ರಶ್ನೆಗಳಿಗೆ ವಿಷಯ ತಜ್ಞರು ದೂರವಾಣಿ ಮೂಲಕವೇ ಪರಿಹಾರ ನೀಡಿದರು.

35ಕ್ಕೂ ಹೆಚ್ಚು ಪ್ರಶ್ನೆ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕರೆ ಮಾಡಿ ಇದರ ಸದುಪಯೋಗ ಪಡೆದುಕೊಂಡರು. ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಕರಣ, ಗದ್ಯ-ಪದ್ಯಗಳ ಭಾಗಗಳನ್ನು ನೆನಪಿಟ್ಟುಕೊಳ್ಳುವ ಬಗ್ಗೆ ಪತ್ರಲೇಖನ ಛಂದಸ್ಸು, ಅಲಂಕಾರಗಳ ಕುರಿತ 35ಕ್ಕೂ ಹೆಚ್ಚು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಬಗೆಹರಿಸಿಕೊಂಡರು.

ಇಂಗ್ಲೀಷ್‌ ವಿಷಯಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳು 75ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳನ್ನು ಕೇಳಿ ಸೂಕ್ತ ಉತ್ತರ ಗಳನ್ನು ಪಡೆದುಕೊಂಡರು. ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳು ವ್ಯಾಕರಣ 3-4 ಅಂಕದ ಪ್ರಶ್ನೆ, ಪತ್ರ ಲೇಖನ, ಪದ್ಯ, ಪ್ರಬಂಧಗಳ ಕುರಿತಾದ ಪ್ರಶ್ನೆಗಳನ್ನು ಕೇಳಿದರು.

Advertisement

ಉಳಿದಂತೆ ಗಣಿತ ವಿಷಯದಲ್ಲಿ 1 ಮತ್ತು 4 ಅಂಕದ ಆನ್ವಯಿಕ ಪ್ರಶ್ನೆಗಳು, ಪ್ರಮೇಯ ಗಳು ಮತ್ತು ಗಣಿತದಲ್ಲಿ ಪ್ರಶ್ನೆಗಳು ಸರಳ ಅಥವಾ ಕಠಿಣವಾಗಿರುವ, ಶ್ರೇಣಿಗಳು, ಗ್ರಾಫ್ ಮತ್ತು ರಚನೆ, ರೇಖಾ ಗಣಿತದ ಬಗ್ಗೆ ಪ್ರಶ್ನೆ ಕೇಳಿ ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಸಿಕೊಂಡರು. ಸಮಾಜ ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳು ಕರೆ ಮಾಡಿ ಮುಖ್ಯ ಪರೀಕ್ಷೆ 3-4 ಅಂಕದ ಪ್ರಶ್ನೆಗಳಿಗೆ ಉತ್ತರಿಸುವ, ಭಾರತದ ನಕ್ಷೆ ಮತ್ತು ಸ್ಥಳ ಗುರುತಿಸುವ, ಘಟನೆ ಮತ್ತು ದಿನಾಂಕಗಳನ್ನು ನೆನಪಿಟ್ಟುಕೊಳ್ಳುವ ಬಗ್ಗೆ ಮಾಹಿತಿ ಪಡೆದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ನಂಜಯ್ಯ ಸೇರಿದಂತೆ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಸಂಪನ್ಮೂಲ ಅಧಿಕಾರಿಗಳಾದ ವಾಣಿ, ಎಂ.ಸಿ. ಶೈಲಜಾ, ಬಿ.ಎಸ್‌.ಶಾಂತಲಾ, ಸಿ.ಜಗದೀಶ್‌, ಗಂಗಾನಾಯ್ಕ, ಕೆ.ಗಂಗಯ್ಯ, ಕುಮುದಾ ಮತ್ತಿತರರು ಹಾಜರಿದ್ದರು.

ರಸಾಯನಿಕ ಸಮೀಕರಣ ಪ್ರಶ್ನೆ : ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕರೆ ಮಾಡಿ ಅನ್ವಯಿಕ ಪ್ರಶ್ನೆ, ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಓದಿ ನೆನಪಿಟ್ಟುಕೊಳ್ಳುವ, ವಿಜ್ಞಾನದ ಚಿತ್ರಗಳನ್ನು ಬರೆದು ಭಾಗಗಳನ್ನು ಗುರುತಿಸುವ ಹಾಗೂ ರಸಾಯನಿಕ ಸಮೀಕರಣ ಸೂತ್ರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸೂಕ್ತ ಉತ್ತರಗಳನ್ನು ಪಡೆದರು

Advertisement

Udayavani is now on Telegram. Click here to join our channel and stay updated with the latest news.

Next