Advertisement

ಟಿ20 ಪಂದ್ಯ: ಆತಿಥೇಯ ಐರ್ಲೆಂಡ್‌ ವಿರುದ್ಧ ನ್ಯೂಜಿಲ್ಯಾಂಡ್‌ಗೆ ಜಯ

06:08 PM Jul 19, 2022 | Team Udayavani |

ಬೆಲ್‌ಫಾಸ್ಟ್‌: ಆತಿಥೇಯ ಐರ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯವನ್ನು ನ್ಯೂಜಿಲ್ಯಾಂಡ್‌ 31 ರನ್ನುಗಳಿಂದ ಜಯಿಸಿದೆ.

Advertisement

ಬೆಲ್‌ಫಾಸ್ಟ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 173 ರನ್‌ ಮಾಡಿದರೆ, ಐರ್ಲೆಂಡ್‌ 18.2 ಓವರ್‌ಗಳಲ್ಲಿ 142ಕ್ಕೆ ಆಲೌಟ್‌ ಆಯಿತು.

ನ್ಯೂಜಿಲ್ಯಾಂಡ್‌ ಸರದಿಯಲ್ಲಿ ಗ್ಲೆನ್‌ ಫಿಲಿಪ್ಸ್‌ ಅಜೇಯ 69 ರನ್‌ ಹೊಡೆದರು. ಬೌಲಿಂಗ್‌ನಲ್ಲಿ ಮಿಂಚಿದವರು ಲಾಕೀ ಫ‌ರ್ಗ್ಯುಸನ್‌. ಅವರ ಸಾಧನೆ 14ಕ್ಕೆ 4 ವಿಕೆಟ್‌.

ಐರ್ಲೆಂಡ್‌ ಪರ 29 ರನ್‌ ಮಾಡಿದ ಕರ್ಟಿಸ್‌ ಕ್ಯಾಂಫ‌ರ್‌ ಅವರದೇ ಹೆಚ್ಚಿನ ಗಳಿಕೆ. ಜೋಶುವ ಲಿಟ್ಲ 4 ವಿಕೆಟ್‌ ಕೆಡವಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-8 ವಿಕೆಟಿಗೆ 173 (ಫಿಲಿಪ್ಸ್‌ ಔಟಾಗದೆ 69, ನೀಶಮ್‌ 29, ಲಿಟ್ಲ 35ಕ್ಕೆ 4, ಅಡೈರ್‌ 49ಕ್ಕೆ 2). ಐರ್ಲೆಂಡ್‌-18.2 ಓವರ್‌ಗಳಲ್ಲಿ 142 (ಕ್ಯಾಂಫ‌ರ್‌ 29, ಅಡೈರ್‌ 25, ಫ‌ರ್ಗ್ಯುಸನ್‌ 14ಕ್ಕೆ 4, ನೀಶಮ್‌ 19ಕ್ಕೆ 2, ಸ್ಯಾಂಟ್ನರ್‌ 36ಕ್ಕೆ 2).
ಪಂದ್ಯಶ್ರೇಷ್ಠ: ಗ್ಲೆನ್‌ ಫಿಲಿಪ್ಸ್‌.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next