Advertisement

Philippe croizon: ಸೋಲಬಾರದು ಅಂದುಕೊಂಡವ ಸಾಧಕನಾದ!

10:35 AM Oct 24, 2023 | Team Udayavani |

ಇದು 1994ರ ನಡೆದ ಘಟನೆ. ಫ್ರಾನ್ಸ್ ನ ಫಿಲಿಪ್‌ ಕ್ರೊಯಿಝಾನ್‌ (philippe croizon) ಎಂಬಾತ ಟಿ.ವಿ. ಆಂಟೆನಾ ಸರಿಪಡಿಸಲೆಂದು ಮಹಡಿ ಹತ್ತಿದ. ಆ ಸಂದರ್ಭದಲ್ಲಿ ಹೈವೋಲ್ಟೇಜ್‌ ವೈರ್‌ ತಗುಲಿ ಭಾರೀ ಶಾಕ್‌ ಹೊಡೆಯಿತು. ಪರಿಣಾಮ, ಕೈ ಕಾಲಿನ ನರಗಳೆಲ್ಲ ಸ್ವಾಧೀನ ಕಳೆದುಕೊಂಡವು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದರೆ, ಬದುಕಲೇಬೇಕೆಂಬ ಆಸೆ ಇದ್ದರೆ- ಕೈ ಕಾಲು ಎರಡನ್ನೂ ಕತ್ತರಿಸಬೇಕಾಗುತ್ತದೆ ಎಂದು ವೈದ್ಯರು ಹೇಳಿದರು.

Advertisement

ಫಿಲಿಪ್‌ ಬೆಚ್ಚಲಿಲ್ಲ. “ಹಾಗೇ ಮಾಡಿ’ ಅಂದ. ಮುಂದೆ ಮರದ ಕಾಲು ಹಾಕಿಸಿಕೊಂಡ. ಕೃತಕ ಕೈಗಳಿಗೆ ತನ್ನನ್ನು ಒಗ್ಗಿಸಿಕೊಂಡ. ಆಮೇಲೆ ಅವನು ಸುಮ್ಮನಾಗಲಿಲ್ಲ. ಈಜು ಕಲಿತ. ಈಜು ಚಾಂಪಿಯನ್‌ಶಿಪ್‌ಗ್ಳಲ್ಲಿ ಭಾಗವಹಿಸಿದ. ಸೋತ, ಗೆದ್ದ. ಗೆದ್ದ, ಸೋತ. ನಂತರ, 20 ಮೈಲಿ ದೂರದ ಇಂಗ್ಲಿಷ್‌ ಕಡಲ್ಗಾಲುವೆ­ಯನ್ನು 24 ಗಂಟೆಗಳಲ್ಲಿ ಈಜುವ ಹೊಸದೊಂದು ಸಾಹಸಕ್ಕೆ ಕೈಹಾಕಿದ. ಮುಂದೆ, ಆ ಪ್ರಯತ್ನದಲ್ಲಿ ಗೆದ್ದೂ ಬಿಟ್ಟ. ಕೃತಕ ಕೈಕಾಲುಗಳನ್ನು ಹೊಂದಿಯೂ ಈತ ಇಂಥದೊಂದು ಮಹತ್ಸಾಧನೆ ಮಾಡಿದ್ದು ಕಂಡು ಎಲ್ಲರಿಗೂ ಅಚ್ಚರಿ.

ಈ ಸಾಧನೆಯ ಹಿಂದಿನ ಗುಟ್ಟೇನು ಎಂದು ಹಲವರು ಕೇಳಿದಾಗ ಫಿಲಿಪ್‌ ಹೀಗೆಂದಿದ್ದ: “ಕೃತಕ ಕೈ-ಕಾಲುಗಳು ಜೊತೆಯಾದ ನಂತರ ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲಿನದು- ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಥವಾ ಎಲ್ಲರ ಅನುಕಂಪ ಬಯಸುತ್ತಾ ಅಬ್ಬೇಪಾರಿಯಂತೆ ಬದುಕುವುದು. ಎರಡನೆಯದು- ಬದುಕಿನಲ್ಲಿ ಕ್ಷಣಕ್ಷಣವೂ ಸೆಣಸುತ್ತಾ ಧೀರನಂತೆ ಬದುಕುವುದು… ನಾನು ಎರಡನೆಯದನ್ನು ಆಯ್ಕೆ ಮಾಡಿಕೊಂಡೆ. ಗೆಲ್ಲಬೇಕು ಎಂದು ನಿರ್ಧರಿಸಿದ್ದೇ ನನ್ನ ಸಾಧನೆಯ ಗುಟ್ಟು…’

Advertisement

Udayavani is now on Telegram. Click here to join our channel and stay updated with the latest news.

Next