Advertisement

ಪಿಎಚ್‌ಸಿ ಕೇಂದ್ರಗಳಿಗಿಲ್ಲ ಆ್ಯಂಬುಲೆನ್ಸ್‌ ವ್ಯವಸ್ಥೆ

01:40 PM Feb 28, 2023 | Team Udayavani |

ಗುಡಿಬಂಡೆ: ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಸೇರಿ 3 ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಿದ್ದು, ಇವುಗಳಲ್ಲಿ ಎರಡು ಕೇಂದ್ರಗಳಿಗೆ ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ.

Advertisement

ತಾಲೂಕಿನಲ್ಲಿ 2 ಹೋಬಳಿ ಕೇಂದ್ರಗಳಿದ್ದು, ಇಲ್ಲಿ ಹಂಪಸಂದ್ರ, ಎಲ್ಲೋಡು, ಬೀಚಗಾನಹಳ್ಳಿ ಗ್ರಾಪಂ ಕೇಂದ್ರಗಳಲ್ಲಿ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 3 ಕೇಂದ್ರಗಳಿಗೂ ಕಸಬಾ ಹೋಬಳಿ ಗ್ರಾಮಗಳೇ ಸೇರಿವೆ. ಸೋಮೇನಹಳ್ಳಿ ಹೋಬಳಿ ಕೇಂದ್ರಕ್ಕೆ 50 ಕ್ಕೂ ಹೆಚ್ಚು ಗ್ರಾಮಗಳು, ಕೇಂದ್ರ ಸ್ಥಾನದಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದರೂ ಆ ಭಾಗದಲ್ಲಿ ಒಂದು ಪಿ.ಹೆಚ್‌.ಸಿ. ಕೇಂದ್ರ ಸಹ ಇಲ್ಲದೆ ಇರುವುದು ದುರಂತವೇ ಸರಿ.

ಮೂರು ಆರೋಗ್ಯ ಕೇಂದ್ರಗಳಲ್ಲೂ ಎಂಬಿಬಿಎಸ್‌ ವೈದ್ಯರಿದ್ದು, ಎನ್‌ಎಚ್‌ಎಂ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವದಾದಿಯರು ಕರ್ತವ್ಯಕ್ಕೆ ಹಾಜರಾಗದಿರುವ ಕಾರಣಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಹಂಪಸಂದ್ರ,ಬೀಚಗಾನಹಳ್ಳಿ ಚಿಕಿತ್ಸಾ ಕೇಂದ್ರಗಳಲ್ಲಿ ಆ್ಯಂಬುಲೆನ್ಸ್‌ ಕೊರತೆಇದ್ದು, ಸಮಯಕ್ಕೆ ಸರಿಯಾಗಿ 108 ಮತ್ತು ಸಾರ್ವಜನಿಕಆಸ್ಪತ್ರೆಯ ಆ್ಯಂಬುಲೆನ್ಸ್‌ಗಳ ಸೌಲಭ್ಯ ಸಿಗದೆ ದುರ್ಘ‌ಟನೆ ನಡೆದ ಉದಾಹರಣೆಗಳಿವೆ.

ಸೋಮೇನಹಳ್ಳಿ ಭಾಗದ ಜನರಿಗೆ ತುರ್ತು ಚಿಕಿತ್ಸೆ ಬೇಕಾಗಿದ್ದು, ಆ್ಯಂಬುಲೆನ್ಸ್‌ಗಳಿಗೆ ಕರೆ ಮಾಡಿ ಪೆರೇಸಂದ್ರದಿಂದ ಅಥವಾ ಗುಡಿಬಂಡೆಯಿಂದ ವಾಹನಗಳುಹೋಗಬೇಕಾದ ಸ್ಥಿತಿ ಇದೆ. ಜತೆಗೆ ಖಾಸಗಿ ಮೊರೆಹೋಗಬೇಕಾದ ಸ್ಥಿತಿಯೂ ಇದೆ. ಸರ್ಕಾರ ಕೂಡಲೇಆ್ಯಂಬುಲೆನ್ಸ್‌ ವ್ಯವಸ್ಥೆ ಒದಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಅಗತ್ಯ ಸಿಬ್ಬಂದಿಯನ್ನು ಕೂಡಲೇ ನೇಮಿಸಿ, ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಬೇಕಾಗಿದೆ. -ಲಕ್ಷ್ಮೀನಾರಾಯಣಪ್ಪ, ಹಂಪಸಂದ್ರ ಗ್ರಾಪಂ ಅಧ್ಯಕ್ಷ

Advertisement

ಗುಡಿಬಂಡೆ ತಾಲೂಕಿನಲ್ಲಿ 3 ಪಿಎಚ್‌ಸಿಗಳಿದ್ದು, ಒಂದು ಕೇಂದ್ರಕ್ಕೆ ಆ್ಯಂಬುಲೆನ್ಸ್‌ ವ್ಯವಸ್ಥೆಯಿದ್ದು, ಹಂಪಸಂದ್ರಮತ್ತು ಬೀಚಗಾನಹಳ್ಳಿ ಕೇಂದ್ರಕ್ಕೆ ಗುಡಿಬಂಡೆ ಯಿಂದ ವ್ಯವಸ್ಥೆಮಾಡಲಾಗುತ್ತಿದೆ. ಸೋಮೇನಹಳ್ಳಿ ಹೋಬಳಿ ಭಾಗಕ್ಕೆಪೆರೇಸಂದ್ರದಿಂದ ತುರ್ತು ವ್ಯವಸ್ಥೆ ಮಾಡುತ್ತಿದ್ದು, ಎಲ್ಲಾ ಕೇಂದ್ರಗಳಲ್ಲೂ ವೈದ್ಯರು, ಸಿಬ್ಬಂದಿ ಇದ್ದಾರೆ. -ನರಸಿಂಹಮೂರ್ತಿ, ಟಿಎಚ್‌ಒ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next