Advertisement

ಕಣ್ಣಿನ ಪೊರೆ ನಿವಾರಣೆಗೆ ವರದಾನ ಫೇಕೊ ಇಮಲ್ಸಿಫಿಕೇಶನ್‌

06:00 PM Feb 06, 2023 | Team Udayavani |

ಡಾ| ಚಾಲ್ಸ್ರ್ ಕೆಲ್ಮನ್‌ ಕ್ಯಾಟರ್ಯಾಕ್ಟ್ ಆದ ಕಣ್ಣಿನ ಮಸೂರದಿಂದ ಕ್ಯಾಟರ್ಯಾಕ್ಟ್ ಪೀಡಿತ ಭಾಗವನ್ನು ಕರಗಿಸಿ ಅತೀ ಸೂಕ್ಷ್ಮ ಗಾಯದ ಮೂಲಕ ಹೊರತೆಗೆಯುವ ಆವಿಷ್ಕಾರ ಮಾಡಿದರು. ಹಾಗಾಗಿ ಅವರನ್ನು ಫೇಕೊ ಇಮಲ್ಸಿಫಿಕೇಶನ್‌ ಚಿಕಿತ್ಸೆಯ ಪಿತಾಮಹ ಎಂದು ಕರೆಯಲಾಗುತ್ತದೆ.

Advertisement

ಈ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾಟರ್ಯಾಕ್ಟ್ ಅಥವಾ ಪೊರೆಯಿಂದ ಮಸುಕಾದ ಲೆನ್ಸನ್ನು ಅಲಾó ಸೌಂಡ್‌ ಸಾಧನ ಬಳಸಿ ಕರಗಿಸಲಾಗುತ್ತದೆ. ಬಳಿಕ ಇಂಜಕ್ಟರನ್ನು ಉಪಯೋಗಿಸಿ ಅದೇ ಜಾಗದಲ್ಲಿ ಹೊಸ ಮಡಚಬಹುದಾದ ಮಸೂರವನ್ನು ಅಳವಡಿಸಲಾಗುವುದು. ಈಗ ಲಭ್ಯವಿರುವ ಸಾಧನಗಳ ಮೂಲಕ ಕೇವಲ 2.2 ಮಿ.ಮೀ. ಅಥವಾ ಅದಕ್ಕಿಂತಲೂ ಕಿರಿದಾದ ಗಾಯದ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು. ಇನ್ನೊಂದು ವೈಶಿಷ್ಟ್ಯವೆಂದರೆ, ಇದರಲ್ಲಿ ಆಪ್ಟಿಕಲ್ ಸೆನ್ಸರ್‌ ಇರುವುದರಿಂದ ಈ ಶಸ್ತ್ರಚಿಕಿತ್ಸೆ ಅತ್ಯಂತ ಸುರಕ್ಷಿತ. ಅತಿ ಸೂಕ್ಷ್ಮ ಗಾಯವಾದುದರಿಂದ ರೋಗಿ ಬಹಳ ಉತ್ತಮ ದೃಷ್ಟಿ ಪಡೆಯಲು ಸಾಧ್ಯ.

ಶಸ್ತ್ರಚಿಕಿತ್ಸೆ ನಡೆಸಿದ ಕೆಲವೇ ತಾಸುಗಳಲ್ಲಿ ಮನೆಗೆ ಹೋಗಬಹುದು. ಇದು ರೋಗಿಗಳ ಸಮಯವನ್ನು ಉಳಿಸುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದವರು ಬೇಗನೆ ದೈನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಮೊದಲ ಶಸ್ತ್ರಚಿಕಿತ್ಸೆ
ಸರ್‌ ಹೆರಾಲ್ಡ್ ರಿಡ್ಲೆ ಎಂಬ ನೇತ್ರ ಶಸ್ತ್ರಚಿಕಿತ್ಸಕ ಪ್ರಪ್ರಥಮವಾಗಿ ಕಣ್ಣಿನ ಒಳಗಿನ ಪೊರೆ ತೆಗೆದು ಅದೇ ಜಾಗದಲ್ಲಿ ಹೊಸ ಮಸೂರ ಅಳವಡಿಸಿದರು. ಇದಕ್ಕೆ ಇಂಟ್ರಾ ಓಕ್ಯುಲರ್‌ ಲೆನ್ಸ್‌ ಎನ್ನುತ್ತಾರೆ. ಈಗ ಹೊಸ ತರಹದ ಮಡಚಬಲ್ಲ ಮಸೂರಗಳು ಬಂದಿವೆ. ಎಸ್ಪೆರಿಕ್‌ ಲೆನ್ಸ್‌ ಬಳಸುತ್ತೇವೆ. ದೃಷ್ಟಿ ಮಂಜಾಗಿದ್ದಲ್ಲಿ ಟೋರಿಕ್‌ ಲೆನ್ಸನ್ನು ಬಳಸಬಹುದು. ದೂರ ಮತ್ತು ಹತ್ತಿರದ ದೃಶ್ಯಗಳನ್ನು ನೋಡಲು ಮಲ್ಟಿಫೋಕಲ್ ಲೆನ್ಸನ್ನು ಆಳವಡಿಸಬಹುದು.

ಶಸ್ತ್ರಚಿಕಿತ್ಸೆಯ ಬಳಿಕ

ಶಸ್ತ್ರಚಿಕಿತ್ಸೆಯ ಅನಂತರ ಜಾಗರೂಕತೆ ಬಹಳ ಮುಖ್ಯ. ಕೈಯನ್ನು ಸ್ವಚ್ಛ ಮಾಡಿ ವೈದ್ಯರು ಹೇಳಿದಂತೆ ಕಣ್ಣಿಗೆ ಔಷಧವನ್ನು ಹಾಕಬೇಕು. ತುಂಬಾ ತೀವ್ರವಾದ ವ್ಯಾಯಮ ಮಾಡಬಾರದು. ದೂರ ಪ್ರಯಾಣವನ್ನು ಮಾಡುವುದು ಉತ್ತಮವಲ್ಲ. ಕೆಂಪು ಕಣ್ಣಿನ ಕಾಯಿಲೆ ಇರುವವರಿಂದ ದೂರವಿರಬೇಕು. ಧೂಳು ಮತ್ತು ಹೊಗೆಯಿಂದ ದೂರವಿರುವುದು ಉತ್ತಮ. ನಮಗೆಲ್ಲ ಹೆಮ್ಮೆಯ ವಿಷಯ ಎಂದರೆ ಈ ಕಣ್ಣಿನ ಪ‌ರೆಗೆ ಭಾರತದ ಹೆಸರಾಂತ ಶಸ್ತ್ರಚಿಕಿತ್ಸಕರಾದ ಶುಶ್ರುತ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಯನ್ನು ಕ್ರಿ.ಪೂ. 600 ಅಂದರೆ ಎರಡೂವರೆ ಸಾವಿರ ವರ್ಷಗಳ ಹಿಂದೆಯೆ ನಡೆಸಿದರು. ಅನಂತರ ಕಾಲಕಾಲಕ್ಕೆ ಹತ್ತು ಹಲವು ಅಭಿವೃದ್ಧಿ ಶಸ್ತ್ರಚಿಕಿತ್ಸೆಯಲ್ಲಿ ನಡೆಯಿತು. ಈಗಿನ ಫೇಕೊ ಇಮಲ್ಸಿಫಿಕೇಶನ್‌ ಅದನ್ನು ಅತ್ಯುತ್ತಮ ಮಟ್ಟಕ್ಕೆ ತಂದಿದೆ ಎಂದರೆ ಅತಿಶಯೋಕ್ತಿಯಲ್ಲ.
• •ಡಾ| ಪ್ರಶಾಂತ್‌ಕುಮಾರ್‌ ಶೆಟ್ಟಿ ಕಣ್ಣಿನ ವೈದ್ಯರು, ಪ್ರಶಾಂತ್‌ ನೇತ್ರಾಲಯ, ಬಂಟ್ಸ್‌ ಹಾಸ್ಟೆಲ್ ರಸ್ತೆ, ಮಂಗಳೂರು

ಯಾರಿಗೆಲ್ಲ ಬರಬಹುದು?

·ಎಕ್ಸ್‌ರೇ ಅಥವಾ ಗಾಮಾ ಕಿರಣಗಳಿಗೆ ಒಡ್ಡಿಕೊಂಡು ಕೆಲಸ ಮಾಡುವವರು.
·ಕಬ್ಬಿಣದ ಕುಲುಮೆ, ಗಾಜಿನ ಕಾರ್ಖಾನೆಯ ಕೆಲಸ ಮಾಡುವವರು.
·ವಿದ್ಯುತ್‌ ಶಾರ್ಟ್‌ ಸರ್ಕೀಟ್ ಆಗಿ ಶಾಕ್‌ನಿಂದ ಕೂಡ ಪೊರೆ ಬರಬಹುದು.
·ಕಣ್ಣಿಗೆ ಏಟು ಬಿದ್ದಾಗ ಪೊರೆ ಬರುವ ಸಾಧ್ಯತೆ ಇದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next