Advertisement

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ: ಪಿಜಿ, ಹೋಂ ಸ್ಟೇ ನಿಯಮ ಕಟ್ಟುನಿಟ್ಟುಗೊಳಿಸಿ ಆದೇಶ

12:53 AM Dec 24, 2022 | Team Udayavani |

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷ ನರೆಟ್‌ ವ್ಯಾಪ್ತಿಯಲ್ಲಿ ಪೇಯಿಂಗ್‌ ಗೆಸ್ಟ್‌ (ಪಿಜಿ), ಹಾಸ್ಟೆಲ್‌, ಹೋಂ ಸ್ಟೇ ಮೊದಲಾದವುಗಳಿಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿ ಪೊಲೀಸ್‌ ಆಯುಕ್ತರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Advertisement

ಹಾಸ್ಟೆಲ್‌, ಹೋಂಸ್ಟೇ, ಪೇಯಿಂಗ್‌ ಗೆಸ್ಟ್‌, ಸರ್ವಿಸ್‌ ಅಪಾರ್ಟ್‌ ಮೆಂಟ್‌, ವಾಣಿಜ್ಯ ಉದ್ದೇಶದ ಗೆಸ್ಟ್‌ ಹೌಸ್‌, ಶಿಕ್ಷಣ ಸಂಸ್ಥೆಗಳು ನಡೆಸು ತ್ತಿರುವ ವಸತಿ ಗೃಹಗಳ ಮಾಲಕರು/ಪಾಲುದಾರರು, ಆಡಳಿತ ಮಂಡಳಿಯವರು ಕಡ್ಡಾಯ ವಾಗಿ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು. ಮಾಲಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು, ಸಂಸ್ಥೆಯ ರಿಜಿಸ್ಟರ್‌ ಪುಸ್ತಕವನ್ನು ಕಡ್ಡಾಯವಾಗಿ ಪ್ರತೀ ವರ್ಷ ಪೊಲೀಸ್‌ ಆಯುಕ್ತರ ಕಚೇರಿಗೆ ಹಾಜರುಪಡಿಸಬೇಕು. ಸ್ಥಳೀಯ ಪೊಲೀಸ್‌ ಠಾಣೆಗೂ ನೀಡಬೇಕು.

ವಿದೇಶಿ ವಿದ್ಯಾರ್ಥಿಗಳು ವಾಸ್ತವ್ಯವಿದ್ದರೆ ಅವರು ಬಂದ 24 ಗಂಟೆಗಳೊಳಗೆ ಅವರ ಪೂರ್ಣ ಮಾಹಿತಿಯನ್ನು ಪಾಸ್‌ಪೋರ್ಟ್‌, ವೀಸಾದ ವಿವರ ಸಹಿತವಾಗಿ ನೀಡಬೇಕು. ಅವರು ವಾಸ್ತವ್ಯ ತೆರವಗೊಳಿಸಿದರೂ ಮಾಹಿತಿ ನೀಡಬೇಕು. ಉತ್ತಮ ಗುಣಮಟ್ಟದ ಸಿಸಿ ಕೆಮರಾಗಳನ್ನು ಅಳವಡಿಸ‌ಬೇಕು. ಅವುಗಳಲ್ಲಿ ಒಂದು ಕೆಮರಾ ಮುಖ್ಯ ದ್ವಾರಕ್ಕೆ/ ರಸ್ತೆಗೆ ಮುಖ ಮಾಡಿರಬೇಕು. ಸಿಸಿ ಕೆಮರಾಗಳ ಫ‌ೂಟೇಜ್‌ಗಳು ಕನಿಷ್ಠ 30 ದಿನಗಳವರೆಗೆ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು, ಠಾಣಾಧಿಕಾರಿಗಳು ಕೇಳಿದಾಗ ಮಾಹಿತಿ ಸಲ್ಲಿಸಬೇಕು. ಯಾವುದೇ ಅಪರಾಧ ಘಟನೆಗಳು, ಮಾದಕ ದ್ರವ್ಯ ಚಟುವಟಿಕೆ, ಅನೈತಿಕ ಚಟುವಟಿಕೆ ಮತ್ತು ಯಾವುದೆ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಎಲ್ಲ ಪೇಯಿಂಗ್‌ ಗೆಸ್ಟ್‌ ಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯ ಅತಿಥಿಗಳನ್ನು ಹೊರತುಪಡಿಸಿ ಉಳಿದ ಅತಿಥಿಗಳಿಗೆ ಅವರ ಮೂಲವಿಳಾಸಕ್ಕೆ ಸಂಬಂಧಿಸಿದ ಪೊಲೀಸ್‌ ಕಚೇರಿ ಯಿಂದ ಕಡ್ಡಾಯವಾಗಿ ಪೊಲೀಸ್‌ ಕ್ಲಿಯರೆನ್ಸ್‌ ಪ್ರಮಾಣಪತ್ರ ಪಡೆದು ಕೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷೆ, ಭದ್ರತೆಯ ಜವಾಬ್ದಾರಿಯನ್ನು ಸಂಬಂಧಪಟ್ಟವರೆ ವಹಿಸಿಕೊಂಡು ಈ ಬಗ್ಗೆ ಮುಚ್ಚಳಿಕೆ ಪ್ರಮಾಣಪತ್ರವನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಸಲ್ಲಿಸ ಬೇಕು ಮೊದಲಾದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯು ಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಹಾಸ್ಟೆಲ್‌, ಹೋಂಸ್ಟೇ, ಪೇಯಿಂಗ್‌ ಗೆಸ್ಟ್‌, ಸರ್ವಿಸ್‌ ಅಪಾರ್ಟ್‌
ಮೆಂಟ್‌, ವಾಣಿಜ್ಯ ಉದ್ದೇಶದ ಗೆಸ್ಟ್‌ ಹೌಸ್‌, ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿ ಗೃಹಗಳಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ವಿದೇಶ/ಹೊರ ಜಿಲ್ಲೆ, ರಾಜ್ಯಗಳಿಂದ ಅನೇಕ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ವಾಸ್ತವ್ಯ ಮಾಡಿಕೊಂಡಿದ್ದು, ಅನೈತಿಕ/ ಅಕ್ರಮ ಚಟು ವಟಿಕೆಗಳನ್ನು ತಡೆಗಟ್ಟುವ ಸಲು ವಾಗಿ, ಇತ್ತೀಚೆಗೆ ನಗರದಲ್ಲಿ ಸಂಭ ವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಶಂಕಿತ ಉಗ್ರ ಮಹಮ್ಮದ್‌ ಶಾರೀಕ್‌ ಮೈಸೂರಿನಲ್ಲಿ ನಕಲಿ ಗುರುತು ಕಾರ್ಡ್‌ ನೀಡಿ ವಾಸ್ತವ್ಯವಿದ್ದ. ಬಳಿಕ ಅಲ್ಲಿ ನಿಯಮ ಕಟ್ಟುನಿಟ್ಟು ಮಾಡಲಾಗಿದೆ. ಅದೇ ರೀತಿ ಮಂಗಳೂರಿನಲ್ಲಿಯೂ ಆದೇಶ ಹೊರಡಿಸಿದ್ದೇನೆ.
– ಎನ್‌. ಶಶಿಕುಮಾರ್‌,
ಪೊಲೀಸ್‌ ಆಯುಕ್ತರು, ಮಂಗಳೂರು

“ಉದಯವಾಣಿ’ ಜಾಗೃತಿ ಮೂಡಿಸಿತ್ತು
ಮಂಗಳೂರಿನಲ್ಲಿಯೂ ಪಿಜಿ ನಿಯಮಗಳನ್ನು ಕಟ್ಟುನಿಟ್ಟುಗೊಳಿಸುವ ಸಾಧ್ಯತೆ ಬಗ್ಗೆ ಉದಯವಾಣಿ ಡಿ. 5ರಂದು ವಿಶೇಷ ವರದಿ ಪ್ರಕಟಿಸಿ ಪಿಜಿ ಮಾಲಕರಲ್ಲಿ ಜಾಗೃತಿ ಮೂಡಿಸಿತ್ತು. ಆ ಬಳಿಕ ಅನೇಕ ಮಂದಿ ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿದ್ದರು. ಇದೀಗ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next