Advertisement

ಜಗತ್ತಿನೆಲ್ಲೆಡೆ ಹಬ್ಬಿದೆ ಪಿಎಫ್ಐ ಹೆಜ್ಜೆ: ಭಾರತ ವಿರೋಧಿ ಚಟುವಟಿಕೆಗೆ ಹಣ ಸಂಗ್ರಹ

09:21 PM Sep 23, 2022 | Team Udayavani |

ನವದೆಹಲಿ: ಎನ್‌ಐಎ ಮತ್ತು ಇ.ಡಿ.ಯಿಂದ ದಾಳಿಗೊಳಗಾಗಿರುವ ಪಿಎಫ್ಐನ ಬೇರುಗಳು ಜಗತ್ತಿನ ಬೇರೆ ಬೇರೆ ಕಡೆಗಳಲ್ಲೂ ವ್ಯಾಪಿಸಿರುವುದು ಬೆಳಕಿಗೆ ಬಂದಿದೆ. ಅಂದರೆ, ಯುಎಇ, ಒಮನ್‌, ಕತಾರ್‌, ಟರ್ಕಿ, ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಇದರ ಸಂಪರ್ಕ ಇದೆ ಎಂದೇ ಗುಪ್ತಚರ ಮೂಲಗಳು ಹೇಳಿವೆ.

Advertisement

ವಿದೇಶದಲ್ಲಿ ಮೂರು ಸಂಘಟನೆಗಳು

ಗುಪ್ತಚರ ಮೂಲಗಳ ಪ್ರಕಾರ, ಪಿಎಫ್ಐ ವಿದೇಶಗಳಲ್ಲಿ ಮೂರು ಸಂಘಟನೆಗಳನ್ನು ಹೊಂದಿದೆ.

  1. ಇಂಡಿಯಾ ಫ್ರೆಟರ್ನಿಟಿ ಫೋರಮ್‌(ಐಎಫ್ಎಫ್)
  2. ಇಂಡಿಯನ್‌ ಸೋಶಿಯಲ್‌ ಫೋರಮ್‌(ಐಎಸ್‌ಎಫ್)
  3. ರೆಹಾಬ್‌ ಇಂಡಿಯನ್‌ ಫೆಡರೇಶನ್‌(ಆರ್‌ಐಎಫ್)

ಈ ಮೂರು ಗಲ್ಫ್ ದೇಶಗಳಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ, ಈ ಸಂಘಟನೆಗಳು ಭಾರತ ವಿರೋಧಿ ಕೆಲಸಗಳನ್ನು ಮಾಡುತ್ತಿವೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಐಎಫ್ಎಫ್ ಮತ್ತು ಐಎಸ್‌ಎಫ್ ಮಿಡಲ್‌ ಈಸ್ಟ್‌ನಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಹಣ ಸಂಗ್ರಹ ಮಾಡುತ್ತಿವೆ. ಐಎಫ್ಎಫ್ ಸಂಘಟನೆಯು ಮಿಡಲ್‌ ಈಸ್ಟ್‌ನಲ್ಲಿ ಪಿಎಫ್ಐ ಪರವಾಗಿ ಹಣವನ್ನು ಸಂಗ್ರಹ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next