Advertisement

ಮತ್ತೆಂದೂ ತಲೆ ಎತ್ತದಂತೆ ಪಿಎಫ್ಐ ನಿಷೇಧಿಸಬೇಕು: ಯತ್ನಾಳ್

09:20 PM Sep 28, 2022 | Team Udayavani |

ವಿಜಯಪುರ: ದೇಶದ್ರೋಹಿ ಕಾರ್ಯದಲ್ಲಿ ತೊಡಗಿದ್ದ ಪಿಎಫ್ಐ ಸಂಘಟನೆ ಸೇರಿದಂತೆ ದೇಶ 8 ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವುದು ಸ್ವಾಗತಾರ್ಹ. ಆದರೆ ಈ ದೇಶ ವಿರೋಧಿ ಸಂಘಟನೆಗಳು ಭವಿಷ್ಯದಲ್ಲಿ ಬೇರೆಬೇರೆ ಹೆಸರಿನಲ್ಲಿ ಮತ್ತೆಂದೂ ತಲೆ ಎತ್ತದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

Advertisement

ಇದನ್ನೂ ಓದಿ: ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದ ಸಿಮಿ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಆದರೆ ಪಿಎಫ್ಐ- ಎಸ್ಡಿಪಿಐ ಸಂಘಟನೆ ಹೆಸರಿನಲ್ಲಿ ಮತ್ತೆ ಅದೇ ದೇಶದ್ರೋಹಿ ಜನರು ಸಕ್ರಿಯವಾಗಿದ್ದರು. ಈ ಸಂಘಟನೆಗಳ ನಿಷೇಧಕ್ಕೆ ದೇಶದಾದ್ಯಂತ ಭಾರಿ ಆಗ್ರಹ ಕೇಳಿಬಂದಿತ್ತು. ಕೇಂದ್ರ ಸರ್ಕಾರ ಜನರ ಭಾವನೆಗಳಿಗೆ ಕೊನೆಗೂ ಸ್ಪಂದಿಸಿದೆ ಎಂದರು.

ಭವಿಷ್ಯದಲ್ಲಿ ಭಾರತೀಯರು ನೆಮ್ಮದಿಯಿಂದ ಬದುಕಲು ಪ್ರಧಾನಿ ಮೋದಿ ಅವರು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ. ಹೀಗಾಗಿ ಸಹಜವಾಗಿ ಸಂತಸಕ್ಕೆ ಕಾರಣವಾಗಿದೆ ಎಂದರು.

ಈ ಎಲ್ಲ ಸಂಘಟನೆಗಳು ವ್ಯವಸ್ಥಿತವಾಗಿಯೇ ದೇಶದಲ್ಲಿ ದೇಶವಿರೋಧಿ ಕೃತ್ಯದಲ್ಲಿ ತೊಡಗಿದ್ದನ್ನು, ವಿದೇಶದಿಂದ ಆರ್ಥಿಕ ನೆರವು ಸಿಗುವುದನ್ಬು ಸಾಕ್ಷ್ಯಾಧಾರ ಸಹಿತವೇ ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ದೇಶಾದ್ಯಂತ ದಾಖಲೆ ರೀತಿಯಲ್ಲಿ ಎಲ್ಲೆಡೆ ದಾಳಿ ಮಾಡಿ ವಿದ್ರೋಹಿಗಳ ಹೆಡೆಮುರಿ ಕಟ್ಟುದ್ದಾರೆ. ದಾಳಿಯ ವೇಳೆ ಬಂಧಿತರ ಬಳಿ ಪುರಾವೆಗಳು ಸಿಕ್ಕಿವೆ, ದೇಶ ಒಡೆಯಲು ಸಾವಿರಾರು‌ ಕೋಟಿ ವಿದೇಶದಿಂದ ಬರುತ್ತಿರುವ ಅಂಶವೂ ಬಯಲಾಗಿದೆ. ಭಾರತದಲ್ಲಿ ವಿದ್ರೋಹಿ ಕೃತ್ಯ ನಡೆಸಲು ಪಾಕಿಸ್ಥಾನ, ಯುಎಇ ಜೊತೆಗೆ ಪಿಎಫ್ಐ ಸಂಬಂಧ ಇತ್ತು ಎಂದು ತಿಳಿಸಿದರು.

Advertisement

ದೇಶದ್ರೋಹಿ ಸಂಘಟನೆಗಳ ನಿಷೇಧದ ಬೆನ್ನಲ್ಲೇ ಆರ್ ಎಸ್ಎಸ್ ನಿಷೇಧಕ್ಕೆ ಮುಸ್ಲಿಂ ಸಂಘಟನೆಗಳು, ಮುಸ್ಲಿಂ ನಾಯಕರು ಆಗ್ರಹಿಸುವುದು ಹಾಸ್ಯಾಸ್ಪದ. ಆರ್ ಎಸ್ಎಸ್ ಸದಾ ದೇಶಭಕ್ತರನ್ನು ಸೃಷ್ಟಿಸುತ್ತಿರುವ ದೇಶಪ್ರೇಮಿ ಸಂಘಟನೆ. ಈ ಕಾರಣಕ್ಕೆ ದೇಶದ ಉನ್ನತ ಸ್ಥಾನದಲ್ಲಿರುವ ಬಹುತೇಕ ನಾಯಕರು ಆರ್.ಎಸ್.ಎಸ್. ಮೂಲದಿಂದಲೇ ಬಂದವರು. ಆರ್ ಎಸ್ಎಸ್ ಎಂದೂ ಸಣ್ಣ ಹಿಂಸಾಕೃತ್ಯದಲ್ಲಿ ತೊಡಗಿಲ್ಲ, ವಿದ್ರೋಹಿ ಕೃತ್ಯಕ್ಕೆ ಮದ್ದು-ಗುಂಡು ಸಂಗ್ರಹಿಸಿಲ್ಲ. ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಬೇರೆ ಧರ್ಮದ ಮೇಲೆ ಪ್ರಹಾರ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಈ ಹಿಂದೆ ಆರ್ ಎಸ್ಎಸ್ ಮೇಲಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿರುವುದೇ ಇದಕ್ಕೆ ಸಾಕ್ಷಿ. ಮುಂದಿನ ಐದು ವರ್ಷದಲ್ಲಿ ಪಿಎಫ್ಐ ಸೇರಿದಂತೆ ಎಲ್ಲ ಮತೀಯ ಹಾಗೂ ದೇಶದ್ರೋಹಿ ಸಂಘಟನೆಗಳನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.

ಮತ್ತೆ ಯಾವ ಹುತ್ತದಿಂದ ಯಾವ ಹಾವು ಬರುತ್ತೊ ಗೊತ್ತಿಲ್ಲ. ಹೀಗಾಗಿ ದೇಶದಲ್ಲಿ ಅಶಾಂತಿ ಸೃಷ್ಡಿಸಿ, ರಕ್ತಪಾತಕ್ಕೆ ಕಾರಣವಾಗುವ ಇಂಥ ಸಂಘಟನೆಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸಂಪೂರ್ಣ ಸರ್ವನಾಶ ಮಾಡಬೇಕು ಎಂದು ಶಾಸಕ ಯತ್ನಾಳ್ ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next