Advertisement

ಪಿಎಫ್ಐ. -ಆರ್.ಎಸ್.ಎಸ್. ಸಂಘಟನೆಗಳ ಹೋಲಿಕೆ ಮಾಡುವುದು ಸರಿ ಅಲ್ಲ: ಬಿ.ವೈ ವಿಜಯೇಂದ್ರ

01:31 PM Sep 30, 2022 | Team Udayavani |

ಹುಮನಾಬಾದ: ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ದೇಶಕ್ಕಾಗಿ ಶ್ರಮಿಸುವ ಆರ್.ಎಸ್.ಎಸ್. ಸಂಘಟನೆ ಹೋಲಿಕೆ ಮಾಡುವುದು ಸರಿ ಅಲ್ಲ. ಆರ್.ಎಸ್.ಎಸ್. ಸಂಘಟನೆ ಬಗ್ಗೆ ಮಾತಾಡಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿಲ್ಲ ಎಂದು ಕಾಂಗ್ರೆಸ್ ಮುಖಂಡರ ವಿರುದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.

Advertisement

ಶುಕ್ರವಾರ ತಾಲೂಕಿನ ಹುಡಗಿ ಗ್ರಾಮದಲ್ಲಿ ಎಸ್.ಟಿ ಮೋರ್ಚಾ ವತಿಯಿಂದ ಪ್ರಧಾನಿ ಮೋದಿ ಜನ್ಮದಿನದ ನಿಮಿತ್ತ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್. ನ ಹಿನ್ನೆಲೆ ಗೊತ್ತಿರದವರು ನಿಷೇದಿಸುವ ಕುರಿತು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಈ ರೀತಿ ಉಡಾಫೆ ಮಾತುಗಳು ಹೇಳುತ್ತಿದ್ದಾರೆ. ಇದೀಗ ಪಿಎಫ್ಐ ಸಂಘಟನೆ ಬ್ಯಾನ್ ಆಗಿದ್ದು, ಆರ್.ಎಸ್.ಎಸ್. ಸಂಘಟನೆಯನ್ನು ಪಿ.ಎಫ್.ಐ. ಜೊತೆಗೆ ‌ಹೋಲಿಕೆ ಮಾಡುವ ದುಸ್ಸಾಹಸ ಕಾಂಗ್ರೆಸ್‌ ಮುಖಂಡರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸಂಘವನ್ನು ಬ್ಯಾನ್ ಮಾಡಿದ ಸಂದರ್ಭದಲ್ಲಿ ಅದರ ಪರಿಣಾಮ ಏನಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘ ಎಲ್ಲಿಯೂ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ ಎಂಬುವುದು ತಿಳಿದುಕೊಳ್ಳಬೇಕು. ದೇಶ ಕಟ್ಟುವ ವಿಚಾರಧಾರೆಗಳು ಹೊಂದಿದೆ ಎಂದ ಅವರು, ಬಿಜೆಪಿ ಪಕ್ಷದಲ್ಲಿನ ನಾಯಕರು ಸಂಘದಿಂದ ಬೆಳೆದು ಬಂದಿದ್ದಾರೆ ಎಂದರು. ಕಾಂಗ್ರೆಸ್‌ನ ಭಾರತ್ ಜೋಡು ಯಾತ್ರೆಯಿಂದ ಬಿಜೆಪಿ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಬಸವ ಕಲ್ಯಾಣ ಶಾಸಕ ಶರಣು ಸಲಗಾರ, ಬಿಜೆಪಿ ಮುಖಂಡರಾದ ಬಾಬುವಾಲಿ, ಬಸವರಾಜ ಆರ್ಯ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಈಶ್ಚರ ಸಿಂಗ್ ಠಾಕೂರ್, ಸೋಮನಾಥ ಪಾಟೀಲ, ಡಾ। ಸಿದ್ದಲಿಂಗಪ್ಪ ಪಾಟೀಲ, ಚಂದು ಪಾಟೀಲ, ಪದ್ಮಾಕರ್ ಪಾಟೀಲ, ಸುಭಾಷ್ ಗಂಗಾ, ಪ್ರಭಾಕಾರ ನಾಫರಾಳೆ, ಮಹೇಶ ಪಾಲಂ, ಗುಂಡುರೆಡ್ಡಿ, ವಿಶ್ವನಾಥ ಪಾಟೀಲ, ನಾಗೇಶ ಕಲ್ಲೂರ್, ಎಸ್.ಟಿ ಮೋರ್ಚಾ ಮುಖಂಡ ದಯಾನಂದ ಮೇತ್ರೆ, ಪ್ರಕಾಶ ತಾಳಮಡಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next