Advertisement

ಬಿಹಾರದಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿ ನಡೆಸಲು ಪಿಎಫ್ ಐ ಸಂಚು ರೂಪಿಸಿತ್ತು: ಇ.ಡಿ ಆರೋಪ

12:05 PM Sep 24, 2022 | Team Udayavani |

ನವದೆಹಲಿ: ಕೆಲವು ದಿನಗಳ ಹಿಂದೆ ದೇಶಾದ್ಯಂತ ಪಿಎಫ್ ಐ ಕಚೇರಿಗಳ ಮೇಲೆ ಎನ್ ಐಎ, ಇ.ಡಿ ದಾಳಿ ನಡೆಸಿದ್ದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಜುಲೈನಲ್ಲಿ ಬಿಹಾರದ ಪಾಟ್ನಾದಲ್ಲಿನ ಸಮಾವೇಶದಲ್ಲಿ ಭಾಗವಹಿಸಿದ್ದ ವೇಳೆ ಪಿಎಫ್ ಐ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂಬುದಾಗಿ ಜಾರಿ ನಿರ್ದೇಶನಾಲಯ ಶನಿವಾರ (ಸೆಪ್ಟೆಂಬರ್ 24) ಆರೋಪಿಸಿದೆ.

Advertisement

ಇದನ್ನೂ ಓದಿ:ಇನ್ ದಿ ಏರ್.. ಶ್ರೀಶಾಂತ್ ಟೇಕ್ಸ್ ಇಟ್…: ಮೊದಲ ಟಿ20 ವಿಶ್ವಕಪ್ ಗೆಲುವಿಗೆ 15ರ ಸಂಭ್ರಮ

ಪಾಟ್ನಾದಲ್ಲಿ ದಾಳಿ ನಡೆಸುವ ಉದ್ದೇಶದ ಜೊತೆಗೆ ಏಕಕಾಲದಲ್ಲಿ ಉತ್ತರಪ್ರದೇಶದ ವಿವಿಧ ಸೂಕ್ಷ್ಮ ಸ್ಥಳಗಳಲ್ಲಿ ದಾಳಿ ನಡೆಸಲು ಮಾರಕ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿದೆ.

ಗುರುವಾರ ಕೇರಳದಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದ ವೇಳೆ ಪಿಎಫ್ ಐ ಸದಸ್ಯ ಶಫೀಖ್ ಪಾಯೆತ್ ಎಂಬಾತನನ್ನು ಬಂಧಿಸಿತ್ತು. ಆತ ವಿಚಾರಣೆ ಸಂದರ್ಭದಲ್ಲಿ, ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾಕ್ಕೆ ಭೇಟಿ ನೀಡಿದ ವೇಳೆ ದಾಳಿ ನಡೆಸಲು ಪಿಎಫ್ ಐ ತರಬೇತಿ ಶಿಬಿರ ನಡೆಸಿತ್ತು ಎಂದು ಬಾಯ್ಬಿಟ್ಟಿರುವುದಾಗಿ ಇ.ಡಿ ವಿವರಿಸಿದೆ.

ಪಾಯೆತ್ ಈ ಹಿಂದೆ ಕತಾರ್ ನಲ್ಲಿ ಉದ್ಯೋಗ ಮಾಡುತ್ತಿದ್ದ ವೇಳೆಯಲ್ಲಿ ತನ್ನ ಎನ್ ಐಆರ್ ಖಾತೆಯನ್ನು ಅಕ್ರಮವಾಗಿ ಬಳಸಿಕೊಂಡು ದೇಶದಲ್ಲಿ ಗಲಭೆ ಸೃಷ್ಟಿಸಲು ವಿದೇಶದಿಂದ ಭಾರತದಲ್ಲಿರುವ ಪಿಎಫ್ಐಗೆ ಹಣ ವರ್ಗಾವಣೆ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ದೂರಿದೆ.

Advertisement

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದರಿಂದ ಕಳೆದ ವರ್ಷ ಪಾಯೆತ್ ಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು ಎಂದು ಇ.ಡಿ. ತಿಳಿಸಿದೆ.

ಕೆಲವೇ ವರ್ಷಗಳಲ್ಲಿ ಪಿಎಫ್ ಐ ಖಾತೆಗಳಲ್ಲಿ 120 ಕೋಟಿಗೂ ಅಧಿಕ ಹಣ ಠೇವಣಿಯಾಗಿರಿಸಲಾಗಿದೆ. ಭಾರತ ಹಾಗೂ ವಿದೇಶದಿಂದ ಅನುಮಾನಾಸ್ಪದ ಮೂಲಗಳಿಂದ ಪಿಎಫ್ ಐ ಖಾತೆಗಳಿಗೆ ಹಣ ಜಮಾವಣೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next