Advertisement

ಜಡ್ಜ್ ಗಳು, ಪೊಲೀಸ್‌ ಅಧಿಕಾರಿಗಳೂ ಟಾರ್ಗೆಟ್‌!

10:41 PM Sep 29, 2022 | Team Udayavani |

ನವದೆಹಲಿ: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯು ತನ್ನ ಸದಸ್ಯರಿಗೆ ಟಾರ್ಗೆಟೆಡ್‌ ಹತ್ಯೆಗೆ ಪ್ರಚೋದನೆ ನೀಡು ತ್ತಿತ್ತು! ಹೈಕೋರ್ಟ್‌ ಜಡ್ಜ್ಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು, ಅಹಮದೀಯ ಪಂಗಡದ ಮುಸ್ಲಿಮರು ಕೂಡ ಇವರ ಟಾರ್ಗೆಟ್‌ ಆಗಿದ್ದರು!

Advertisement

ಸಂಘಟನೆ ನಿಷೇಧಗೊಂಡ ಬೆನ್ನಲ್ಲೇ ತನಿಖಾ ಸಂಸ್ಥೆಗಳು ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.  ದಕ್ಷಿಣದ ರಾಜ್ಯಗಳ ಸುಮಾರು 15 ಯುವಕರು ಜಾಗತಿಕ ಉಗ್ರ ಸಂಘಟನೆ ಐಸಿಸ್‌ ಪರ ಆಕರ್ಷಿತರಾಗಿದ್ದರು. ದೇಶವಿರೋಧಿ ಕೃತ್ಯಗಳನ್ನು ಯುವಕರನ್ನು ನೇಮಕ ಮಾಡಲು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಲಾಗುತಿತ್ತು. ತಮಿಳುನಾಡಿನ ಪ್ರವಾಸಿ ತಾಣವಾದ ವಟ್ಟಕ್ಕನಾಲ್‌ಗೆ ಭೇಟಿ ನೀಡುವ ವಿದೇಶಿಯರು ವಿಶೇಷವಾಗಿ ಯೆಹೂದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲೂ ಪಿಎಫ್ಐ ಸಂಚು ರೂಪಿಸಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಹೇಳಿದೆ.

ವಟ್ಟಕ್ಕನಾಲ್‌ ಎನ್ನುವುದು ತ.ನಾಡಿನ ದಿಂಡಿಗಲ್‌ ಜಿಲ್ಲೆಯ ಹಿಲ್‌ ಸ್ಟೇಷನ್‌. ಇಸ್ರೇಲ್‌ನಲ್ಲಿ ಕಡ್ಡಾಯ ಸೇನಾ ತರಬೇತಿ ಪಡೆಯುವ ಯೆಹೂದಿ ಯುವಕರು ತರಬೇತಿಯ ಬಳಿಕ ಪ್ರತಿ ವರ್ಷ ಇಲ್ಲಿಗೆ ಬಂದು ಕೆಲವು ದಿನ ತಂಗುತ್ತಾರೆ. ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಪಿಎಫ್ಐ ಉದ್ದೇಶವಾಗಿತ್ತು.

ಇನ್ನು, ಅನ್ಸಾರುಲ್‌ ಖೀಲಾಫಾ ಕೇರಳ ಎಂಬ ಸಂಸ್ಥೆಯು ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರು ವಂತೆ ಪ್ರಚೋದಿಸುವ, ರಹಸ್ಯವಾಗಿ ನೇಮಕಾತಿ ಅಭಿಯಾನ ನಡೆಸುವ ಕೆಲಸ ಮಾಡುತ್ತಿತ್ತು. ದಿ ಗೇಟ್‌, ಬಾಬ್‌ ಅಲ್‌ ನೂರ್‌, ಪ್ಲೇಗ್ರೌಂಡ್‌ ಎಂಬಿತ್ಯಾದಿ ಟೆಲಿಗ್ರಾಂ ಗ್ರೂಪ್‌ಗ್ಳನ್ನೂ ರಚಿಸಿತ್ತು ಎಂದೂ ಎನ್‌ಐಎ ತಿಳಿಸಿದೆ.

ಇದೇ ವೇಳೆ, ಅಲ್‌ಖೈದಾ ಜಿಹಾದಿಗಳಿಗೆ ಶಸ್ತ್ರಾಸ್ತ್ರಗ ಳನ್ನು ಪೂರೈಸುತ್ತಿದ್ದ ಟರ್ಕಿಯ ಸಂಘಟನೆಯೊಂದಿಗೆ ಪಿಎಫ್ಐ ನಾಯಕರು ನಂಟು ಹೊಂದಿದ್ದರು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಕಚೇರಿಗಳಿಗೆ ಬೀಗಮುದ್ರೆ: ನಿಷೇಧದ ಬೆನ್ನಲ್ಲೇ ಗುರುವಾರ ಅಸ್ಸಾಂನ ಪಿಎಫ್ಐ ಕಚೇರಿಗಳಿಗೆ ಬೀಗಜ ಡಿಯಲಾಗಿದೆ. ಸೆ.27ರ ಬಳಿಕ ಯಾರನ್ನೂ ಬಂಧಿಸಿಲ್ಲ. ಆದರೆ, ಪ್ರತಿ ಸದಸ್ಯನ ಮೇಲೂ ಕಣ್ಣಿಟ್ಟಿ ದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ಪಿಎಫ್ಐ ಮೇಲಿನ ನಿಷೇಧವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಕೇರಳ, ತಮಿಳುನಾಡು, ರಾಜಸ್ಥಾನ ಸೇರಿ ದಂತೆ ಹಲವು ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿವೆ.

ಬೆದರಿಕೆ ಪತ್ರ: ತಮಿಳುನಾಡಿನ ಪೊಲ್ಲಾಚಿ ನಗರದ ಸಮೀಪ 16 ಕಡೆ ಪೆಟ್ರೋಲ್‌ ಬಾಂಬ್‌ ಸ್ಫೋಟಿ ಸುವು ದಾಗಿ ಗುರುವಾರ ಪೊಲೀಸರಿಗೆ ಬೆದರಿಕೆ ಪತ್ರ ಬಂದಿದೆ. ಎಸ್‌ಡಿಪಿಐ, ಪಿಎಫ್ಐ ಹೆಸರಲ್ಲಿ ಈ ಪತ್ರ ಬಂದಿದ್ದು, ತನಿಖೆ ಆರಂಭಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

5.2 ಕೋಟಿ ಜಮೆ ಮಾಡಿ: ಸೆ.23ರ ಹರತಾಳದ ವೇಳೆ ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಉಂಟಾದ ನಷ್ಟದ ಮೊತ್ತವಾಗಿ 5.2 ಕೋಟಿ ರೂ.ಗಳನ್ನು ಕೇರಳ ಗೃಹ ಇಲಾಖೆಯಲ್ಲಿ ಠೇವಣಿ ಇಡುವಂತೆ ನಿಷೇಧಿತ ಪಿಎಫ್ಐ ಸಂಘಟನೆ ಮತ್ತು ಅದರ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಕೇರಳ ಹೈಕೋರ್ಟ್‌ ಸೂಚಿಸಿದೆ. ಹರತಾಳ ಸಂಬಂಧಿ ಎಲ್ಲ ಹಿಂಸಾಚಾರಗಳಿಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಸತ್ತಾರ್‌ ಅವರೇ ಹೊಣೆ ಎಂದೂ ಹೈಕೋರ್ಟ್‌ ಹೇಳಿದೆ.

ಸರ್ಕಾರಿ ಹುದ್ದೆಯಲ್ಲಿದ್ದುಕೊಂಡೇ ಅಜೆಂಡಾ ಸಾಧನೆ! :

ಇತ್ತೀಚೆಗೆ ನಡೆದ ದಾಳಿಯಲ್ಲಿ ಬಂಧಿತರಾದ ಪಿಎಫ್ಐ ನಾಯಕರು, ಸದಸ್ಯರು ಸಾಮಾನ್ಯರಂತೆ ಬದುಕುತ್ತಿದ್ದರು. 2047ರೊಳಗೆ ಭಾರತವನ್ನು ಇಸ್ಲಾಮಿಕ್‌ ರಿಪಬ್ಲಿಕ್‌ ಆಗಿ ಬದಲಾಯಿಸುವುದು ಅವರ ಅಜೆಂಡಾವಾಗಿತ್ತು. ಈ ಅಜೆಂಡಾವನ್ನು ಮರೆಮಾಚಲೆಂದೇ ಸರ್ಕಾರಿ ಹುದ್ದೆ, ಉದ್ಯೋಗಗಳನ್ನು ಗಿಟ್ಟಿಸಿಕೊಂಡಿದ್ದರು. ಪಿಎಫ್ಐ ನಾಯಕರಾದ ಓಮಾ ಸಲಾಂ, ಅಬ್ದುರ್‌ರೆಹಮಾನ್‌, ನಜರುದ್ದೀನ್‌, ಪಿ ಕೋಯಾ ಮತ್ತಿತರರು ಸರ್ಕಾರಿ ಹುದ್ದೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಮತ್ತು ಕಾಲೇಜುಗಳ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಕರ್ನಾಟಕದಲ್ಲಿ ಬಂಧಿತರಾದ ಅಬ್ದುಲ್‌ ವಾಹಿತ್‌ ಸೇಟ್‌, ಅನೀಸ್‌ ಅಹ್ಮದ್‌ ಟೆಕಿಗಳಾಗಿದ್ದರು.

ಟ್ವಿಟರ್‌ ಖಾತೆ ಡಿಲೀಟ್‌ :

ಪಿಎಫ್ಐ ಸಂಘಟನೆಯ ಟ್ವಿಟರ್‌ ಖಾತೆಯನ್ನು ಗುರುವಾರ ಅಳಿಸಿಹಾಕಲಾಗಿದೆ. 5 ವರ್ಷಗಳ ಅವಧಿಗೆ ಸಂಘಟನೆ ನಿಷೇಧಗೊಂಡ ಹಿನ್ನೆಲೆ ಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. “ಖಾತೆಗಳನ್ನು ತಡೆಹಿಡಿಯಲಾಗಿದೆ. ಪಿಎಫ್ಐ ನಾಯಕರ ಖಾತೆಗಳನ್ನು ಕಾನೂನಾತ್ಮಕ ಬೇಡಿಕೆಗೆ ಅನುಗುಣ ವಾಗಿ ತಡೆಹಿಡಿದಿದ್ದೇವೆ’ ಎಂಬ ಸಂದೇಶವನ್ನು ಪೇಜ್‌ನಲ್ಲಿ ಹಾಕಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next