Advertisement

EPF ಠೇವಣಿ ಮೇಲಿನ ಬಡ್ಡಿದರ ಶೇ.8.1ಕ್ಕೆ ಇಳಿಕೆ; 5 ಕೋಟಿ ಠೇವಣಿದಾರರ ಮೇಲೆ ಪರಿಣಾಮ

02:56 PM Mar 12, 2022 | Team Udayavani |

ನವದೆಹಲಿ: 2021-22ನೇ ಆರ್ಥಿಕ ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿದರವನ್ನು ಶೇ.8.1ಕ್ಕೆ ಇಳಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಶನಿವಾರ (ಮಾರ್ಚ್ 12) ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

Advertisement

ಇದನ್ನೂ ಓದಿ:ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡುತ್ತಾರೆ : ಎಚ್.ಡಿ.ದೇವೇಗೌಡ

ಇದು ಕಳೆದ ನಾಲ್ಕು ದಶಕಗಳಲ್ಲಿನ ಅತೀ ಕಡಿಮೆ ಬಡ್ಡಿದರವಾಗಿದ್ದು, ಇದರಿಂದಾಗಿ ಸುಮಾರು 5 ಕೋಟಿ ಇಪಿಎಫ್ ಠೇವಣಿದಾರರ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ. ಇಪಿಎಫ್ ಒನ ಕೇಂದ್ರ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ಹೇಳಿದೆ.

2020-21ನೇ ಹಣಕಾಸು ವರ್ಷದಲ್ಲಿ ಭವಿಷ್ಯನಿಧಿ ಠೇವಣಿಗೆ ಶೇ.8.5ರಷ್ಟು ಬಡ್ಡಿದರ ನೀಡಲು ಇಪಿಎಫ್ ಒ ಮಂಡಳಿ ಕಳೆದ ವರ್ಷ ಮಾರ್ಚ್ ನಲ್ಲಿ ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರ ಕಾರ್ಮಿಕ ಸಚಿವ ಮತ್ತು ಉದ್ಯಮ ಹಾಗೂ ಉದ್ಯೋಗಳ ಪ್ರತಿನಿಧಿಗಳನ್ನೊಳಗೊಂಡ ಸಿಬಿಟಿ ನೇತೃತ್ವದ ಮಂಡಳಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು.

ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆದ ಪರಿಣಾಮ ನಿವೃತ್ತಿ ನಿಧಿ ಮಂಡಳಿ ಸಮಸ್ಯೆಯನ್ನು ಎದುರಿಸುವಂತಾಗಿತ್ತು. ಕಳೆದ ವರ್ಷ ಡಿಸೆಂಬರ್ 31ರೊಳಗೆ ಅಂದಾಜು 56.76 ಲಕ್ಷ ಕ್ಲೇಮ್ ಗಳಲ್ಲಿ 14,310.21 ಕೋಟಿ ರೂಪಾಯಿಯಷ್ಟು ಹಣವನ್ನು ಇಪಿಎಫ್ ಒ ಪಾವತಿ ಮಾಡಿರುವುದಾಗಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next