ನವದೆಹಲಿ: ಭವಿಷ್ಯ ನಿಧಿ(ಪಿಎಫ್) ರಿಟರ್ನ್ಸ್ ಅನ್ನು ಆಧಾರ್ ದೃಢೀಕೃತ ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್)ಯೊಂದಿಗೆ ಫೈಲ್ ಮಾಡುವುದನ್ನು ಕಡ್ಡಾಯಗೊಳಿಸಿ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಹೊರಡಿಸಿದ್ದ ಆದೇಶದ ಅನುಷ್ಠಾನವನ್ನು ಮುಂದೂಡಲಾಗಿದೆ.
ಪ್ರಸಕ್ತ ವರ್ಷದ ಡಿಸೆಂಬರ್ 31ರವರೆಗೂ ಇದರ ಅನುಷ್ಠಾನವನ್ನು ವಿಸ್ತರಿಸಲಾಗಿದ್ದು, ಇದು ಈಶಾನ್ಯ ಭಾಗದ ಎಲ್ಲ 7 ರಾಜ್ಯಗಳು ಹಾಗೂ ಕಟ್ಟಡ, ನಿರ್ಮಾಣ, ತೋಟಗಾರಿಕೆಯಂಥ ನಿರ್ದಿಷ್ಟ ವರ್ಗದ ಕೈಗಾರಿಕೆಗಳಿಗೆ ಮಾತ್ರವೇ ಇದು ಅನ್ವಯವಾಗುತ್ತದೆ.
ಇದರಿಂದಾಗಿ ಉದ್ಯೋಗಿಗಳಿಗೆ ತಮ್ಮ ಪಿಎಫ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಇನ್ನಷ್ಟು ಕಾಲಾವಕಾಶ ದೊರೆತಂತಾಗಿದೆ.
ಈ ಹಿಂದೆ ಇಪಿಎಫ್ಒ, ಯುಎಎನ್ ಜೊತೆ ಆಧಾರ್ ಲಿಂಕ್ ಮಾಡಲು ಇರುವ ಗಡುವನ್ನು ಎಲ್ಲ ಚಂದಾದಾರರಿಗೂ ಸೆ.1ರವರೆಗೆ ವಿಸ್ತರಿಸಿತ್ತು. ಈಗ ಎರಡನೇ ಬಾರಿಗೆ ಸೀಮಿತ ರಾಜ್ಯಗಳಿಗೆ ಮತ್ತು ಕೈಗಾರಿಕೆಗಳಿಗೆ ಈ ಗಡುವನ್ನು ವಿಸ್ತರಿಸಲಾಗಿದೆ.