Advertisement

ವಿಡಿಯೋ…: ಕಾರಿನ ಮೇಲೊಂದು ಅಂಗಡಿಯ ಮಾಡಿ…ವಾಹ್! ಎಂಥಾ ಐಡಿಯಾ ಮಾರ್ರೆ

03:33 PM Nov 25, 2022 | Team Udayavani |

ಮನುಷ್ಯನ ತಲೆ ಹೇಗೆಲ್ಲಾ ಓಡಾಡುತ್ತದೆ ಎಂಬುದಕ್ಕೆ ಇಲ್ಲಿಯ ಚಿತ್ರವೇ ಒಳ್ಳೆಯ ಉದಾಹರಣೆ.. ಹೊಸ ಹೊಸ ತಂತ್ರಜ್ಞಾನ ಬಂದಂತೆಲ್ಲಾ ಜನ ಅದಕ್ಕೆ ಸಮನಾಗಿ ಹೊಂದಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲದೆ ಕೆಲವು ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರಲ್ಲೂ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ.

Advertisement

ನೀವೀಗ ನೋಡುತ್ತಿರುವ ಚಿತ್ರ ಲಕ್ನೋ ಪ್ರದೇಶದ್ದು ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ, ಕೆಲವೊಂದು ಮಂದಿ ಇಂತಹ ವ್ಯವಸ್ಥೆ ನಾನು ನೋಡಿಯೇ ಇಲ್ಲ ಎಂದು ಬರೆದುಕೊಂಡಿದ್ದಾರೆ, ಈ ಆವಿಷ್ಕಾರ ಮಾಡಿದವನಿಗೊಂದು ನಮಸ್ಕಾರ ಎಂದು ಇನ್ನೊಂದಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ ಈ ಚಿತ್ರವನ್ನು ಐಪಿಎಸ್ ಅಧಿಕಾರಿ ಪಂಕಜ್ ನೈನ್ ಎಂಬವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾರುತಿ 800 ಕಾರಿನ ಮೇಲ್ಬಾಗವನ್ನು ಕತ್ತರಿಸಿ ಪಾನ್ ಶಾಪ್ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದೊಂದು ವ್ಯಾಪಾರ ಮಾಡುವ ಹೊಸ ವಿಧಾನವೂ ಹೌದು ಎನ್ನಬಹುದು, ವ್ಯಾಪಾರಿಗಳು ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ರೀತಿಯಲ್ಲಿ ಆಲೋಚನೆ ಮಾಡುತ್ತಾರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋದಿಂದಾಗಿ ಹೆಚ್ಚಿನ ಮಂದಿ ಇಲ್ಲಿಗೆ ಬಂದು ಪಾನ್ ಖರೀದಿಸುತ್ತಿದ್ದಾರಂತೆ.

ಅಷ್ಟೇ ಅಲ್ಲದೆ ಒಂದು ವೇಳೆ ಅಂಗಡಿ ಸ್ಥಳಾಂತರ ಮಾಡುವ ಸಂದರ್ಭ ಬಂದರೂ ಯಾವುದೇ ತೊಂದರೆ ಇಲ್ಲದೆ ಇನ್ನೊಂದು ಕಡೆಗೆ ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ.

Advertisement

ಏನೇ ಆಗಲಿ ಕಾರನ್ನು ಉಪಯೋಗಿಸಿ ಹೊಸ ಆವಿಷ್ಕಾರ ಮಾಡಿದ ವ್ಯಕ್ತಿಗೆ ನಮ್ಮದೊಂದು ಮೆಚ್ಚುಗೆ ಇದೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಆಪ್ ನಾಯಕ ಸಂದೀಪ್ ಭಾರದ್ವಾಜ್ ಶವ ಪತ್ತೆ! ತನಿಖೆಗೆ ಬಿಜೆಪಿ ಒತ್ತಾಯ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next