Advertisement

180 ಸ್ಥಳಗಳಲ್ಲಿ ಇಂಧನ ಉಳಿತಾಯ ಜಾಗೃತಿ

04:38 PM May 08, 2022 | Team Udayavani |

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಗಾಣದಾಳು, ದೊಡ್ಡಬಿದರೆ, ಕೆಂಕೆರೆ, ತಿಮ್ಮನಹಳ್ಳಿ, ಬರಗೂರು, ಮತ್ತಿ ಘಟ್ಟ, ರಾಮನಹಳ್ಳಿ ಮತ್ತಿತರರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 180 ಸ್ಥಳಗಳಲ್ಲಿ 20 ದಿನಗಳ ಕಾಲ ಇಂಧನ ಉಳಿತಾಯ ಜಾಗೃತಿ ಸಭೆ ನಡೆಯಿತು.

Advertisement

ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಪೆಟ್ರೋಲಿಯಂ ಉತ್ಪಾದನೆ ಮತ್ತು ಸಂಶೋಧನಾ ಸಂಸ್ಥೆ ರೂಪಿತ ಜನಜಾಗೃತಿ ಆಂದೋಲನವು ಕರ್ನಾಟಕದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಬಾನು ಗೊಂದಿಯ ಸಂಸ್ಥೆಯ ಉಸ್ತುವಾರಿಯಲ್ಲಿ ತಾಲೂಕಿನಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆದವು.

ರೈತರು, ರೈತ ಮಹಿಳೆಯರು, ರೈತ ಸಂಘಟನೆ ನಾಯಕರು, ಕಾರ್ಮಿಕರು, ವಿದ್ಯಾರ್ಥಿಗಳು, ಹಾಲು ಉತ್ಪಾದಕರು ಮತ್ತು ಸಾರ್ವಜನಿಕರ ನಡುವೆ ನಡೆದ ಸಭೆಗಳಲ್ಲಿ ಉಪನ್ಯಾಸ, ಸಂವಾದ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮುಂತಾದ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಯಗಚಿಹಳ್ಳಿ, ಕೆ.ಎಸ್‌.ಪಾಳ್ಯದಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಕಾಲ್ನಡಿಗೆ ಜಾಥಾದ ಮೂಲಕ ಅರಿವು ಮೂಡಿಸಿದರು.

ಪೆಟ್ರೋಲ್‌, ಡೀಸೆಲ್‌ ನಂತಹ ಮತ್ತೆ ಪುನರ್‌ ನವೀಕರಿಸಲಾಗದ ಇಂಧನಗಳನ್ನು ಉಳಿತಾಯ ಮಾಡು ವಂತಹ ಅತ್ಯಗತ್ಯವಾದ ಸಕಾಲಿಕ ಸಂದೇಶ ವನ್ನು ಸೀಕೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಹರೀಶ್‌ಕುಮಾರ್‌ ಮಾರ್ಗ ದರ್ಶನದಡಿ ಮಾಸ್‌ ಟ್ರಸ್ಟ್‌ ಮುಖ್ಯಸ್ಥೆ ಎನ್‌.ಇಂದಿರಮ್ಮ ಮತ್ತು ಸುವರ್ಣ ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಅವರ ಮುಂದಾಳತ್ವದಲ್ಲಿ ನಡೆಯಿತು.

ಸಂವಹನಕಾರರಾಗಿ ಹುಳಿಯಾರು ಸೃಜನ ಅಧ್ಯಕ್ಷೆ ಪೂರ್ಣಮ್ಮ, ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಬಸವರಾಜು, ಸುವರ್ಣ ವಿದ್ಯಾಚೇತನದ ಉಪಾಧ್ಯಕ್ಷ ಕಲ್ಲೇನಹಳ್ಳಿ ಶಿವಕುಮಾರ್‌, ಕಾರ್ಯದರ್ಶಿ ಎಚ್‌. ಆರ್‌.ಯುವರಾಜ್‌, ಸಂಚಾಲಕ ಶಿವಕುಮಾರ್‌(ಗುರು), ಸಾವಯವ ಕೃಷಿ ಬಳಗದ ಕುಪ್ಪೂರು ಪ್ರಭಾಕರ್‌, ಸಾಕ್ಷರ ಬಳಗದ ಅಣೆಕಟ್ಟೆ ಕವಿತಾ ಕಾರ್ಯಕ್ರಮ ಸಂಘಟಿಸಿ ಯಶಸ್ವಿಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next