Advertisement

ಪ್ರತಿ ಲೀಟರ್‌ ಗೆ 100 ರೂ. ತಲುಪಿದ ಪೆಟ್ರೋಲ್ ದರ!

03:23 PM Oct 05, 2021 | Team Udayavani |

ಪಣಜಿ: ಗೋವಾದಲ್ಲಿ ಇದೆ ಮೊದಲ ಬಾರಿಗೆ ಪೆಟ್ರೋಲ್ ದರ 100 ರೂ. ಗೆ ತಲುಪಿದೆ. ರವಿವಾರ ರಾತ್ರಿಯಿಂದ ಗೋವಾದಲ್ಲಿ ಪೆಟ್ರೋಲ್ ದರ 100.03 ರೂಗೆ ತಲುಪಿದೆ. ಡೀಸೆಲ್ ದರ 95.99 ರೂ ಗೆ ತಲುಪಿದೆ.

Advertisement

ಇದನ್ನೂ ಓದಿ:ಅಜೆಕಾರು ಗ್ರಾಮ ಸಭೆಯಲ್ಲಿ ಮಾತಿನ ಚಕಮಿಕಿ, ಹೊಡೆದಾಟ

2012 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದಿ. ಮನೋಹರ್ ಪರೀಕರ್ ಗೋವಾದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಟ್ಯಾಕ್ಸ್ ತೆಗೆದುಹಾಕಿದ್ದರಿಂದ ದೇಶದಲ್ಲಿಯೇ ಸುಮಾರು 20 ರೂ. ಕಡಿಮೆ ದರದಲ್ಲಿ ಗೋವಾದಲ್ಲಿ ಪೆಟ್ರೋಲ್ ಲಭಿಸುವಂತಾಗಿತ್ತು. ನಂತರ ಗೋವಾ ಸರ್ಕಾರ ಹಂತ ಹಂತವಾಗಿ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಾ ಬಂದಿತ್ತು. ಇದೀಗ ದೇಶಾದ್ಯಂತ ಪೆಟ್ರೋಲ್ ಬೆಲೆ ಏರಿಕೆಯಾದಂತೆಯೇ ಗೋವಾದಲ್ಲಿಯೂ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 100 ರೂ. ಗಡಿ ದಾಟಿದೆ.

Advertisement

Udayavani is now on Telegram. Click here to join our channel and stay updated with the latest news.

Next