ಶಿವಮೊಗ್ಗ: ಜಿಲ್ಲೆಯಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದ್ದು, ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಇದೀಗ ಪೆಟ್ರೋಲ್ ದರ 100.14 ರೂ. ಗಳಾಗಿದ್ದು, ಡಿಸೇಲ್ ಬೆಲೆ 92.87 ರೂ.ಗೆ ಬಂದು ತಲುಪಿದೆ. ಪವರ್ ಪೆಟ್ರೋಲ್ 103.69 ರೂ. ಟರ್ಬೋಜೆಟ್ 96.20 ರೂ. ಆಗಿದೆ ಎಂದು ವರದಿ ತಿಳಿಸಿದೆ.
ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧವೇ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ 100 ರೂ. ಗಡಿ ದಾಟಿದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದರಿಂದ ಯಾವ ಸರ್ಕಾರ ಬಂದರೂ ಬೆಲೆ ಏರಿಕೆಗೆ ಕಡಿವಾಣ ಹಾಕುವುದಿಲ್ಲವೆಂಬುದು ಸ್ಪಷ್ಟ ಎಂದು ಜನಸಾಮಾನ್ಯರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಮಹಿಳಾ ರೋಗಿ ಮೇಲೆ ಬಲಾತ್ಕಾರ ಯತ್ನ ಆರೋಪ
ಪಂಚರಾಜ್ಯದ ಚುನಾವಣೆ ಫಲಿತಾಂಶ ಮೇ.2 ರಂದು ಪ್ರಕಟವಾಗುತ್ತಿದ್ದಂತೆ 94.55 ರೂ.ಗಳಿದ್ದ ಪೆಟ್ರೋಲ್ ದರ ಜೂನ್.9 ರಂದು ಶತಕ ಬಾರಿಸಿದೆ. 37 ದಿನಗಳಲ್ಲಿ 5.45 ರೂ ಏರಿಕೆಯಾಗಿದೆ.
ಇದನ್ನೂ ಓದಿ: ದಿನಭವಿಷ್ಯ: ಈ ರಾಶಿಯ ಯುವಕ-ಯುವತಿಯರು ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿಯಾರು !