ಪೆಟ್ರೋಲ್‌ಗೆ 29 ಪೈಸೆ ಏರಿಕೆಯಾಗಿ 90.22 ರೂ., ಪ್ರತೀ ಲೀಟರ್ ಡೀಸೆಲ್‌ಗೆ 30 ಪೈಸೆ ಏರಿ 82.13 ರೂ. ಆಗಿದೆ. ಇದರಿಂದ ತೈಲೋತ್ಪನ್ನಗಳ ದರ ಮತ್ತೂಮ್ಮೆ ಗರಿಷ್ಠ ಮಟ್ಟಕ್ಕೆ ಏರಿದಂತಾಗಿದೆ. ಉದ್ಯಾನ ನಗರಿಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ 90 ರೂ. ದಾಟಿದೆ.
Advertisement
ಏರಿಕೆಯ ಹಾದಿಜ. 6ರ ಬಳಿಕ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಾ ಬಂದಿದೆ. ಪ್ರಸಕ್ತ ತಿಂಗಳಿನಲ್ಲಿಯೇ ಪೆಟ್ರೋಲ್ ದರ 1 ರೂ.ನಷ್ಟು ಹೆಚ್ಚಾಗಿದ್ದರೆ, ಈ ವರ್ಷದ ಆರಂಭದ ಬಳಿಕ 3.6 ರೂ. ಏರಿದೆ. ಡೀಸೆಲ್ ದರವೂ ಕಳೆದ ತಿಂಗಳ ಆರಂಭದಿಂದ 3.61 ರೂ. ಏರಿದೆ. ಈ ಪೈಕಿ ತೆರಿಗೆ ಪ್ರಮಾಣವೇ ಶೇ. 61.3ರಷ್ಟು ಇದೆ.
ಈ ತಿಂಗಳು ಮತ್ತು ಮುಂದಿನ ತಿಂಗಳು ಸೌದಿ ಅರೇಬಿಯಾವು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಕಚ್ಚಾ ತೈಲ ದರದಲ್ಲಿ ಏರಿಕೆಯಾಗತೊಡಗಿದೆ. ಒಪೆಕ್ ರಾಷ್ಟ್ರಗಳಿಂದಲೂ ಇದೇ ಮಾದರಿಯ ನಿರ್ಧಾರ ಘೋಷಣೆಯಾಗಿತ್ತು. ದರ ಎಲ್ಲಿ ಎಷ್ಟು?
Related Articles
Advertisement